ತೂಕ ಯಂತ್ರಗಳಲ್ಲಿ ಮೋಸ ಕಂಡುಬಂದರೆ ಕ್ರಮ: ಸಚಿವ ಶಿವಾನಂದ ಎಸ್. ಪಾಟೀಲ

0
26

ಕಲಬುರಗಿ: ಎಲ್ಲಾ ಪಕ್ಷದವರು ಅಧ್ಯಯನ ನಡಿಸಿ ಒಂದು ವರದಿಯನ್ನ ಕೊಟ್ಟಿದ್ದಾರೆ ಲೋಕಲ್ ಪ್ರತಿನಿಧಿಗಳ ಮಾಹಿತಿಯನ್ನ ಸಂಗ್ರಹಿಸಿ ಆ ವರದಿಯಲ್ಲಿ ಅಳವಡಿಸಿ ಇಲ್ಲಿ ಇರತಕ್ಕಂತಹ ವರ್ತಕರು, ಹಮಾ¯ರು, ರೈತರು, ಗ್ರಾಹಕರು ಎಲ್ಲಾ ವಿಚಾರಗಳನ್ನು ಒಗ್ಗೂಡಿಸಿ ವರದಿ ಕೊಟ್ಟಿದ್ದಾರೆ ಬರತಕ್ಕಂತಹ ದಿನಗಳಲ್ಲಿ ಕಾನೂನು ಜಾರಿ ತರಬೇಕು ಎಂಬ ಹಿನ್ನಲೆಯಲ್ಲಿ ಭೇಟಿಯನ್ನು ನಿಗಧಿ ಮಾಡಿದ್ದೇವೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್. ಪಾಟೀಲ ಅವರು ಹೇಳಿದರು.

ಜಿಲ್ಲೆಯ ಎ.ಪಿ.ಎಂ.ಸಿ. ಮಾರುಕಟ್ಟೆ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿ, ಕರ್ನಾಟಕದ ವಿಧಾನ ಸಭೆಯಿಂದ ಅಂಗೀಕೃತವಾದ ರೂಪದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ದಿ) (ತಿದ್ದುಪಡಿ)ವಿಧೇಯಕ 2023 ನ್ನು ಸಮಗ್ರವಾಗಿಪರಿಶೀಲಿಸಲು ಪರಿಶೀಲನಾ ಸಮಿತಿಯು ಆಗಮಿಸಿದೆ ಎಂದು ಹೇಳಿದರು.

Contact Your\'s Advertisement; 9902492681

ನಮ್ಮ ಎ.ಪಿ.ಎಂ.ಸಿ. ವತಿಯಿಂದ ಕೆಲವು ತೂಕದ ಹಿಡಿತಗಳನ್ನ ಎಲ್ಲಾ ಎ.ಪಿ.ಎಂ.ಸಿ.ಆಳವಡಿಸಿರೈತರಿಗೆ ಮುಕ್ತವಾಗಿ ತೂಕವನ್ನ ಮಾಡಿಸಿಕೊಡುವಂತಹ ವ್ಯವಸ್ಥೆಯನ್ನ ಮಾಡಿದ್ದೇವೆಕಾರ್ಖಾನೆಯಲ್ಲಿ ತೂಕದಮೋಸ ಆಗಕೂಡದು, ಇಲ್ಲಿ ತೂಕದ ಮಷೀನ್‍ನಿಂದಮಾಡಿಕೊಂಡು ಹೋದಮೇಲೆ ಅವರಿಗೆ ವ್ಯತ್ಯಾಸ ಗೊತ್ತಾಗುತ್ತದೆ ಅಲ್ಲಿ ಅವರು ಮರುಪರೀಶಿಲನೆ ಮಾಡಿದರೆ.ಅವರಿಗೆ ಗೊತ್ತಾಗಿ ಅವರು ಕಾರ್ಖಾನೆಯ ಮೇಲೆ ದೂರು ಕೊಟ್ಟರೆ ಈ ವರ್ಷದಲ್ಲಿ ನಾವು ಖಂಡಿತ ಅವರ ಮೇಲೆ ಈ ವರ್ಷದ ಹಂಗಾಮಿ ಲೈಸನ್ ಏನಿದೆ ಅದನ್ನು ರದ್ದು ಮಾಡತಕ್ಕಂತಹ ಅಧಿಕಾರ ಇದೆ ಎಂದರು.

ನಾವು ಈಗಾಗಲೆ ಎರಡು ಸಭೆಗಳನ್ನುಮಾಡಿ ಆದೇಶವನ್ನು ಮಾಡಿದ್ದೇನೆ ಸಿಧಂಗಿಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಭೇಟಿ ನೀಡಿದ್ದಾಗ ಅಲ್ಲಿ ತೂಕದ ಯಂತ್ರವನ್ನು ಸುಸರ್ಜಿತವಾಗಿ ಇಟ್ಟಿರಲಿಲ್ಲ ನಾವು ಈಗಾಗಲೇ ಕಾರ್ಯದರ್ಶಿಯನ್ನು ಅಮಾನತು ಮಾಡಿ ಬಂದಿದ್ದೇವೆ ಎಂದರು.

ತೂಕ ಮಾಡತಕ್ಕಂತಹ ಸಂಧರ್ಭದಲ್ಲಿನಮ್ಮ ಯಂತ್ರ ಸರಿಯಾಗಿ ಇರಲಿಲ್ಲ ನಮ್ಮ ರೈತರಿಗೆ ಮೋಸ ಆಗಬಾರದು. ನಮ್ಮ ಕಮೀಟಿಯಲ್ಲಿ ಎಸ್.ರವಿ, ಪ್ರಕಾಶ ಕೆ. ರಾಥೋಡ್,ಕೆ.ಎ.ತಿಪ್ಪೇಸ್ವಾಮಿ,ಡಿ.ಎಸ್. ಅರುಣ್, ಎಮಎಲ್. ಅನಿಲ್ ಕುಮಾರ,ಕೇಶವ್, ಪ್ರಸಾದ, ಸದಸ್ಯರುಗಳು ಇದ್ದಾರೆ ಎಂದರು.

ಕಬ್ಬು ಬೆಳೆಗಾರರಿಗೆ ಅನೇಕ ರೀತಿಯಲ್ಲಿ ತೂಕ ಯಂತ್ರದಲ್ಲಿ ಮೋಸಹೋಗುತ್ತಿದ್ದಾರೆ ಇದನ್ನು ಕ್ರಮಬದ್ದವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಪತ್ರಕರ್ತರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಯಾವುದೇ ಅಳತೆ ಮತ್ತು ತೂಕ ಮಾಪನ ಇಲಾಖೆ ನಾವು ಸೇರಿಕೊಂಡು ಪರಿಶೀಲನೆ ಮಾಡುತ್ತೇವೆ ಎಂದರು.

ಎ.ಪಿ.ಎಂ.ಸಿ. ಅನೇಕ ರಸ್ತೆ ಗಳಿಂದ ಜನರು ಬರುತ್ತಾರೆ ಎರಡು ಪ್ರಮುಖ ದ್ವಾರಗಳು ನಿರ್ಮಿಸಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಅಲ್ಲಮಪ್ರಭು ಪಾಟೀಲ್, ಕಾಂಗ್ರೇಸ್ ಪಕ್ಷ ಜಿಲ್ಲಾಅಧ್ಯಕ್ಷ ಜಗದೇವ ಗುತ್ತೇದಾರ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವರ್ತಕರು, ಹಮಾಲರು, ರೈತರು ಅಹವಾಲುಗಳನ್ನು ಸಲ್ಲಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here