ಕಲಬುರಗಿ :ಹೊಸ ವರ್ಷ 2024 ಹಾಗೂ ಮಕರ ಸಂಕ್ರಮಣದ ಮನೀಷ ಪತ್ರಿಕೆಯ ಕ್ಯಾಲೆಂಡರ್ ಮಕ್ತಂಪುರದ ಗದ್ದುಗೆಮಠದಲ್ಲಿ ಬಿಡುಗಡೆಗೊಳಿಸಲಾಯಿತು.
ಕಲಬುರಗಿ-ಹುಬ್ಬಳ್ಳಿ ಗದ್ದುಗೆ ಮಠದ ಮಹಾಸ್ವಾಮಿಗಳಾದ ಶ್ರೀ ಮ.ನಿ.ಪ್ರ. ಚರಲಿಂಗ ವಿಜಯಮಹಾಂತ ದೇವರು ಕ್ಯಾಲೆಂಡರ್ ಬಿಡುಗಡೆ ಮಾಡಿ ಆಶೀರ್ವಚನ ನೀಡಿದರು.
ಸಮಾರಂಭದಲ್ಲಿ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಅವರ ಪುತ್ರ ಕಾಂಗೈನ ಯುವನಾಯಕ ಅಭೀμÉೀಕ ಪಾಟೀಲ್, ಬಿಜೆಪಿ ಮುಖಂಡರಾದ ಶಿವಕಾಂತ ಮಹಾಜನ್, ಕಾಂಗೈ ಮುಖಂಡ ಶಾಮ ನಾಟೀಕರ್, ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಭವಾನಿಸಿಂಗ್ ಠಾಕೂರ ಅವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಸಭೆಯಲ್ಲಿ ಉದ್ಯಮಿಗಳಾದ ಸಂತೋಷ ಕಂಠಿ, ವೇಲಾರಾಮ, ಶಾಂತಕುಮಾರ ರೆಡ್ಡಿ, ಬಾವಿಕಟ್ಟಿ ಪ್ರಕಾಶನದ ಮಹೇಶ ಭಾವಿಕಟ್ಟಿ, ಪತ್ರಕರ್ತ ಮಹಾದೇವ ಗೋಳಾ, ವಿಜಯಕುಮಾರ ನಂದ್ಯಾಳ, ಸಚೀನ ನಂದ್ಯಾಳ್, ವೆಂಕಟೇಶ ಭಜಂತ್ರಿ, ಕುಮಾರ, ವಿಶಾಲ ಕುಲಕರ್ಣಿ, ಸಿದ್ದಿಕ್ ಪಟೇಲ್ ಸೇರಿದಂತೆ ಹಲವಾರು ಜನರು ಭಾಗವಹಿಸಿದ್ದರು.
ಸಭೆಯ ಆರಂಭದಲ್ಲಿ ಮನೀಷ ಪತ್ರಿಕೆಯ ಸಂಪಾದಕರಾದ ರಾಜು ದೇಶಮುಖ ಅವರು ಎಲ್ಲರನ್ನು ಸ್ವಾಗತಿಸಿ, ಸ್ವಾಗತ ಭಾಷಣ ಮಾಡಿದರು.
ಗದ್ದುಗೆಮಠದ ಶ್ರೀಗಳಿಂದ ಪತ್ರಿಕೆಯ ಸಂಪಾದಕ ರಾಜು ದೇಶಮುಖ, ಪತ್ರಕರ್ತ ರಾಕೇಶ ದೇಶಮುಖ ಸೇರಿದಂತೆ ಅತಿಥಿ ಗಣ್ಯಮಾನ್ಯರುಗಳಿಗೆ ಶಾಲು ಹೋದಿಸಿ ಸನ್ಮಾನಿಸಿ, ಆಶೀರ್ವಾದ ನೀಡಿದರು.
2024ರ ಸಾಲಿನ ವಿಶೇಷವಾಗಿ ಈ ತಿಂಗಳು ಆಯೋಧ್ಯೆಯಲ್ಲಿನ ಶ್ರೀರಾಮನ ಪ್ರಾಣಪ್ರತಿμÁ್ಠಪೆನಯ ನಿಮಿತ್ಯವಾಗಿ ಶ್ರೀರಾಮ ಹಾಗೂ ಆಂಜನೆಯರ ಭಾವಚಿತ್ರವಿರುವ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು. ಅಲ್ಲದೇ ಹೊಸ ವರ್ಷದ ಅಂಗವಾಗಿ ಬಾಲಾಜಿ ದೇವರ ಭಾವಚಿತ್ರವಿರು ವ ಕ್ಯಾಲೆಂಡರ್ ಸಹ ಬಿಡುಗಡೆಗೊಳಿಸಲಾಯಿತು.
ಸಭೆಯ ನಿರ್ವಹಣೆಯನ್ನು ಉಪನ್ಯಾಸಕ ಡಾ. ನಾನಾಗೌಡ ಪಾಟೀಲ್ ಅವರು ಮಾಡಿ, ಕೊನೆಯಲ್ಲಿ ವಂದಿಸಿದರು.