ಕಲಬುರಗಿ ಬಿಜೆಪಿ ಶಾಸಕ ಬಸವರಾಜ್ ಮತ್ತಿಮುಡ ಕಾರು ಪಲ್ಟಿ

0
156

ಕಲಬುರಗಿ: ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮುಡ ಸಂಚರಿಸುತ್ತಿದ ಫಾರ್ಚುನರ್ ಕಾರು ಪಲ್ಟಿಯಾಗಿರುವ ಘಟನೆ ಪಾಳಾ ಗ್ರಾಮದ ಹೊರವಲಯದಲ್ಲಿ ಭಾನುವಾರ ಮುಂಜಾನೆ ನಡೆದಿದೆ.

Contact Your\'s Advertisement; 9902492681

ಇಂದು ಪಾಳಾ ಗ್ರಾಮಕ್ಕೆ ಭೇಟಿ ನೀಡಿ ಶಹಾಬಾದಗೆ ತೆರಳುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದ್ದು, ಕಾರಿನಲ್ಲಿದ ಶಾಸಕರು, ಕಾರು ಚಾಲಕ ಸೇರಿ ಕೆಲ ಮುಖಂಡರಿಗೆ ಸಣ್ಣಪುಟ ಗಾಯಗಳಾಗಿದ್ದು, ಅಪಘಾತದ ನಂತರ ಪರ್ಯಾಯ ಕಾರು ವ್ಯವಸ್ಥೆ ಮಾಡಿ ಶಾಸಕರಿಗೆ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು. ಭಾರಿ ಅವಘಡ ತಪ್ಪಿದೆ.

ಕಲಬುರಗಿ ವಿಶ್ವ ವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದ್ದು. ಶಾಸಕರ ಕುಟುಂಬಸ್ಥರು ಸೇರಿದಂತೆ ಬೆಂಬಲಿಕರು ಶಾಸಕರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಧಾವಿಸುತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here