ಕಲಬುರಗಿ; ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಕೃಷಿ ಉತ್ಪನ್ನ ಚಟುವಟಿಕೆಗಳನ್ನು ಮಾತ್ರ ಅವಕಾಶ ಮಾಡಿ ಕೊಟ್ಟು ಇತರೆ ಮಳಿಗೆಗಳು ಕಾನೂನು ಬಾಹಿರವಾಗಿ ಎನು ಕಾರ್ಯನಿರ್ವಹಿಸುತ್ತವೆ ಅಂತಹ ಮಳಿಗೆಗಳನ್ನು ಅಲ್ಲಿಂದ ಖಾಲಿ ಮಾಡಿ ರೈತರಿಗೆ ಅನುಕೂಲ ವಾಗುವಂತೆ ವ್ಯವಸ್ಥೆ ಮಾಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಸಚಿವ ಶಿವಾನಂದ ಪಾಟೀಲ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಕಲಬುರಗಿ ಎಪಿಎಂಸಿ ಕೃಷಿ ಉತ್ಪನ್ನ ಮಾರುಕಟ್ಟೆಗಳು ಸಮಿತಿ ಯಲ್ಲಿ ಕೃಷಿ ಎತರ ಚಟುವಟಿಕೆ ಗಳು ಜಾಸ್ತಿಯಾಗಿದ್ದು ಕೃಷಿಗೆ ಹೊರತು ಪಡಿಸಿ ಇರತಕಂತಹ ಇತರ ಮಳಿಗೆಗಳು ಸುಮಾರು 100 ಕ್ಕಿಂತ ಹೆಚ್ಚು ಮಳಿಗೆಗಳಲ್ಲಿ ವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿದರು.
ಸುಮಾರು 100 ಕಿಂತ ಹೆಚ್ಚು ಮಳಿಗೆಗಳು ಕಾಟನ್ ಮಾರ್ಕೆಟಿಂಗ್ ಮೆನ್ ಮಾರುಕಟ್ಟೆಗಳಲ್ಲಿ ಕುರು ಕುರೆ ಲೊಬ್ರಿ ಕ್ಯಾಂಡ್ಸ್ .ಮತ್ತು ಇತರೆ ಬೆಡ್ಡ್ ಫರ್ನಿಚರ್ ಅಂಗಡಿಗಳು ಇಂಜಿನಿಯರಿಂಗ್ ಕಂಪನಿಗಳು ಟ್ರಾನ್ಸ್ ಪೋರ್ಟ್ ಗಳು ಇತ್ಯಾದಿಗಳು ಕೃಷಿ ಚಟುವಟಿಕೆಗಳನ್ನು ಸಂಬಂಧ ಇರದಂತಹ ಹಲವಾರು ಮಳಿಗೆಗಳು ಬಾಡಿಗೆ ರೂಪದಲ್ಲಿ ಇವರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಆಲಾಟ ಮೆಂಟ್ ಪಡೆದಿರುವ ವ್ಯಾಪಾರಸ್ಥರು ಅವರಿಗೆ ಬಾಡಿಗೆ ರೂಪದಲ್ಲಿ ಕೊಟ್ಟಿರುವುದಕ್ಕೆ ಅಸಮಧಾನ ವ್ಯಕ್ತಪಡಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿಯಮಗಳನ್ನು ಉಲ್ಲಂಘನೆ ಆಗಿರುತ್ತದೆ ಇದರ ವಿರುದ್ಧ ಇದಕ್ಕೆ ಸಂಭಂದಿಸಿದ ಅಧಿಕಾರಿಗಳು ಯಾರು ಸಹ ಗಮನಾರ್ಹ ಮಾಡಿಲ್ಲ ನಾಮಕೆ ವಾಸ್ತೆ ಕೆಲವು ನೋಟಿಸ್ ಕೊಟ್ಟು ಕೈ ತೊಳೆದುಕೊಂಡಿರುತ್ತಾರೆ ಇದು ರೈತರ ಹುಟ್ಟುವಳಿಗಳ ಮಾರಾಟ ಮಾಡುವ ಕೃಷಿ ಚಟುವಟಿಕೆ ಗಳಿಗೆ ಪೂರಕವಾದ ವಾತವರಣ ಇಲ್ಲ ಕೃಷಿ ಎಂದು ಶರಣಬಸಪ್ಪ ಮಮಶೇಟ್ಟಿ ಮತ್ತು ಪ್ರಗತಿಪರ ರೈತ ದಿಲೀಪ್ ನಾಗೂರೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.