ಮೌಲ್ಯಗಳು ಒಳಗೊಂಡ ವಚನ ಸಾಹಿತ್ಯ ಸಾಮಾಜಕ್ಕೆ ಸಮಾನತೆ ಸಾರುತ್ತವೆ

0
110

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜನವರಿ 19 ರಂದು ನಗರದ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿರುವ ಒಂದು ದಿನದ ಜಿಲ್ಲಾ ಪ್ರಥಮ ವಚನ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಹಾಗೂ ಗೌರವಾಧ್ಯಕ್ಷರನ್ನಾಗಿ ನೇಮಕ ಮಾಡಿರುವ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ. ಸುರೇಶ ಆರ್ ಸಜ್ಜನ್ ಹಾಗೂ ಹೆಚ್.ಕೆ.ಇ. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ. ಎಸ್ ಬಿ ಕಾಮರೆಡ್ಡಿ ಅವರನ್ನು ಅಧಿಕೃತವಾಗಿ ಆಹ್ವಾನ ನೀಡಿ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಸುರೇಶ ಸಜ್ಜನ್ ಹಾಗೂ ಡಾ. ಎಸ್ ಬಿ ಕಾಮರೆಡ್ಡಿ ಅವರು, ಮಾನವೀಯ ಮೌಲ್ಯಗಳನ್ನು ಒಳಗೊಂಡ ವಚನ ಸಾಹಿತ್ಯ ಸಾಮಾಜಿಕ ಸಮಾನತೆ ಸಾರುತ್ತದೆ. ಜಾತಿಯ ಗಡಿ ಮೀರಿ ಶರಣರ ವಚನಗಳು ಬೆಳಗುತ್ತಿವೆ. ಸಮಾನತೆಯ ತತ್ವಗಳಾದ ಶರಣರ ವಿಚಾರಗಳು ಇಂದಿನ ಹೊಸ ಪೀಳಿಗೆಗೆ ಮುಟ್ಟಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ವಚನ ಸಾಹಿತ್ಯ ಸಮ್ಮೇಳನಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.

Contact Your\'s Advertisement; 9902492681

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಸಮಾನತೆ ಸಂದೇಶ ಸಾರುವ ಶರಣ ತತ್ವ ಸಿದ್ಧಾಂತ ಪ್ರತಿಯೊಬ್ಬರೂ ಅಳವಡಿಸಿಕೊಂಡರೆ ಮಾತ್ರ ನೈತಿಕ ಸಮಾಜ ಕಟ್ಟುವುದು ಕಷ್ಟವೇನಲ್ಲ. 12ನೇ ಶತಮಾನದಲ್ಲಿದ್ದ ಅಸಮಾನತೆ ಆಶಯದ ವಚನಗಳ ರಚನೆ ಮಾಡಿದರು. ಜನಸಾಮಾನ್ಯರಿಗೆ ದನಿ ನೀಡಿದ ವಚನಗಳು ಸಾಹಿತ್ಯದ ಅದ್ಭುತ ಮಾಧ್ಯಮವಾಗಿದೆ. ವಚನಗಳ ತಿರುಳನ್ನು ಸಮಾಜಕ್ಕೆ ಮುಟ್ಟಿಸುವ ಪ್ರಯತ್ನದೊಂದಿಗೆ ವಚನ ಸಾಹಿತ್ಯ ಸಮ್ಮೇಳನ ಪರಿಷತ್ತು ಇದೇ ಮೊದಲ ಬಾರಿಗೆ ಆಯೋಜಿಸಲಾಗಿದೆ ಎಂದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಎಸ್ ಅಂಡಗಿ, ಕೋಶಾಧ್ಯಕ್ಷ ಶರಣರಾಜ್ ಛಪ್ಪರಬಂದಿ, ಸಂಘಟನಾ ಕಾರ್ಯದರ್ಶಿ ರವೀಂದ್ರಕುಮಾರ ಭಂಟನಳ್ಳಿ, ಪ್ರಮುಖರಾದ ಜ್ಯೋತಿ ಕೋಟನೂರ, ಧರ್ಮಣ್ಣಾ ಹೆಚ್. ದನ್ನಿ, ಡಾ. ರೆಹಮಾನ್ ಪಟೇಲ್, ಮಾಲಾ ದಣ್ಣೂರ, ಡಾ. ಬಾಬುರಾವ ಶೇರಿಕಾರ, ಜಗದೀಶ ಮರಪಳ್ಳಿ, ಡಾ. ವಿವೇಕಾನಂದ ಟೆಂಗಳಿ, ಮಲ್ಲಿನಾಥ ಸಂಗಶೆಟ್ಟಿ, ಸೋಮಶೇಖರ ನಂದಿಧ್ವಜ, ಸೋಮಶೇಖರಯ್ಯಾ ಹೊಸಮಠ, ಬಸಯ್ಯಾ ಸ್ವಾಮಿ, ಶಿವಲಿಂಗಪ್ಪ ಅಷ್ಟಗಿ, ವಿನೋದಕುಮಾರ ಜೇನವೇರಿ, ಶಿವಾನಂದ ಪೂಜಾರಿ, ಮನೋಹರ ಪೊದ್ದಾರ, ಬಾಬುರಾವ ಪಾಟೀಲ ಚಿತ್ತಕೋಟಾ, ಡಾ. ಕೆ.ಎಸ್. ಬಂಧು, ವಿಶ್ವನಾಥ ತೊಟ್ನಳ್ಳಿ, ಮಂಜುನಾಥ ಕಂಬಾಳಿಮಠ, ಹೆಚ್ ಎಸ್ ಬರಗಾಲಿ, ಕಲ್ಪನಾ ಗೋಲ್ಡ್‍ಸ್ಮಿತ್, ರಮೇಶ ಪಾಟೀಲ ಸೇರಿದಂತೆ ಹಲವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here