ಬೀದರ್: ಜಿಲ್ಲೆಯ ಚಿಟಗುಪ್ಪಾ ತಾಲ್ಲೂಕಿನ ಐತಿಹಾಸಿಕ ಸುಕ್ಷೇತ್ರ ಸ್ಥಳವಾದ ದೇವಗಿರಿ ತಾಂಡಾದ ಶ್ರೀ ದುರ್ಗಮ್ಮಾದೇವಿ ದೇವಸ್ಥಾನವು ಅನೇಕ ಪವಾಡಗಳನ್ನು ಗೈದಂತಹ ಸುಕ್ಷೇತ್ರವಾಗಿದೆ.
ಇಲ್ಲಿಗೆ ಸುತ್ತಮುತ್ತಲಿನ ಗ್ರಾಮಗಳು ಮಾತ್ರವಲ್ಲದೇ ನೆರೆ ಜಿಲ್ಲೆಗಳು ಮತ್ತು ರಾಜ್ಯಗಳಿಂದಲೂ ಸಾವಿರಾರು ಭಕ್ತಾದಿಗಳು ನಿರಂತರ ಬಂದು ದರ್ಶನ ಪಡೆಯುತ್ತಿರುತ್ತಾರೆ. ಆದಾಗ್ಯೂ, ಕಳೆದ ಒಂದು ತಿಂಗಳ ಹಿಂದೆ ಇಲ್ಲಿಯ ದೇವಾಲಯದ ಮುಂಭಾಗದ ಮೇಲ್ಛಾವಣಿ ಹಾಗೂ ತಡೆ ಗೊಡೆ ಮಳೆಯಿಂದಾಗಿ ಕುಸಿದು ಬಿದ್ದಿದೆ. ಆ ಸಂದರ್ಭದಲ್ಲಿ ಸದ್ಯ ತಾಯಿಯ ಆಶೀರ್ವಾದದಿಂದ ಯಾವುದೇ ಪ್ರಾಣಾಹಾನಿ ಉಂಟಾಗಿಲ್ಲ ಎಂದು ದೇವಸ್ಥಾನದ ಪಂಚ ಕಮೀಟಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಈ ಕುರಿತು ಸ್ಥಳಿಯ ರಾಜಕೀಯ ಧುರಿಣರು, ಜನಪ್ರತಿನಿಧಿಗಳ ಗಮನಕ್ಕೂ ತಂದರೂ ಸಹ ಈವರೆಗೂ ಇದನ್ನು ಸರಿಪಡಿಸಲು ಯಾರು ಆಸಕ್ತಿ ವಹಿಸಿಲ್ಲ. ಮಾಜಿ ಸಚಿವರು ಹಾಗೂ ಸ್ಥಳಿಯ ಶಾಸಕರು ಆದ ಬಂಡೆಪ್ಪಾ ಖಾಸೆಂಪೂರ್ ಅವರಿಗೆ ಹಲವಾರು ಸಲ ಅಂಗಲಾಚಿದರೂ ಸಹ ಅವರ ನಿರ್ಲಕ್ಷದಿಂದ ನಮಗೆ ಯಾವುದೇ ಪ್ರಯೋಜನೆ ಆಗಿಲ್ಲ. ದಕ್ಷಿಣ ಕ್ಷೇತ್ರವಾದ ನಮ್ಮ ತಾಂಡವನ್ನು ಅವರು ಹಿಂದಿನಿಂದಲೂ ನಿರ್ಲಕ್ಷಿಸುತ್ತಲೇ ಬಂದಿದ್ದಾರೆ. ಈಗ ಮಂದಿರ ದುರಸ್ತಿ ವಿಷಯದಲ್ಲೂ ನಮ್ಮನ್ನು ಅವರು ಇದುವರೆಗೆ ಕಡೆಗಣಿಸುತ್ತಿದ್ದಾರೆ ಎಂದು ಅವರು ಜಂಟಿ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಕೂಡಲೇ ತಡೆಗೋಡೆ ಹಾಗೂ ಮೇಲ್ಛಾವಣೆಯನ್ನು ನಿರ್ಮಿಸಿಕೊಡಬೇಕು. ಇಲ್ಲವಾದಲ್ಲಿ ಭಕ್ತರು ಸೇರಿ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.