ಇಂದು  ಬಹಿರಂಗ ಪ್ರಚಾರ ಅಂತ್ಯ ಹಿನ್ನಲೆ: ಮುದ್ರಣ ಮಾಧ್ಯಮದಲ್ಲಿ ಜಾಹೀರಾತು ಪ್ರಕಟಿಸಬೇಕಾದಲ್ಲಿ ಪೂರ್ವಾನುಮತಿ ಅಗತ್ಯ: ಡಿ.ಸಿ

0
56

ಕಲಬುರಗಿ; ಸಾರ್ವತ್ರಿಕ ಲೋಕಸಭೆಗೆ ಇದೇ ಏಪ್ರಿಲ್ 23 ರಂದು ಚುನಾವಣೆ ನಡೆಯಲಿದ್ದು, ಏಪ್ರಿಲ್ 21ರ ಸಾಯಂಕಾಲ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಹೀಗಾಗಿ ಏಪ್ರಿಲ್ 22 ಹಾಗೂ 23 ರಂದು ಮುದ್ರಣ ಮಾಧ್ಯಮದಲ್ಲಿ ಯಾವುದೇ ಚುನಾವಣೆಗೆ ಸಂಬಂಧಿಸಿದ ಜಾಹೀರಾತು ಪ್ರಕಟಣೆ ಮಾಡಬೇಕಾದಲ್ಲಿ ಅದಕ್ಕೆ ಎಂ.ಸಿ.ಎಂ.ಸಿ. ಅನುಮತಿ ಕಡ್ಡಾಯ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್.ವೆಂಕಟೇಶ ಕುಮಾರ ತಿಳಿಸಿದ್ದಾರೆ.

ಹೀಗಾಗಿ ಅಭ್ಯರ್ಥಿಗಳು ಮುದ್ರಣ ಮಾಧ್ಯಮದಲ್ಲಿ ಏಪ್ರಿಲ್ 22 ಹಾಗೂ 23 ರಂದು ಯಾವುದೇ ರೀತಿಯ ಜಾಹೀರಾತು ನೀಡಬೇಕಾದಲ್ಲಿ ಕಲಬುರಗಿ ವಾರ್ತಾ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಇನ್ನೂ ಮುದ್ರಣ ಮಾಧ್ಯಮ ಸಂಸ್ಥೆಗಳು ಚುನಾವಣೆಗೆ ಸಂಬಂಧಿಸಿದ ಯಾವುದೇ ಜಾಹೀರಾತುಗಳನ್ನು ಪ್ರಕಟಿಸುವ ಮುನ್ನ ಜಾಹೀರಾತು ಪೂರ್ವಾನುಮತಿ ಪಡೆದುಕೊಳ್ಳಲಾಗಿದಿಯೆ ಎಂಬುದನ್ನು ಖಾತ್ರಿಪಡಿಸಿಕೊಂಡು ಜಾಹೀರಾತು ಪ್ರಕಟಿಸಬೇಕು ಎಂದು ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ಎಕ್ಸಿಟ್ ಪೋಲ್, ಓಪಿನಿಯನ್ ಪೋಲ್ ನಿಷೇಧ: ಮತದಾನಕ್ಕೆ ನಿಗದಿಯಾಗಿರುವ ಸಮಯದ ಮುಂಚಿತ ೪೮ ಗಂಟೆಗಳಲ್ಲಿ ಸುದ್ದಿ ವಾಹಿನಿ, ಕೇಬಲ್ ಟಿ.ವಿ., ರೇಡಿಯೋ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣ, ಡಿಜಿಟಲ್ ಮಾಧ್ಯಮದಲ್ಲಿ ಚುನಾವಣೆ ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರುವ ಸುದ್ದಿ, ಗುಂಪು ಚರ್ಚೆ, ಸಂದರ್ಶನ ಪ್ರಸಾರ ಮಾಡುವುದನ್ನು ಪ್ರಜಾ ಪ್ರತಿನಿಧಿ ಕಾಯ್ದೆ 1951ರ ನಿಯಮ 126ಎ ರನ್ವಯ ನಿರ್ಭಂಧಿಸಲಾಗಿದೆ. ಇದನ್ನು ಯಾವುದೇ ವ್ಯಕ್ತಿ ಉಲ್ಲಂಘಿಸಿದಲ್ಲಿ 2 ವರ್ಷ ಶಿಕ್ಷೆ, ದಂಡ ಅಥವಾ ಎರಡನ್ನು ವಿಧಿಸಲು ಕಾಯ್ದೆಯಡಿ ಅವಕಾಶ ನೀಡಲಾಗಿದೆ. ಇದಲ್ಲದೆ ಪ್ರಜಾ ಪ್ರತಿನಿಧಿ ಕಾಯ್ದೆ-1951ರ ನಿಯಮ 126(1) (ಬಿ) ಪ್ರಕಾರ ಎಕ್ಸಿಟ್ ಪೋಲ್, ಸರ್ವೆ ಪೋಲ್ ಮಾಡುವುದನ್ನು ಸಹ ನಿರ್ಭಂಧಿಸಲಾಗಿದ್ದು, ಮಾಧ್ಯಮ ಸಂಸ್ಥೆಗಳು ಇದನ್ನು ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here