ಸುರಪುರ:ತಾಲೂಕಿನ ದೇವಿಕೇರಾ ಶಾಲೆಯಲ್ಲಿ ಕೋರಮಂಡಲ್ ಇಂಟರನ್ಯಾಷನಲ್ ಲಿಮಿಟೆಡ್ ಕಂಪನಿ ವತಿಯಿಂದ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಶಾಲಾ ಮಕ್ಕಳಿಗಾಗಿ ರಂಗೋಲಿ ಸ್ಪರ್ಧೆ ನಡೆಸಲಾಯಿತು.
ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದ ಗ್ರಾಮದ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಆರ್.ಕೆ.ಕೋಡಿಹಾಳ ಮಾತನಾಡಿ, ಎಲ್ಲಾ ಮಕ್ಕಳಲ್ಲಿ ತಮ್ಮದೇ ಆದ ಪ್ರತಿಭೆ ಇದ್ದೆ ಇರುತ್ತದೆ ಆ ಪ್ರತಿಭೆಯನ್ನು ಗುರುತಿಸುವುದು ತುಂಬಾ ಮುಖ್ಯ, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಕಾರ್ಯಕ್ಷಮತೆಯನ್ನು ಸುಧಾರಿಸಲು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಉತ್ತಮ ಮಾರ್ಗವಾಗಿದೆ, ವಿದ್ಯಾರ್ಥಿಗಳಿಗೆ ಈ ಚಟುವಟಿಕೆಗಳು ಪ್ರೇರಣೆ ನೀಡುವುದು. ಕೃಷಿಯ ಜೊತೆ ಕೋರಮಂಡಲ್ ಸಂಸ್ಥೆಯವರು ಇಂತಹ ಶೈಕ್ಷಣಿಕ ಕಾರ್ಯಕ್ರಮ ಏರ್ಪಡಿಸಿರುವುದಕ್ಕೆ ಸುತ್ತಾಹ್ರ್ಯ ಎಂದು ಶ್ಲಾಘಿಸಿದರು.
ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಯ ಶಿಕ್ಷಣದ ಪ್ರಮುಖ ಭಾಗವಾಗಿದೆ ದಿನನಿತ್ಯದ ಓದಿನ ಜೊತೆಗೆ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳು ತುಂಬಾ ಅವಶ್ಯಕ ವಿದ್ಯಾರ್ಥಿಗಳಿಗೆ ಪ್ರಮುಖ ಕೌಶಲ್ಯಗಳನ್ನು ಕಲಿಯಲು ಮತ್ತು ಅಮೂಲ್ಯವಾದ ಅನುಭವಗಳನ್ನು ಪಡೆಯಲು ಮಕ್ಕಳಲ್ಲಿರುವ ಸುಪ್ತ ಕಲೆ ಹಾಗೂ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ತುಂಬಾ ಅಗತ್ಯ ಎಂದರು.
ಸಿಬ್ಬಂದಿಗಳಾದ ನಿಂಗಣ್ಣ ಯಾದವ್,ದೇವು ಟಣಕೆದಾರ ಹಾಗೂ ಶಿಕ್ಷಕರಾದ ಗಿರೀಶ, ಅಮರವ್ವ, ಶಿವಶರಣಯ್ಯ, ಮಹಾದೇವಿ ಇತರರಿದ್ದರು. ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿನಿಯರು ಬಿಡಿಸಿದ ಬಣ್ಣ ಬಣ್ಣದ ರಂಗೋಲಿಗಳು ನೋಡುಗರನ್ನು ಆಕರ್ಷಿಸಿತು.