ಸ್ವಾಮಿಜೀ ಸಂದೇಶ ಸಾಧನೆಗೆ ಸಾಕ್ಷಿ: ಯಾರಿ

0
81

ವಾಡಿ: ಏಳಿ ಎದ್ದೇಳಿ ಗುರಿಮುಟ್ಟುವ ತನಕ ನಿಲ್ಲದಿರಿ ಎಂಬ ಸ್ವಾಮಿ ವಿವೇಕಾನಂದರ ಸಂದೇಶ ಎಲ್ಲರ ಸಾಧನೆಯ ಬದುಕಿಗೆ ಪ್ರೇರಣದಾಯಕ ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಹೇಳಿದರು.

ಪಟ್ಟಣದ ಬಿಜಿಪಿ ಪಕ್ಷದ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.

Contact Your\'s Advertisement; 9902492681

ದೇಶವನ್ನು ಮುನ್ನಡೆಸಲು ಸಶಕ್ತವಾದ ಯುವಪಡೆ ಜಾಗೃತ ಗೊಳಿಸುವುದೆ ನನ್ನ ಗುರಿ ಎನ್ನುತ್ತಿದ್ದ ಸ್ವಾಮಿಜೀ ಅವರು ಮಾನಸಿಕ, ದೈಹಿಕ, ಅಧ್ಯಾತ್ಮಿಕ, ನೈತಿಕ, ಸಾಮಾಜಿಕವಾಗಿ ಎಂದೂ ಶಕ್ತಿ ಕಳೆದುಕೊಳ್ಳಬಾರದೆಂದು ಯುವಕರಿಗೆ ಕರೆ ನೀಡಿದನ್ನು ಅವರ ವಾಣಿಯಲ್ಲಿ ಕಾಣಬಹುದು. ಅವರ ಸಂದೇಶ ನಾವೆಲ್ಲರೂ ಅಳವಡಿಸಿಕೊಂಡಾಗ ಮಾತ್ರ ಭಾರತೀಯ ಸಂಸ್ಕೃತಿಯನ್ನು ಉಳಿಸಿ, ಬೆಳಸಿ, ಉತ್ತುಂಗಕ್ಕೆ ಕೊಂಡೊಯ್ಯುವುದಕ್ಕೆ ಸಾಧ್ಯವಾಗುತ್ತದೆ.

ಸೆಪ್ಟೆಂಬರ್ 11, 1893 ರಂದು ಅಮೆರಿಕದಲ್ಲಿ ನನ್ನ ಸಹೋದರ ಸಹೋದರಿಯರೇ ಎಂದು ಹೇಳುತ್ತಾ ಜಗತ್ತಿನ ಮನಸೆಳೆದರು. ಅವರು ನಮ್ಮ ತಾಯ್ನಾಡಿನ ವೇದಾಂತದ, ಆಧ್ಯಾತ್ಮಿತದ ತತ್ವಗಳ ಬಗ್ಗೆ ಎಲ್ಲರೂ ಬೇರಗಾಗುವಂತೆ ಭಾರತದ ಹಿರಿಮೆಯನ್ನು ಸಾರಿದರು.

ಮಾನವೀಯತೆ ಮತ್ತು ಸಹೋದರತ್ವದ ಭಾವನೆಯಿಂದ ಬದುಕುವುದನ್ನು ಕಲಿಸಿದರು. ಹೀಗಾಗಿ ನಾವೆಲ್ಲರೂ ಅವರ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅನುಸರಿಸಿ ಉತ್ತಮ ಕಾರ್ಯಗಳನ್ನು ಮಾಡೋಣ. ಹಾಗೆಯೇ ಅವರ ಸಂದೇಶವನ್ನು ಎಲ್ಲರಿಗೂ ಸಾರೋಣ ಎಂದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಎಸ್ ಸಿ ಮೂರ್ಚಾ ತಾಲ್ಲೂಕು ಅಧ್ಯಕ್ಷ ರಾಜು ಮುಕ್ಕಣ್ಣ, ಯುವ ಮೂರ್ಚಾ ಅಧ್ಯಕ್ಷ ಭಾಗಣ್ಣ ದೊರೆ, ಕಾರ್ಯದರ್ಶಿ ಅರ್ಜುನ ದಹಿಹಂಡೆ. ಮುಖಂಡರಾದ ಸಿದ್ದಣ್ಣ ಕಲ್ಲಶೆಟ್ಟಿ, ರಾಮಚಂದ್ರ ರಡ್ಡಿ,ಅರ್ಜುನ ಕಾಳೆಕರ, ಭೀಮರಾವ ದೊರೆ, ಶರಣಗೌಡ ಚಾಮನೂರ,ಅಶೋಕ ಹರನಾಳ,ಹರಿ ಗಲಾಂಡೆ. ಸ್ಯಾಮಸನ್ ರಡ್ಡಿ,ಶಿವಶಂಕರ ಕಾಶೆಟ್ಟಿ, ಚನ್ನಯ್ಯ ಸ್ವಾಮಿ,ಬಸವರಾಜ ಕಿರಣಗಿ,ಕಿಶನ ಜಾಧವ, ದತ್ತಾ ಖೈರೆ,ಸತೀಶ ಸಾವಳಗಿ, ನಿರ್ಮಲ ಇಂಡಿ,ಯಂಕಮ್ಮ ಗೌಡಗಾಂವ, ಉಮಾದೇವಿ ಗೌಳಿ, ಅನುಸುಬಾಯಿ ಪವಾರ,ಶರಮ್ಮ ಯಾದಗಿರ,ದೆವಕ್ಕಿ ಪುಜಾರಿ, ಪ್ರೇಮ ರಾಠೋಡ,ಅಯ್ಯಣ್ಣ ದಂಡೋತಿ, ಮಹೇಂದ್ರ ಕುಮಾರ ಪುಜಾರಿ,ಬಾಬು ಕುಡಿ,ವಿಶ್ವರಾಧ್ಯ ತಳವಾರ, ಬಸವರಾಜ ಪಗಡಿಕರ್, ಪರಮೇಶ್ವರ ಚೊಪಡೆ, ಮಲ್ಲಿಕಾರ್ಜುನ ಸಾತಖೇಡ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here