ಅನುಭವ ಮಂಟಪದ ಹಾಗೇ ನಡೆಸಲು ತೀರ್ಮಾನ: ಜ.19: ವಚನ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ

0
122

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಇದೇ ಮೊದಲ ಬಾರಿಗೆ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಜನವರಿ 19 ರಂದು ಹಮ್ಮಿಕೊಂಡಿರುವ ಒಂದು ದಿನದ ಕಲಬುರಗಿ ಜಿಲ್ಲಾ ಪ್ರಥಮ ವಚನ ಸಾಹಿತ್ಯ ಸಮ್ಮೇಳನವನ್ನು ಅನುಭವ ಮಂಟಪದ ರೀತಿಯಲ್ಲಿ ಅರ್ಥಪೂರ್ಣವಾಗಿ ನಡೆಸಲು ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಸಮ್ಮೇಳನಾಧ್ಯಕ್ಷರಾಗಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ನಿರ್ದೇಶಕಿ-ಹಿರಿಯ ಸಾಹಿತಿ ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ಸುರೇಶ ಆರ್. ಸಜ್ಜನ್ ತಿಳಿಸಿದ್ದಾರೆ.

ಸಮ್ಮೇಳನದ ಆಮಂತ್ರಣ ಪತ್ರಿಕೆಗಳನ್ನು ಬಿಡುಗಡೆಗೊಳಿಸಿ ಕಾರ್ಯಕ್ರಮದ ಮಾಹಿತಿ ನೀಡಿದ ಅವರು, ಮಾನವೀಯತೆ ಮರೆಯಾಗುತ್ತಿರುವುದರಿಂದ ದೇಶದೆÀಲ್ಲೆಡೆ ಮೆರೆಯುತ್ತಿರುವ ಭ್ರಷ್ಟಾಚಾರ, ಅನಾಚಾರ, ಅತ್ಯಾಚಾರಗಳಂಥ ಘಟನೆಗಳು ಇಂದಿನ ಮನಸ್ಸುಗಳು ಮಲೀನವಾಗಿರುವುದನ್ನು ಸಾರಿ ಹೇಳುತ್ತದೆ. ನಂಬಿಕೆ, ವಿಶ್ವಾಸ, ಪ್ರಾಮಾಣಿಕತೆ, ಪರೋಪಕಾರದಂತಹ ಮಾತುಗಳು ಪುಸ್ತಕದ ಪುಟಗಳಿಂದ ಹೊರ ಬರುತ್ತಿಲ್ಲ. ಮಾನವನ ಪ್ರತಿಯೊಂದು ಚಟುವಟಿಕೆಗಳಿಗೂ ಅವನ ಮಾನಸಿಕ ಚಿಂತನೆಯೇ ಪ್ರಮುಖ ಕಾರಣ ಎಂಬುದನ್ನು ಎಲ್ಲರೂ ಒಪ್ಪಿದ ಮಾತಾಗಿದೆ.

Contact Your\'s Advertisement; 9902492681

ಮಲೀನ ಮನಸ್ಸುಗಳು ಮತ್ತೆ ಮಿನುಗಬೇಕಾದರೆ ಶರಣ ಚಿಂತನೆ ಮಾನಸಿಕ ಔಷಧಿಯಾಗಿದೆ. ಯುವ ಪೀಳಿಗೆ ಹಾಗೂ ರಾಷ್ಟ್ರದ ಭವಿಷ್ಯದ ದೃಷ್ಟಿಯಿಂದ ಶರಣರು ಸಾರಿದ ವಚನಗಳ ಸಾರ ನಮ್ಮ ಮಾನಸಿಕ ನೆಮ್ಮದಿಗೆ ಪೂರಕವಾಗಿದೆ. ಹಾಗಾಗಿ, ಹಿರಿಯರ ಜೀವನಾನುಭವ ತುಂಬಿದ ಮಾರ್ಗದರ್ಶನದಿಂದ ಇಂದಿನ ಯುವ ಜನತೆಗೆ ಚಿಂತನೆಯ ಸಾರ ತಲುಪಿಸುವ ಗುರಿಯನ್ನು ಈ ಸಮ್ಮೇಳನ ಹೊಂದಿದೆ ಎಂದು ಅವರು ವಿವರಿಸಿದರು.

ಅಂದು ಬೆಳಗ್ಗೆ 9.30 ಕ್ಕೆ ಮಿನಿ ವಿಧಾನ ಸೌಧದಿಂದ ಕನ್ನಡ ಭವನದವರೆಗೆ ಜರುಗುವ ವಚನ ಸಾಹಿತ್ಯದೊಂದಿಗೆ ಸಾಂಸ್ಕøತಿಕ ಮೆರವಣಿಗೆಗೆ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಚಾಲನೆ ನೀಡಲಿದ್ದು, ತಹಸೀಲ್ದಾರ್ ನಾಗಮ್ಮ ಕಟ್ಟಿಮನಿ, ಕಲ್ಯಾಣಕುಮಾರ ಶೀಲವಂತ, ಮಲ್ಲಿನಾಥ ಪಾಟೀಲ ಕಾಳಗಿ, ಗೌಡೇಶ ಬಿರಾದಾರ, ವಿದ್ಯಾಸಾಗರ ದೇಶಮುಖ, ಮಲ್ಲಿನಾಥ ದೇಶಮುಖ ಸೇರಿ ಕಸಾಪ ತಾಲೂಕಾಧ್ಯಕ್ಷರುಗಳು ಉಪಸ್ಥಿತರಿರುವರು.

ವೇದಿಕೆ ಸಮಾರಂಭ: ಶತಾಯುಷಿ ಲಿಂ. ಭೋಗಲಿಂಗಪ್ಪ ಶಾಬಾದಿ ಪಟಪಳ್ಳಿ ವೇದಿಕೆಯಡಿಯಲ್ಲಿನ ಸಮಾರಂಭವನ್ನು ಮಾಜಿ ಸಿಎಂ ಜಗದೀಶ ಶೆಟ್ಟರ್ ಉದ್ಘಾಟಿಸಲಿದ್ದು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಮನ್ ಮಾತೋಶ್ರೀ ಡಾ. ದಾಕ್ಷಾಯಣಿ ಎಸ್. ಅಪ್ಪಾ ಅವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ನಿರ್ದೇಶಕಿ- ಹಿರಿಯ ಲೇಖಕಿ ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ ಅವರು ಸರ್ವಾಧ್ಯಕ್ಷತೆ ಸ್ಥಾನ ವಹಿಸಿಕೊಳ್ಳಲಾಗಿದ್ದು, ವೈದ್ಯ ಸೇವಕ ಡಾ. ಎಸ್.ಬಿ.ಕಾಮರೆಡ್ಡಿ, ನಗರ ಪೊಲೀಸ್ ಕಮಿಷನರ್ ಚೇತನ್ ಆರ್., ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಜಂಟಿ ನಿರ್ದೇಶಕಿ ಬಸವರಾಜ ಹೂಗಾರ, ಧಾರವಾಡ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಉಪಸ್ಥಿತರಿರುವರು.

ಜಗವೇ ಕೂಡಲಸಂಗಮವಾಗಿಸುವ ಪರಿ ಗೋಷ್ಠಿ: ಮಧ್ಯಾಹ್ನ 12.30 ಕ್ಕೆ ಜಗವೇ ಕೂಡಲಸಂಗಮವಾಗಿಸುವ ಪರಿ ಶೀರ್ಷಿಕೆಯ ಮೊದಲನೇ ಗೋಷ್ಠಿಯಲ್ಲಿ ವಚನ ಸಾಹಿತ್ಯ ಮತ್ತು ಜಾತಿ ವಿನಾಶ ಕುರಿತು ಅಮೃತರಾವ ಪಾಟೀಲ ಗುಡ್ಡೇವಾಡಿ, ಸೌಹಾರ್ದ ಸಾರಿದ ಶರಣ ಸಂಸ್ಕøತಿ ಕುರಿತು ಡಾ. ಶಿವರಂಜನ್ ಸತ್ಯಂಪೇಟೆ ಮಾತನಾಡಲಿದ್ದಾರೆ. ಡಾ. ಶಿವಶರಣಪ್ಪ ಮೋತಕಪಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಡಿ.ಎನ್.ಪಾಟೀಲ. ಶರಣಗೌಡ ಪಾಟೀಲ, ಮಲ್ಲಣ್ಣ ನಾಗರಾಳ, ಶಾಮರಾವ ಸೂರನ್, ಅನುಪಮಾ ಸುಲೇಕರ್ ಉಪಸ್ಥಿತರಿರುವರು.

ಎನಗೊಲಿದ ವಚನ ಗೋಷ್ಠಿ: ಮಧ್ಯಾಹ್ನ 2.05 ಕ್ಕೆ ಎನಗೊಲಿದ ವಚನ ಎನ್ನುವ ಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ. ನಾಗೇಂದ್ರ ಮಸೂತಿ ವಹಿಸಲಿದ್ದು, ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ ದಿಕ್ಸೂಚಿ ನುಡಿಗಳನ್ನಾಡಲಿದ್ದಾರೆ. ಕಲ್ಯಾಣಪ್ಪ ಪಾಟೀಲ ಮಳಖೇಡ, ಈರಯ್ಯಾ ಹಿರೇಮಠ, ದಯಾನಂದ ಪಾಟೀಲ ಉಪಸ್ಥಿತರಿರುವರು.

ಆಧುನಿಕ ವಚನಕಾರರಾದ ಶೋಭಾದೇವಿ ಚೆಕ್ಕಿ, ಶಕುಂತಲಾ ಪಾಟೀಲ ಜಾವಳಿ, ಧರ್ಮಣ್ಣಾ ಹೆಚ್ ಧನ್ನಿ, ಡಾ. ಕೆ ಗಿರಿಮಲ್ಲ, ಸಂಗಮನಾಥ ರೇವತಗಾಂವ, ಡಾ. ರಾಜಶೇಖರ ಮಾಂಗ್, ಡಾ. ಚಿದಾನಂದ ಚಿಕ್ಕ ಮಠ, ಡಾ. ಪರ್ವಿನ್ ಸುಲ್ತಾನಾ, ಸಿದ್ಧರಾಮ ಯಳವಂತಗಿ, ಶಿಲ್ಪಾ ಜೋಶಿ, ಪಂಚಾಕ್ಷರಿ ಪೂಜಾರಿ ದಂಡಗುಂಡ, ಸದಾನಂದ ಪಾಟೀಲ ಜೇವರ್ಗಿ, ಗಿರಿಮಲ್ಲಪ್ಪ ವಳಸಂಗ ಅವರು ತಮ್ಮ ಸ್ವ ರಚಿತ ವಚನವೊಂದನ್ನು ವಾಚಿಸಲಿದ್ದಾರೆ.

ಸಾಂಸ್ಕøತಿಕ ಸಂವಾದ: ಮಧ್ಯಾಹ್ನ 3.30 ಕ್ಕೆ ನಡೆಯುವ ತಲ್ಲಣದ ಬದುಕಿಗೆ ವಚನ ಪರಿಹಾರ ಕುರಿತು ಸಮ್ಮೇಳನಾಧ್ಯಕ್ಷರೊಂದಿಗೆ ಸಾಂಸ್ಕøತಿಕ ಸಂವಾದ ನಡೆಯಲಿದ್ದು, ಹಿರಿಯ ಸಾಹಿತಿ ಹೆಚ್. ಬಿ.ತೀರ್ಥೆ, ಬಸವರಾಜ ಧೂಳಾಗುಂಡಿ, ಜಯಶ್ರೀ ಚಟ್ನಳ್ಳಿ, ಡಾ. ಶಿವಪುತ್ರ ಮಾವಿನ್, ಪದ್ಮಾವತಿ ಎನ್ ಮಾಲಿಪಾಟೀಲ, ಡಾ. ಗೀತಾ ಎಸ್ ಪಾಟೀಲ ಭಾಗವಹಿಸಲಿದ್ದಾರೆ.

ಸಮಾರೋಪ-ಸತ್ಕಾರ ಸಂಭ್ರಮ: ಇಳಿಹೊತ್ತು 4.05 ಕ್ಕೆ ನಡೆಯುವ ಸಮಾರಂಭದಲ್ಲಿ ಶಹಾಪೂರಿನ ಶರಣ ಸಾಹಿತಿ ಶಿವಣ್ಣ ಇಜೇರಿ ಸಮಾರೋಪ ನುಡಿಗಳನ್ನಾಡಲಿದ್ದಾರೆ. ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ದತ್ತಪ್ಪ ಸಾಗನೂರ, ಸುರೇಶ ಬಡಿಗೇರ, ಪ್ರಭುಲಿಂಗ ಮಹಾಗಾಂವಕರ್, ಶಿವಕುಮಾರ ಬಿದರಿ ಉಪಸ್ಥಿತರಿರುವರು. ವಿವಿಧ ಕ್ಷೇತ್ರದ ಪ್ರಮುಖರಾದ ಜಗದೀಶ ಮರಪಳ್ಳಿ, ಪ್ರೊ. ಶ್ರಿದೇವಿ ಹರವಾಳ, ಗೌರಿ ಓಂಪ್ರಕಾಶ ಕರಣಗಿ, ಶೈಲಜಾ ಚವ್ಹಾಣ, ಜಗದೇವಿ ಚೆಟ್ಟಿ, ರಮೇಶ ಪಾಟೀಲ ರಬನಳ್ಳಿ, ಜಗನ್ನಾಥ ರಾಚೋಟಿ, ಶಂಕ್ರೆಪ್ಪ ಎನ್ ಮಹಾಶೆಟ್ಟಿ ಡೊಂಗರಗಾಂವ, ಶಂಕರ ಕಟ್ಟಿ ಸಂಗಾವಿ, ಅಲ್ಲಾವುದ್ದೀನ್ ಸಾಗರ, ಸಂದೀಪ ದೇಸಾಯಿ, ಗಣೇಶರಾವ ಹುಲಿಮನಿ, ಧರ್ಮರಾಯ ಜವಳಿ, ಮೋದಿನ್ ಪಟೇಲ್, ಚಂದ್ರಕಾಂತ ನಾಟಿಕಾರ ರವರನ್ನು ಸತ್ಕರಿಸಲಾಗುವುದು. ಜಿಲ್ಲೆಯ ವಿವಿಧ ಶಾಲಾ ಮಕ್ಕಳಿಂದ ವಚನಾಧರಿತ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಜಿಲ್ಲಾ ಕಸಾಪ ಕಾರ್ಯದರ್ಶಿ ಶಿವರಾಜ ಅಂಡಗಿ, ಧರ್ಮಣ್ಣಾ ಹೆಚ್. ಧನ್ನಿ, ರವೀಂದ್ರಕುಮಾರ ಭಂಟನಳ್ಳಿ, ವಿಶ್ವನಾಥ ತೊಟ್ನಳ್ಳಿ, ರಾಜೇಂದ್ರ ಮಾಡಬೂಳ ಜಂಟಿಯಾಗಿ ಪ್ರಕಟಣೆಯಲ್ಲಿ ಹೇಳಿಕೆ ನೀಡಿದ್ದಾರೆ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಎರಡು ವರ್ಷಗಳಿಂದ ನಿರಂತರ ಸಾಹಿತ್ಯಕ ಚಟುವಟಿಕೆಗಳ ಜತೆಗೆ ಹಲವಾರು ಸಮಾಜಮುಖಿ ಕಾರ್ಯಗಳಿಂದ ಈಗಾಗಲೇ ಮನೆ ಮಾತಾಗಿದೆ. ಸಾಂದರ್ಭಿಕವಾಗಿ ಸಾಮಾಜಿಕ ಒಲವು-ನಿಲುವುಗಳಿಗೆ ಸ್ಪಂದಿಸುವುದುರ ಜತೆಗೆ ಇದೇ ಮೊದಲ ಬಾರಿಗೆ ವಚನ ಸಾಹಿತ್ಯ ಸಮ್ಮೇಳನವೊಂದನ್ನು ಹಮ್ಮಿಕೊಳ್ಳುವ ಮೂಲಕ ಶರಣರ ಆಶಯಗಳನ್ನು ಇಂದಿನ ಸಮಾಜಕ್ಕೆ ಮುಟ್ಟಿಸುವ ಕಾರ್ಯ ಮಾಡಲಾಗುತ್ತಿದೆ. – ವಿಜಯಕುಮಾರ ತೇಗಲತಿಪ್ಪಿ, ಕಸಾಪ ಜಿಲ್ಲಾಧ್ಯಕ್ಷರು ಕಲಬುರಗಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here