ಕಲಬುರಗಿ: ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯು ನಗರದ ನೆಹರು ಚೌಕ್ ನಲ್ಲಿ ಹೊನಗುಂಟ ಗ್ರಾಮಕ್ಕೆ ಬಸ್ ಸೌಲಭ್ಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ಮಾಡಲಾಯಿತು.
ಈ ಹೋರಾಟವನ್ನು ಎಐಡಿಎಸ್ಓ ಉದ್ದೇಶಿಸಿ ಜಿಲ್ಲಾ ಕಾರ್ಯದರ್ಶಿ ತುಳಜರಾಮ ಎನ್ ಕೆ ಮಾತನಾಡುತ್ತ ಶಾಹಾಬಾದ್ ತಾಲೂಕಿನಲ್ಲಿ ಹೋನಗುಂಟ ಗ್ರಾಮದಿಂದ ದಿನಾಲು ನೂರಾರು ವಿದ್ಯಾರ್ಥಿಗಳು ಹೆಚ್ಚಿನ ಒಂದು ವಿದ್ಯಾಭ್ಯಾಸಕ್ಕಾಗಿ ಶಾಹಾಬಾದ್, ಕಲಬುರ್ಗಿ ನಗರಕ್ಕೆ ಹಾಗೂ ಜೇವರ್ಗಿ, ಚಿತ್ತಾಪುರ ತಾಲೂಕಕ್ಕೆ ಹೋಗುವುದು ತಮಗೆ ತಿಳಿದ ವಿಷಯವಾಗಿದೆ. ಬಸ್ ಸರಿಯಾದ ಸಮಕ್ಕೆ ಬಾರದ ಕಾರಣ ವಿದ್ಯಾರ್ಥಿಗಳು ತರಗತಿಗೆ ತೊಂದರೆಯಾಗುತ್ತಿದೆ. ಇ ಸಮಸ್ಯೆ ಕುರಿತು ಹಲವಾರು ಬಾರಿ ವಿದ್ಯಾರ್ಥಿಗಳು ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂದುವರೆದು ಅವರು ವಿದ್ಯಾರ್ಥಿಗಳು ಸರಿಯಾಗಿ ಶೈಕ್ಷಣಿಕ ವಿದ್ಯಾಭ್ಯಾಸ ಮಾಡಬೇಕಾದರೇ ಅವರಿಗೆ ಸರಿಯಾದ ಸಮಯಕ್ಕೆ ಬಸ್ ಗಳ ಅವಶ್ಯಕತೆ ಇದೆ ಆದರೆ ಈಗ ಬರುವ ಬಸ್ ಗಳು ವಿದ್ಯಾರ್ಥಿಗಳಿಗೆ ಸಮಯಕ್ಕೆ ತಕ್ಕಂತೆ ಬಾರದ ಕಾರಣ ಖಾಸಗಿ ವಾಹನಗಳಿಗೆ ಹೋಗುವ ಪರಿಸ್ಥಿತಿ ಬಂದಿದೆ ವಿದ್ಯಾರ್ಥಿಗಳ ಹತ್ತಿರ ಬಸ್ ಪಾಸ್ ಇದ್ದರೂ ಉಪಯೋಗವಾಗುತ್ತಿಲ್ಲ. ಆದಕಾರಣ ತಾವುಗಳು ಈ ಕೂಡಲೇ ಸಮಸ್ಯೆಯನ್ನು ಬಗೆಹರಿಸಿ, ಸರಿಯಾದ ಸಮಯಕ್ಕೆ ಬಸ್ ಸೌಲಭ್ಯ ಕಲ್ಪಿಸಬೇಕು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕಾಗಿ ಎಂದು ಆಗ್ರಹಿಸಿದರು ಒಂದು ವೆಳೆ ಸಮಸ್ಯೆ ಬಗೆಹರಿಯದೆ ಹೋದರೆ ಮುಂದಿನ ದಿಗಳಲ್ಲಿ ಉನ್ನತ ಹಂತದ ಹೋರಾಟಕ್ಕೆ ತಾವುಗಳೆ ಜವಾಬ್ದಾರರು ಎಂದು ಹೇಳಿದರು.
ನಂತರ ಶಹಾಬಾದ ಬಸ್ ನಿಲ್ದಾಣದ ನಿಯಂತ್ರಣಾಧಿಕಾರಿಗಳು ಬಂದು ಮನವಿ ಪತ್ರ ಸ್ವಿಕರಿಸಿ ಮೇಲಾಧಿಕಾರಿಗಳ ಜೋತೆ ಮಾತನಾಡಿ ಕೂಡಲೇ ಸಮಸ್ಯ ಬಗೆಹರಿಸುವುದಾಗಿ ಬರವಸೆ ನೀಡಿದರು.
ಈ ಹೋರಾಟದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ದೇವರಾಜ ಎಸ್ ರಂಗನಾಥ ಮಾನೆ ವಿದ್ಯಾರ್ಥಿಗಳಾದ ಭಾಗ್ಯಶ್, ರೇಖಾ, ಸ್ನೆಹಾ, ಇಸ್ರತ ಬೇಗಂ, ಮಲ್ಲಮ್ಮ ಜ್ಯೋತಿ, ಮನುಗಿರಿ, ನಾಗರಾಜ, ಸಂತೋಷ್, ಭರತ್, ಮಲ್ಲು , ಪ್ರಜ್ವಲ್ ಸೇರಿ ಹಲವಾರ ವಿದ್ಯಾರ್ಥಿಗಳ ಭಾಗವಹಿಸಿದರು.