ಮನೋವಿಕಾರದ ಶಿಕ್ಷಣಕ್ಕಿಂತ ಮನೋವಿಕಾಸದ ಶಿಕ್ಷಣ ಅಗತ್ಯ

0
13

ಕಲಬುರಗಿ: ಹೆಣ್ಣು, ಹೊನ್ನು, ಮಣ್ಣಿನ ಬೆನ್ನು ಹತ್ತಿದ ಜಗತ್ತು ಇಂದು ಶ್ರೀಮಂತರಾಗಬೇಕು ಎಂಬ ಸ್ಪರ್ಧೆಯಲ್ಲಿದೆ. ಆದರೆ ಅಲ್ಲಮಪ್ರಭುದೇವರ ನಿಜ ಸಂಪತ್ತು ಹೊನ್ನು, ಹೆಣ್ಣು, ಮಣ್ಣು ಅಲ್ಲ. ಜ್ಞಾನ ನಿಜವಾದ ಸಂಪತ್ತು ಎಂದು ಪತ್ರಕರ್ತ- ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಅಭಿಪ್ರಾಯಪಟ್ಟರು.

ನಗರದ ಭೋಗೇಶ್ವರ ಕನ್ನಡ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾಲ ಬದಲಾದಂತೆ ಮೌಲ್ಯಗಳು ಸಹ ಬದಲಾಗುತ್ತವೆ. ಒಂದು ಕಾಲದ ಮೌಲ್ಯ ಇನ್ನೊಂದು ಕಾಲಕ್ಕೆ ಅಪಮೌಲ್ಯವಾಗುತ್ತವೆ ಎಂದು ಹೇಳಿದರು.

Contact Your\'s Advertisement; 9902492681

ಒಂದು ಕಾಲದಲ್ಲಿ ಗುಣವೇ ಮೌಲ್ಯವಾಗಿದ್ದಿತು. ಆದರೆ ಇಂದು ಹಣವೇ ಮೌಲ್ಯವಾಗುತ್ತಿದೆ. ಬಸವಾದಿ ಶರಣರು ಮೌಲ್ಯಗಳಿಗಾಗಿಯೇ ಬದುಕಿದವರು. ಅವರ ಜೀವನಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ವಿವರಿಸಿದರು.

ಓದಿ ಪದವಿ ಪಡೆಯುವುದೇ ನಿಜವಾದ ಶಿಕ್ಷಣವಲ್ಲ. ಓದಿದ, ಕೇಳಿದ ಫಲ ಬದುಕಿನಲ್ಲಿ ಕಾಣಬೇಕು. ಮನೋವಿಕಾರದ ಶಿಕ್ಷಣಕ್ಕಿಂತ ಮನೋವಿಕಾಸದ ಶಿಕ್ಷಣ ಅಗತ್ಯ ಎಂದು ಅವರು ಪ್ರತಿಪಾದಿಸಿದರು.

ಶಾಲೆಯ ಮುಖ್ಯಗುರು ಮಹಾಂತೇಶ ಬಿರಾದರ ಮಾತನಾಡಿ, ಸ್ವಾಮಿ ವಿವೇಕಾನಂದರ ಕ್ರೀಯಾಶೀಲ ಬದುಕನ್ನು ಅಳವಡಿಸಿಕೊಳ್ಳುವ ಮೂಲಕ ಬದುಕಿಗೆ ಬೆಲೆ ತಂದುಕೊಳ್ಳಬೇಕು ಎಂದು ಕರೆ ನೀಡಿದರು.

ಸಿದ್ಧಗಂಗಾ ಶಿಕ್ಷಣ ಮತ್ತು ಕಲ್ಯಾಣ ಟ್ರಸ್ಟ್ ಅಧ್ಯಕ್ಷ ಲಕ್ಷ್ಮೀಪುತ್ರ ರಾಂಪುರೆ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಶಾಲೆಯ ಮುಖ್ಯಗುರು ಗುಂಡಪ್ಪ ಚಿಂಚೋಳಿ, ಶಿಕ್ಷಕ ಎನ್.ಬಿ. ಬಾವಿಕಟ್ಟಿ ವೇದಿಕೆಯಲ್ಲಿದ್ದರು.

ಶರಣರು ಒತ್ತು ಕೊಟ್ಟಿದ್ದು ಆಂತರಿಕ ಶಿಕ್ಷಣಕ್ಕೆ. ಅದಕ್ಕಾಗಿ ಅವರು ಶಾಲಾ- ಕಾಲೇಜುಗಳನ್ನು ತೆರೆಯಲಿಲ್ಲ. ಬದಲಾಗಿ ಅನುಭವ ಮಂಟಪ ಪ್ರಾರಂಭಿಸಿದರು. ಇಂದಿನ ದಾವಂತದ ಬದುಕಿಗೆ ಶರಣರ ವಚನಗಳು ದಿವ್ಯ ಔಷಧಿಗಳಾಗಿವೆ. – ಡಾ. ಶಿವರಂಜನ ಸತ್ಯಂಪೇಟೆ, ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here