ಗುಣಮಟ್ಟದ ಅಕ್ಷರ ಕಲಿಕೆ ಜತೆಗಿರಲಿ ಕಲಾ ಪ್ರತಿಭೆ

0
9

ವಾಡಿ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ಅವರಲ್ಲಿರುವ ಕಲಾ ಪ್ರತಿಭೆಯ ಅನಾವರಣಕ್ಕೂ ಶಿಕ್ಷಣ ಸಂಸ್ಥೆಗಳು ವೇದಿಕೆಯನ್ನು ಸೃಷ್ಠಿಸಿಬೇಕು ಎಂದು ಕಸಾಪ ವಲಯ ಘಟಕದ ಅಧ್ಯಕ್ಷ ಸಿದ್ಧಯ್ಯಶಾಸ್ತ್ರೀ ನಂದೂರಮಠ ಹೇಳಿದರು.

ಗುರುವಾರ ಪಟ್ಟಣದ ಬಲರಾಮ ಚೌಕ್ ಪ್ರದೇಶದ ಶ್ರೀಬಸವ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಗಣಿತ ವಿಷಯಾಧಾರಿತ ರಂಗೋಲಿ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಜಗತ್ತಿನ ಜ್ಞಾನದ ಭಾಷೆ ಇಂಗ್ಲೀಷ್ ಆದರೆ ಕರುನಾಡ ಜನರ ಹೃದಯ ಭಾಷೆ ಕನ್ನಡವಾಗಿದೆ. ಕಲಿಕೆಗಾಗಿ ಭಾಷೆಗಳ ಭಿನ್ನತೆ ತರವಲ್ಲ. ಮಾತೃ ಭಾಷೆ ಕನ್ನಡದ ಶಿಕ್ಷಣಕ್ಕೂ ಆಧ್ಯತೆ ನೀಡಬೇಕು. ಬಸವ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥರು, ಐವರು ಹೆಣ್ಣು ಮಕ್ಕಳಿಗೆ ಹತ್ತನೇ ತರಗತಿ ವರೆಗೂ ಉಚಿತ ಶಿಕ್ಷಣ ನೀಡುವ ಸಂಕಲ್ಪ ಮಾಡಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.

ಪತ್ರಕರ್ತ ಮಡಿವಾಳಪ್ಪ ಹೇರೂರ ಮಾತನಾಡಿ, ಶಿಕ್ಷಣ ಖಾಸಗೀಕರಣ ಆದಮೇಲೆ ಡೊನೇಷನ್ ಹೆಸರಿನಲ್ಲಿ ಪೋಷಕರಿಂದ ಹಣ ಸುಲಿಗೆ ಶುರುವಾಗಿದೆ. ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವುದು ಕನಸಿನ ಮಾತಾಗಿದೆ. ನಾಯಿ ಕೊಡೆಗಳಂತೆ ತಲೆ ಎತ್ತಿರುವ ಖಾಸಗಿ ಶಾಲೆಗಳ ಮಧ್ಯೆಯೂ ಕೆಲ ಸಂಸ್ಥೆಗಳು ಕಡಿಮೆ ಶುಲ್ಕದಲ್ಲಿ ಉತ್ತಮ ಶಿಕ್ಷಣ ನೀಡುತ್ತಿವೆ. ಅಕ್ಷರ ಜ್ಞಾನ ನೀಡುವ ಜತೆಗೆ ಶಿಕ್ಷಕರು ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ಮತ್ತು ವೈಜ್ಞಾನಿಕ ಚಿಂತನೆಗಳನ್ನು ಹೇಳಿಕೊಡಬೇಕು. ಶಾಲೆಗಳಲ್ಲಿ ಸತತವಾಗಿ ಸ್ಪರ್ಧಾತ್ಮಕ ಕಾರ್ಯಕ್ರಮಗಳನ್ನು ಸಂಘಟಿಸಿ ಮಕ್ಕಳ ಪ್ರತಿಭೆಯನ್ನು ಹೊರಹಾಕಬೇಕು. ಶಿಕ್ಷಣದಿಂದ ಮಾತ್ರ ಪ್ರಪಂಚದ ಜ್ಞಾನ ಅರಿಯಲು ಸಾಧ್ಯ. ಪೋಷಕರು ಮಕ್ಕಳನ್ನು ಶಾಲೆಯಿಂದ ಹೊರಗುಳಿಸದೆ ಅಕ್ಷರ ಕಲಿಕೆಗೆ ಪ್ರೋತ್ಸಾಹಿಸಬೇಕು ಎಂದರು.

ಹಳಕರ್ಟಿ ಬಸವೇಶ್ವರ ಶಾಲೆಯ ಮುಖ್ಯಗುರು ಶರಣುಕುಮಾರ ದೋಶೆಟ್ಟಿ ಮಾತನಾಡಿದರು. ಬಸವ ಪ್ರಾಥಮಿಕ ಶಾಲೆಯ ಅಧ್ಯಕ್ಷೆ ರಜನಿ ಜೆ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಜಗದೇವಿ ಪಾಟೀಲ, ಶಶಿಕಲಾ ಕೊಲ್ಲೂರ, ಶಿಲ್ಪಾ ಹಿರೇಮಠ, ರವೀನಾ ರಾಠೋಡ, ನಿರ್ಮಲಾ ಪಾಟೀಲ, ರಾಜೇಶ್ವರಿ ಕಮಲಾಪುರ ಸೇರಿದಂತೆ ಮಕ್ಕಳ ಪೋಷಕರು ಪಾಲ್ಗೊಂಡಿದ್ದರು. ಶಿಕ್ಷಕಿ ಕವಿತಾ ಪಾಟೀಲ ನಿರೂಪಿಸಿ, ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here