ವಿದೇಶಿ ವಿವಿಗಳೊಂದಿಗೆ ದೇಶಿಯ ವಿವಿಗಳ ಒಪ್ಪಂದ: ಜನಕ ಪುಷ್ಪನಾಥನ್

0
40

ಕಲಬುರಗಿ: ದೇಶದ ವಿದ್ಯಾರ್ಥಿ ಸಮುದಾಯ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಆಕರ್ಷಿತರಾಗುತ್ತಿದ್ದಾರೆ. ವಿದೇಶಿ ಶೈಕ್ಷಣಿಕ ಸಂಸ್ಥೆಗಳ ಗುಣಮಟ್ಟದ ಶಿಕ್ಷಣ ಮತ್ತು ಉತ್ಕೃಷ್ಠ ಸಂಶೋಧನೆಗೆ ಒದಗಿಸುತ್ತಿರುವ ಆರ್ಥಿಕ ನೆರವಿನಿಂದ ಉತ್ತಮ ಭವಿಷ್ಯ ಕಂಡುಕೊಳ್ಳುತ್ತಿದ್ದಾರೆ. ಅದರ ಹಿನ್ನೆಲೆಯಲ್ಲಿ ಭಾರತೀಯ ವಿದ್ಯಾರ್ಥಿಗಳು ವಿದೇಶಿ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುವ ಸುವರ್ಣಾವಕಾಶ ಸಿಗುತ್ತಿದೆ ಎಂದು ದಕ್ಷಿಣ ಭಾರತ ಚೆನೈನ ಬ್ರಿಟಿಷ್ ಹೈ ಕಮಿಷನ್ ಹಾಗೂ ಬ್ರಿಟಿಷ್ ಕೌನ್ಸಿಲನ ನಿರ್ದೇಶಕಿ ಶ್ರೀಮತಿ ಜನಕ ಪುಷ್ಪನಾಥನ್ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯ ಮತ್ತು ಯುನೈಟೆಡ್ ಕಿಂಗ್‌ಡಂನ ಬ್ರಾಡ್‌ಫೋರ್ಡ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ ‘ರೀಸೆಂಟ್ ಅಡ್ವಾನ್ಸಸ್ ಇನ್ ಬಯೋ-ನ್ಯಾನೋ ಕಾಂಪೋಸಿಟ್ಸ್ ಫಾರ್ ಎನಾನ್ಸಿಂಗ್ ಹ್ಯುಮನ್ ಹೆಲ್ತ್’ (ಆರ್‌ಎಬಿಎನ್‌ಹೆಚ್24ಜಿಯುಕೆ) ವಿಷಯ ಕುರಿತು ಎರಡು ದಿನಗಳ ಅಂತರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

Contact Your\'s Advertisement; 9902492681

ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತ ಹಾಗೂ ಯುನೈಟೆಡ್ ಕಿಂಗ್‌ಡಂನ ಬ್ರಿಟಿಷ್ ಕೌನ್ಸಿಲ್ ಪೋಷಕತ್ವದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಹಾಗೂ ಬ್ರಾಡ್‌ಪೋರ್ಡ್ ವಿಶ್ವವಿದ್ಯಾಲಯಗಳ ಪೂರಕ ಒಪ್ಪಂದಗಳಿಂದ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಸಂಶೋಧನೆ ಕೈಗೊಳ್ಳಲು ವಿಪುಲ ಅವಕಾಶಗಳನ್ನು ಒದಗಿಸುತ್ತಿರುವುದು ಪ್ರೋತ್ಸಾಹದಾಯಕ ಕಾರ್ಯವಾಗಿದೆ ಎಂದರು.

ದೇಶದ ವಿಶ್ವವಿದ್ಯಾಲಯಗಳು ವಿದೇಶಗಳ ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದ ಮತ್ತು ಸಹಭಾಗಿತ್ವದಿಂದ ಪದವಿ ಮತ್ತು ಉನ್ನತ ಶಿಕ್ಷಣ ಹಂತದಲ್ಲಿಯೇ ಸ್ಟೂಡೆಂಟ್ಸ್ ಎಕ್ಸಚೇಂಜ್ ಪ್ರೋಗ್ರಾಮ ಮತ್ತು ಪ್ಯಾಕಲ್ಟಿ ಎಕ್ಸಚೇಂಜ್ ಪ್ರೋಗ್ರಾಮ ಕಾರ್ಯಕ್ರಮಗಳು ಯಶಸ್ವಿಯಾಗಿ ಪೂರೈಸಲಾಗುತ್ತಿದೆ. ಜಾಗತಿಕವಾಗಿ ಸಿಗುತ್ತಿರುವ ಉನ್ನತ ಸಂಶೋಧನೆ ಮತ್ತು ತಂತ್ರಜ್ಞಾನ ಶಿಕ್ಷಣಕ್ಕೆ ಹೆಚ್ಚು ಮೌಲ್ಯ ಬಂದಂತಾಗಿದೆ. ಕೃಷಿ, ಅರೋಗ್ಯ ಮತ್ತು ನ್ಯಾನೋ ತಂತ್ರಜ್ಞಾನ ಹೆಚ್ಚು ಉಪಯೋಗಕಾರಿ ಆಗಿದೆ. ಅದರಿಂದ ವೈಜ್ಞಾನಿಕ ಶಿಕ್ಷಣ ಪಡೆಯುವ ಮೂಲಕ ವಿಶ್ವಮಟ್ಟದ ಜ್ಞಾನ ವಿಸ್ತರಣೆಯ ಸಮ್ಮೇಳನಗಳಲ್ಲಿ ಯುವ ವಿಜ್ಞಾನಿಗಳು ಉತ್ಸಾಹದಿಂದ ಪಾಲ್ಗೊಳಬೇಕು. ಕ್ರಿಯಾಶೀಲ ಮನಸ್ಸಿನಿಂದ ಜ್ಞಾನ ವಿಸ್ತರಣೆ ಮತ್ತು ಆರೋಗ್ಯ ಕಾಳಜಿಯಿಂದ ಜಾಗತಿಕ ಸವಾಲುಗಳನ್ನು ದೈರ್ಯವಾಗಿ ಎದುರಿಸಿ ಉತ್ತಮ ಅವಕಾಶಗಳನ್ನು ಬದ್ಧತೆಯಿಂದ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಪುಣೆಯ ಎನ್‌ಸಿಐಎಂ ರಿಸೋರ್ಸ್ ಸೆಂಟರ್ ಡಿವಿಷನ್ ಆಪ್ ಬಯೋಕೆಮಿಕಲ್ ಸೈನ್ಸನ ಮುಖ್ಯ ವಿಜ್ಞಾನಿ ಡಾ. ಸೈಯದ್ ಜಿ. ದಸ್ತಗೆರ್ ಅತಿಥಿಗಳಾಗಿ ಮಾತನಾಡಿ ಭಾರತದಲ್ಲಿ ಅತ್ಯುತ್ತಮ ಪ್ರತಿಭೆಗಳಿವೆ. ಸ್ಥಳೀಯ ವಿದ್ಯಾರ್ಥಿಗಳು ಪ್ರಸ್ತುತ ಜಾಗತಿಕ ಶಿಕ್ಷಣ ವ್ಯವಸ್ಥೆಯಲ್ಲಿನ ಕಾರ್ಯಕ್ರಮಗಳ ಕಡೆಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಸತತ ಪ್ರಯತ್ನದಿಂದ ಕೌಶಲ್ಯ ಕಲಿಕೆ ಜೊತೆಗೆ ಉತ್ತಮ ಪ್ರತಿಭೆ ಪ್ರದರ್ಶಿಸಿದರೆ ಯಶಸ್ಸು ಪಡೆಯಬಹುದು ಎಂದರು.

ಬೆಂಗಳೂರು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತನ ರಜನಿ ಮಾತನಾಡಿ ವಿದ್ಯಾರ್ಥಿಗಳ ವೈಜ್ಞಾನಿಕ ಜ್ಞಾನ ಬೆಳವಣಿಗೆಗೆ ಉನ್ನತ ಶಿಕ್ಷಣ ಪರಿಷತ್ತ ಹೆಚ್ಚು ಒತ್ತು ನೀಡಿದೆ. ಅದರ ಭಾಗವಾಗಿ ಜ್ಞಾನ ನಾಯಕತ್ವವನ್ನು ಬಲಪಡಿಸಲು ವಿನೂತನ ಕಾರ್ಯಕ್ರಮಗಳನ್ನು ರೂಪಿಸಿ ಪ್ರೋತ್ಸಾಹಿಸುತ್ತಿದೆ ಎಂದರು. ಶ್ರೀಲಂಕಾದ ಪೆರಡೇನಿಯಾ ವಿಶ್ವವಿದ್ಯಾಲಯದ ಪ್ರೊ. ದಿಸ್ಸೆ ನಾಯಕೆ ಮಾತನಾಡಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಅಧ್ಯಕ್ಷತೆ ವಹಿಸಿ ಮಾತನಾಡಿ ಜಾಗತಿಕ ಮಟ್ಟದ ವಿಶ್ವವಿದ್ಯಾಲಯಗಳೊಂದಿಗೆ ಗುಲಬರ್ಗಾ ವಿಶ್ವವಿದ್ಯಾಲಯ ಉನ್ನತ ಶಿಕ್ಷಣ ಮತ್ತು ಸಂಶೋಧನೆಗೆ ಆಸಕ್ತಿವಹಿಸಿದೆ. ಅಮೆರಿಕಾ, ನೆದರ ಲ್ಯಾಂಡ್, ಸಿಂಗಾಪುರ ಹಾಗೂ ಶ್ರೀಲಂಕಾದೊಂದಿಗೆ ಪತ್ರವ್ಯವಹಾರ ನಡೆಸಲಾಗಿದೆ. ಇದರಿಂದ ಜಾಗತಿಕ ಜ್ಞಾನ ವಿಸ್ತರಣೆ ಜೊತೆಗೆ ವೈಜ್ಞಾನಿಕ ಶಿಕ್ಷಣ ಮತ್ತು ಉತ್ಕೃಷ್ಟ ಸಂಶೋಧನಾ ಕಾರ್ಯಕ್ರಮಗಳಿಗೆ ವಿದ್ಯಾರ್ಥಿ ಸಮೂಹ ಮುಕ್ತವಾಗಿ ತೆರೆದುಕೊಳ್ಳಬೇಕು. ಹಾಗ ಶಿಕ್ಷಣ, ಆರೋಗ್ಯ ಮತ್ತು ನ್ಯಾನೋ ತಂತ್ರಜ್ಞಾನದಲ್ಲಿನ ಅಗಾದ ಬೆಳವಣಿಗೆ ಸಾಧ್ಯವಾಗಲಿದೆ ಎಂದರು.

ವಿತ್ತಾಧಿಕಾರಿ ಪ್ರೊ. ರಾಜಾನಳ್ಕರ್ ಲಕ್ಷ್ಮಣ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಗ್ರಂಥಪಾಲಕ ಡಾ. ಸುರೇಶ್ ಜಂಗೆ ಅತಿಥಿ ಪರಿಚಯಿಸಿದರು. ಮೌಲ್ಯಮಾಪನ ಕುಲಸಚಿವ ಪ್ರೊ. ಜ್ಯೋತಿ ಧಮ್ಮ ಪ್ರಕಾಶ್, ಕುಲಸಚಿವ ಡಾ. ಬಿ. ಶರಣಪ್ಪ ಉಪಸ್ಥಿತರಿದ್ದರು.

ಹಾಗೆಯೇ ಕಾಮನ್‌ವೆಲ್ತ್ ಅಕಾಡೆಮಿಕ್ ಸ್ಟಾಪ್ ಪ್ರೊಪೆಷನಲ್ ಫೆಲೋ ಪಡೆದಿರುವ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ವೆಂಕಟರಾಮನ್, ಡಾ. ಸುರೇಶ್ ಜಂಗೆ, ಹಾಗೂ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಜಿ. ಎಂ. ವಿದ್ಯಾಸಾಗರ್ ಅವರನ್ನು ಅಭಿನಂದಿಸಲಾಯಿತು.

ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಯುನೈಟೆಡ್ ಕಿಂಗ್‌ಡಮ್‌ನ ಬ್ರಾಡ್‌ಫೋರ್ಡ್ ವಿಶ್ವವಿದ್ಯಾಲಯದ ಡಾ. ಎಸ್. ಎ. ಬೆಹ್ರುಜ್ ಖಘಾನಿ ಮಾತನಾಡಿ 350ಕ್ಕೂ ಪ್ರಾಧ್ಯಾಪಕರು, ವಿಜ್ಞಾನಿಗಳು ಹಾಗೂ ಸಂಶೋಧಕರು ಭಾಗವಹಿಸಿದ್ದರು. 65ಕ್ಕೂ ಹೆಚ್ಚು ಲೇಖನಗಳು ಪ್ರಸ್ತುತಿಯಾಗಿವೆ. ಎರಡು ದೇಶಗಳ ವಿಶ್ವವಿದ್ಯಾಲಯಗಳು ಸಮ್ಮೇಳನ ಆಯೋಜನೆ ಮೂಲಕ ಹೊಸ ಆಧುನಿಕ ಶಿಕ್ಷಣ ವಿನಿಮಯ, ಸಂಶೋಧನೆಗೆ ಹೆಚ್ಚು ಮೌಲ್ಯ ಬರಲಿದೆ ಎಂದು ಹೇಳಿ ಸಮ್ಮೇಳನದ ವರದಿ ವಾಚಿಸಿದರು. ಗುಲಬರ್ಗಾ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಪ್ರೊ. ಜಿ.ಎಂ. ವಿದ್ಯಾಸಾಗರ್ ವಂದಿಸಿದರು. ಕೊನೆಯಲ್ಲಿ ಸಾಮೂಹಿಕ ರಾಷ್ಟ್ರಗೀತೆ ಹಾಡಲಾಯಿತು.

ಪ್ರಶಸ್ತಿ ವಿವರಗಳು: ಅತ್ಯುತ್ತಮ ಮೌಖಿಕ ಪ್ರಸ್ತುತಿ ಪ್ರಶಸ್ತಿ: ಸೂಕ್ಷ್ಮಜೀವಿ ಸೋಂಕುಗಳು ಉಪ ವಿಷಯದ ಮೇಲೆ ನಡೆದ ತಾಂತ್ರಿಕ ಗೋಷ್ಠಿಯಲ್ಲಿ ಪ್ರಬಂಧ ಮಂಡಿಸಿದ ಗುಲಬರ್ಗಾ ವಿಶ್ವವಿದ್ಯಾಲಯದ ಡಾ. ನಜುಹತ್ ತಬಸ್ಸುಮ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಸಂಗೀತಾ ಎಂ ಹಾಗೂ ಎರಡನೇ ತಾಂತ್ರಿಕ ಗೋಷ್ಠಿಯಲ್ಲಿ ವಿಷಯ ಮಂಡಿಸಿದ ದಾವಣಗೆರೆ ವಿಶ್ವವಿದ್ಯಾಲಯದ ಪ್ರಶಂತ್ ಕುಮಾರ್ ಸಿ. ಎಸ್. ದೇವರಾಜ ಅವರಿಗೆ ಅತ್ಯುತ್ತಮ ಮೌಖಿಕ ಪ್ರಸ್ತುತಿ ಪ್ರಶಸ್ತಿ ನೀಡಲಾಯಿತು.

ಅತ್ಯುತ್ತಮ ಪೋಸ್ಟರ್ ಪ್ರೆಸಂಟೇಶನ್ ಪ್ರಶಸ್ತಿ : ಸೂಕ್ಷ್ಮಜೀವಿ ಸೋಂಕುಗಳು- ಉಪ ವಿಷಯದಲ್ಲಿ ಮೈಸೂರು ವಿಶ್ವವಿದ್ಯಾಲಯದ ಯಶಸ್ವಿನಿ, ಗುಲಬರ್ಗಾ ವಿಶ್ವವಿದ್ಯಾಲಯದ ಶ್ವೇತಾ ಮಲ್ಲಿಕಾರ್ಜುನ ಹಾಗೂ ಬೆಂಗಳೂರು ಮಹಾರಾಣಿ ಶೈನ್ಸ್ ಕಾಲೇಜಿನ ವಿಶ್ವನಾಥ್ ಟಿ.ಎಂ., ಕ್ಯಾನ್ಸರ್ ಮತ್ತು ತ್ವಚೆ ಸಂರಕ್ಷಣೆ- ಉಪ ವಿಷಯದಲ್ಲಿ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಗಣಪತಿ ಪಿ. ಯಾದವ ಹಾಗೂ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಪೂಜಾ ವಿ. ಗುಣಗಾಮಭಿರೆ ಟಿಶ್ಯೂ ಮತ್ತು ಎಂಜಿನಿಯರಿಂಗ್ ರಿಪೇರ –ಉಪ ವಿಷಯದಲ್ಲಿ ಕರಾಡ್‌ನ ಕೃಷ್ಣ ಇನ್ಸಟ್ಯೂಟ್ ಆಪ್ ಫಾರ್ಮಸಿಯ ರುತುರಾಜ ಯು. ಭಂಡಾರೆ, ಕಲಬುರಗಿ ಕೆ.ಬಿ.ಎನ್ ವಿಶ್ವವಿದ್ಯಾಲಯದ ಬದ್ರಿನಾಥ ಡಿ. ಕುಲಕರ್ಣಿ ಮಧುಮೇಹ ಮತ್ತು ಇತರೆ ಕಾಯಿಲೆಗಳು- ಉಪವಿಷಯದಲ್ಲಿ ಬೀದರಿನ ಬಿ.ವಿ ಬೂಮರೆಡ್ಡಿ ಕಲಾ ಕಾಲೇಜಿನ ಸೂರ್ಯವಂಶಿ ಪೂಜಾ, ಗುಲಬರ್ಗಾ ವಿಶ್ವವಿದ್ಯಾಲಯದ ಸಹನಾಪ್ರಿಯಾ ಗುಬ್ಬೆವಾಡ ಹಾಗಾ ರೋಹಿಣಿ ಅತ್ಯುತ್ತಮ ಪೋಸ್ಟರ್ ಪ್ರೆಸಂಟೇಶನ್ ಪ್ರಶಸಿಗೆ ಅರ್ಹರಾದರು.

ಕರ್ನಾಟಕ ರಾಜ್ಯದ ಕೆಹೆಚ್‌ಇಸಿ ಗುಲಬರ್ಗಾ ವಿವಿ ಹಾಗೂ ಸ್ಕಾಟ್‌ಲ್ಯಾಂಡಿನ ದಂಡಿ ವಿವಿ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಗುಲಬರ್ಗಾ ವಿವಿಯ ಜೈವಿಕ ತಂತ್ರಜ್ಞಾನ ವಿಭಾಗದ ಪ್ರೊ. ಚಂದ್ರಕಾಂತ್ ಕೆಳಮನಿ ಅವರ ಮಾರ್ಗದರ್ಶನದಲ್ಲಿ ಅವಿನಾಸ್, ಮೋನಿಕಾ, ಶ್ರವಣಕುಮಾರ್, ಆರತಿ ಚೌವಾಣ, ಸಂಜನಾ ಈಗಾಗಲೇ ಉನ್ನತ ಸಂಶೋಧನೆ ಕಾರ್ಯದಲ್ಲಿ ತೊಡಗಿದ್ದಾರೆ. ಅದರ ಮುಂದುವರಿದ ಭಾಗವಾಗಿ ಅಮೆರಿಕಾ, ಸಿಂಗಪುರ, ಶ್ರಿಲಂಕಾ, ನೆದರಲ್ಯಾಂಡ್ ರಾಷ್ಟçಗಳ ಜಾಗತಿಕ ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದ ಪ್ರಕ್ರಿಯೆಯ ಪತ್ರವ್ಯವಹಾರ ಪ್ರಗತಿಯಲ್ಲಿದೆ. ಇದರಿಂದ ನಮ್ಮ ದೇಶದ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಅತ್ಯುನ್ನತ ಶಿಕ್ಷಣ ಮತ್ತು ಸಂಶೋಧನೆ ಪಡೆಯುವ ಸುವರ್ಣಾವಕಾಶ ಸಿಗಲಿದೆ. ಇದು ನಮ್ಮ ವಿಶ್ವವಿದ್ಯಾಲಯಲಕ್ಕೆ ಹೆಮ್ಮೆಯ ವಿಷಯವಾಗಿದೆ. – ಡಾ. ದಯಾನಂದ ಅಗಸರ, ಕುಲಪತಿ, ಗುಲಬರ್ಗಾ ವಿಶ್ವವಿದ್ಯಾಲಯ.

ಬ್ರಿಟಿಷ್ ಕೌನ್ಸಿಲ್ ಈಗಾಗಲೇ ಭಾರತ ದೇಶದ ಹಲವಾರು ಶಿಕ್ಷಣ ಸಂಸ್ಥೆಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಸ್ಥೆಗಳ ಜೊತೆಗೆ ಪಾಲುದಾರಿಕೆ ಜೊತೆಗೆ ಅತ್ಯುತ್ತಮ ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸಿ ವಿದ್ಯಾರ್ಥಿ ಸಮೂಹ ಬೆಳವಣಿಗೆಗೆ ಸಹಕಾರ ನೀಡಲು ಪ್ರಯತ್ನಿಸಲಾಗುವುದು. 800 ಎಕರೆ ಪ್ರದೇಶದ ಕ್ಯಾಂಪಸಿನ ಗುಲಬರ್ಗಾ ವಿವಿಯ ಪರಿಸರ ಚೆನ್ನಾಗಿದೆ. ಇಲ್ಲಿನ ವಿದ್ಯಾರ್ಥಿಗಳ ಕಲಿಕಾಸಕ್ತಿ ಮತ್ತು ಉತ್ಸಾಹ ನನಗೆ ಅರ್ಥವಾಗಿದೆ, ಭವಿಷ್ಯದಲ್ಲಿ ಇನ್ನು ಅತ್ಯುತ್ತಮ ಸಮ್ಮೇಳನ ನಡೆಸಿ ವಿದ್ಯಾರ್ಥಿಗಳ ಜ್ಞಾನ ಮಟ್ಟ ವೃದ್ಧಿಗೆ ಪ್ರಯತ್ನ ಮಾಡಲಾಗುವುದು. – ಶ್ರೀಮತಿ ಜನಕ ಪುಷ್ಪನಾಥನ್, ಬ್ರಿಟಿಷ್ ಕೌನ್ಸಿಲನ ನಿರ್ದೇಶಕಿ ಹಾಗೂ ದಕ್ಷಿಣ ಭಾರತ ಚೆನೈನ ಬ್ರಿಟಿಷ್ ಹೈ ಕಮಿಷನ್.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here