ಕಲಬುರಗಿ: ನಗರದ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಸಂಸ್ಥೆಯ ಸಂಸ್ಥಾಪಕ ಪೆÇ್ರ. ಚನ್ನಾರಡ್ಡಿ ಪಾಟೀಲ ಅವರು ಉದ್ಘಾಟಿಸಿ ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಅವರ ಜೀವನ ಸಾಧನೆ ಕುರಿತು ಮಾತನಾಡಿ, ಅಂದಿನ ಕಾಲದ ಸಮಾಜದಲ್ಲಿ ಅಕ್ಷರದ ಅರಿವಿನ ಶಿಕ್ಷಣದಿಂದ ವಂಚಿತರಾದ ಹೆಣ್ಣು ಮಕ್ಕಳಿಗೆ ಶಿಕ್ಷಣದ ಅರಿವನ್ನು ಮೂಡಿಸಬೇಕೆಂಬ ಛಲದೊಂದಿಗೆ ಸಮಾಜದ ವಿರೋಧವನ್ನು ಎದುರಿಸಿ ಅನೇಕ ಸಂಕಷ್ಟಗಳನ್ನು ಸಹಿಸಿ ಹೆಣ್ಣು ಮಕ್ಕಳಿಗೆ ಪೆÇ್ರೀತ್ಸಾಹಿಸಿ ಅವರಿಗೆ ಅಕ್ಷರದ ಅರಿವನ್ನು ಮೂಡಿಸುವುಲ್ಲಿ ಯಶಸ್ವಿಯಾದ ಒಬ್ಬ ಧೀಮಂತ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಎಂದು ಬಣ್ಣಿಸಿದರು.
ವಿಶೇಷ ಉಪನ್ಯಾಸ ನೀಡಿದ ಶ್ರೀಮತಿ ಡಾ. ವಿದ್ಯಾವತಿ ಪಾಟೀಲ ಮಾತನಾಡಿ, ಸಾವಿತ್ರಿಬಾಯಿ ಫುಲೆ ಅವರು ಸಮಾಜದಲ್ಲಿರುವ ನಾಲ್ಕು ಗೋಡೆಗಳ ಮಧ್ಯದಲ್ಲಿರುವ ಹೆಣ್ಣು ಮಕ್ಕಳ ಅಂಧಕಾರದ ಬದುಕನ್ನು ಅಕ್ಷರವೆಂಬ ಜ್ಯೋತಿಯಿಂದ ಬೆಳಗಿಸಬೇಕೆಂದು ನಿರ್ಧರಿಸಿ ಸಮಾಜ ವಿರೋಧ ಕಟ್ಟಿಕೊಂಡು ಹೆಣ್ಣುಮಕ್ಕಳ ಬಾಳಿನಲ್ಲಿ ನಂದಾದೀಪವಾಗಿ ಪ್ರಜ್ವಲಿಸಿದರು ಎಂದರು.
ಕಾಲೇಜಿನ ಪ್ರಾಚಾರ್ಯ ಎಂ.ಸಿ.ಕಿರೇದಳ್ಳಿ ಮಾತನಾಡಿದರು. ವೇದಿಕೆಯ ಮೇಲೆ ಜಸ್ಟಿಸ್ ಶಿವರಾಜ ಪಾಟೀಲ ಕಾಲೇಜಿನ ಪ್ರಾಚಾರ್ಯೆ ವಿನುತಾ ಆರ್.ಬಿ. ಮತ್ತು ಉಪಪ್ರಾಚಾರ್ಯರಾದ ಪ್ರಶಾಂತ ಕುಲಕರ್ಣಿ, ಉಪನ್ಯಾಸಕೀಯರಾದ ಕಾಂಚನಾಮಾಲಾ ದೇಸಾಯಿ, ಶ್ರೀಮತಿ ಲಕ್ಷ್ಮೀ ಕುಲಕರ್ಣಿ, ಕರುಣೇಶ್ ಹಿರೇಮಠ, ಗುರುರಾಜ ಕುಲಕರ್ಣಿ ಉಪಸ್ಥಿತರಿದ್ದರು. ಸೃಜಲ್ಯಾ ಪ್ರಾರ್ಥಿಸಿದರು. ಚಂದ್ರಕಾಂತ ನಿರೂಪಿಸಿದರು.
ಕ್ರಾಂತಿಕಾರಿ ಬದಲಾವಣೆಯನ್ನು ತಂದ ಮಹಿಳೆಯ ಜೀವನವನ್ನು ಮಾದರಿಯಾಗಿಟ್ಟುಕೊಂಡು ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಹೊಂದಿ ಸಮಾಜದಲ್ಲಿ ಘನತೆಯಿಂದ ಮತ್ತು ಗೌರವದಿಂದ ಬದುಕಿದಾಗ ಪಾಲಕರು ಮತ್ತು ಶಿಕ್ಷಕರು ಪಟ್ಟಶ್ರಮ ಸಾರ್ಥಕವಾಗುತ್ತದೆ. -ಚನ್ನಾರೆಡ್ಡಿ ಪಾಟೀಲ, ಸಂಸ್ಥಾಪಕರು, ಸರ್ವಜ್ಞ ಶಿಕ್ಷಣ ಸಮೂಹ ಸಂಸ್ಥೆ, ಕಲಬುರಗಿ