ಲೋಕಸಭಾ ಚುನಾವಣೆ ಮತದಾನ ಹಿನ್ನೆಲೆ, ಬೆಂಗಳೂರಿನಿಂದ ಬೀದರಿಗೆ ವಿಶೇಷ ರೈಲು

0
59

ಕಲಬುರಗಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯು ಬೆಂಗಳೂರಿನಿಂದ ಆಗಮಿಸುವ ಮತದಾರರಿಗೆ ಅನುಕೂಲ ಮಾಡಿಕೊಡಲು ವಿಶೇಷ ರೈಲಿನ ವ್ಯವಸ್ಥೆ ಮಾಡಿದೆ ಎಂದು ಸೋಲಾಪುರ ರೈಲ್ವೆ ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ತಿಳಿಸಿದ್ದಾರೆ.

ಚುನಾವಣಾ ವಿಶೇಷ ರೈಲು ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ಹೊರಟು ಬೀದರ ಹಾಗೂ ಬೀದರದಿಂದ ಯಶವಂತಪುರ ರೈಲು ನಿಲ್ದಾಣವರೆಗೆ ಪ್ರಯಾಣಿಸುವುದು. ಏಪ್ರಿಲ್ 22 ರಂದು ಸಾಯಂಕಾಲ 6 ಗಂಟೆಗೆ ಯಶವಂತಪುರ ರೈಲ್ವೆ ನಿಲ್ದಾಣದಿಂದ ಹೊರಡುವ ವಿಶೇಷ ರೈಲು  ಏಪ್ರಿಲ್ 23ರಂದು ಬೆಳಗಿನ 4.30ಗಂಟೆಗೆ ಕಲಬುರಗಿ ಹಾಗೂ ಬೆಳಗಿನ 6.30 ಗಂಟೆಗೆ ಬೀದರಗೆ ತಲುಪುವುದು. ಈ ವಿಶೇಷ ರೈಲು ಏಪ್ರಿಲ್ 23ರಂದು ಸಾಯಂಕಾಲ 7 ಗಂಟೆಗೆ ಬೀದರನಿಂದ ಹೊರಟು ಕಲಬುರಗಿಗೆ ರಾತ್ರಿ 9 ಗಂಟೆಗೆ ಆಗಮಿಸಿ ಏಪ್ರಿಲ್ 24ರಂದು ಬೆಳಗಿನ 8 ಗಂಟೆಗೆ ಯಶವಂತಪುರ ರೈಲು ನಿಲ್ದಾಣಕ್ಕೆ ತಲುಪುವುದು. ವಿಶೇಷ ರೈಲು ಒಟ್ಟು 18 ಬೋಗಿಗಳನ್ನು ಹೊಂದಿದ್ದು, ನಾಲ್ಕು ಹವಾ ನಿಯಂತ್ರಿತ, 12 ಸ್ಲೀಪರ್ ಹಾಗೂ 2 ಸಾಮಾನ್ಯ ಬೋಗಿಗಳನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here