ಜ. 18, 19ರಂದು ವಿಟಿಯು ಟೆಕ್ನೊ-ಕಲ್ಚರಲ್ ಫೆಸ್ಟ್

0
14

ಕಲಬುರಗಿ: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ನ ಸ್ನಾತಕೋತ್ತರ ಕೇಂದ್ರ, ಪ್ರಾದೇಶಿಕ ಕಚೇರಿಯಲಿ ಜ. 18 ಮತ್ತು 19ರಂದು ಎರಡು ದಿನಗಳ ಕಾಲ ಪ್ರಾದೇಶಿಕ ತಾಂತ್ರಿಕ-ಸಾಂಸ್ಕೃತಿಕ ಉತ್ಸವ (ರಿಜನಲ್ ಟೆಕ್ನೊ-ಕಲ್ಚರಲ್ ಫೆಸ್ಟ್) ಅತ್ಯಂತ ವೈವಿಧ್ಯಮದಿಂದ ಆಯೋಜನೆ ಮಾಡಲಾಗುತ್ತಿದೆ ಎಂದು ವಿಟಿಯು ಪ್ರಾದೇಶಿಕ ಕೇಂದ್ರದ ನಿರ್ದೇಶಕ ರಾದ ಪೆÇ್ರ. ಬಸವರಾಜ ಗಾದಗೆ ತಿಳಿಸಿದರು.

ಯುಕ್ತಿ-2024ರ ಘೋಷವಾಕ್ಯದಡಿ ನಡೆಯಲಿರುವ ಎರಡು ದಿನಗಳ ಈ ಉತ್ಸವದಲ್ಲಿ ಹಲವು ವೈವಿಧ್ಯಮಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Contact Your\'s Advertisement; 9902492681

ನಗರದ ಕುಸನೂರ ರಸ್ತೆಯಲ್ಲಿರುವ ವಿಟಿಯು ಪ್ರಾದೇಶಿಕ ಕೇಂದ್ರದ ವಿಶಾಲ ಆವರಣದಲ್ಲಿ ಬೃಹತ್ ವೇದಿಕೆಯನ್ನು ಸಿದ್ಧಪಡಿಸಲಾಗುತ್ತಿದೆ. ವಿಟಿಯು ಕುಲಪತಿ ಡಾ. ಎಸ್.ವಿದ್ಯಾಶಂಕರ್ ಅವರ ಮಾರ್ಗದರ್ಶನದಲ್ಲಿ ಪ್ರಾದೇಶಿಕ ಕೇಂದ್ರದ ತಂಡ ಅಗತ್ಯ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ ಎಂದು ಅವರು ತಿಳಿಸಿದರು.

ಈ ಹಬ್ಬದ ಪ್ರಯುಕ್ತ ಮಂಥನ, ಚಿತ್ರಕಲೆ, ಕ್ರೀಡಾರತ್ನ, ಮನೋರಂಜನೆ, ಸಾಂಸ್ಕøತಿಕ ಸ್ಭೆರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ಕಲ್ಯಾಣ ಕರ್ನಾಟಕ ಭಾಗದ ವಿವಿಧ ವಿಶ್ವವಿದ್ಯಾಲಯಗಳು, ಇಂಜನೀಯರಿಂಗ್ ಕಾಲೇಜುಗಳು ಹಾಗೂ ಅಲವಾರು ಶಿಕ್ಷಣ ಸಂಸ್ಥೆಗಳು ಇದಕ್ಕೆ ಸಹಕಾರ, ಸಹಯೋಗ, ಸಹಭಾಗಿತ್ವ ನೀಡಿ ಈ ಉತ್ಸವದಲ್ಲಿ ಉತ್ಸುಕತೆಯಿಂದ ಭಾಗವಗಿಸಲಿವೆ. ಈ ಸ್ಪರ್ಧೆಗಳಲ್ಲಿ ವಿಜೇತರಾದರಿಗೆ ನಗದು ಬಹುಮಾನ ನೀಡಲಾಗುತ್ತಿದೆ ಎಂದು ವಿವರಿಸಿದರು.

ಜ.18 ರಂದು ಬೆಳಗ್ಗೆ 9.30ಕ್ಕೆ ರೀಜನಲ್ ಟೆಕ್ನೊ-ಕಲ್ಚರಲ್ ಫೆಸ್ ಉದ್ಘಾಟನೆ ನಡೆಯಲಿದೆ. ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯ ಗೌರವಾನ್ವಿತ ಸದಸ್ಯರಾದ ನಿವೃತ್ತ ಡಿಜಿಪಿ ರಾಘವೇಂದ್ರ ಔರಾದಕರ್ ಅವರ ಸಮ್ಮುಖದಲ್ಲಿ ಉದ್ಘಾಟನೆ ಜರುಗಲಿದ್ದು, ಕೆಕೆಆರ್‍ಡಿಬಿ ಕಾರ್ಯದರ್ಶಿಗಲಾದ ಸುಂದರೇಶ ಬಾಬು, ಪ್ರಸಾರ ಭಾರತಿ ಎಡಿಜಿ ಸುನಿಲ್ ಜಂಟಿಯಾಗಿ ಉದ್ಘಾಟನೆ ನೆರವೇರಿಸುವರು.

ಮುಖ್ಯ ಅತಿಥಿಗಳಾಗಿ ಜಿಲ್ಲಾದಿಕಾರಿಗಳಾದ ಬಿ. ಫೌಜಿಯಾ ತರನ್ನುಮ್, ನಗರ ಪೆÇಲೀಸ್ ಆಯುಕ್ತ ಆರ್. ಚೇತನ್, ಅತಿಥಿಗಳಾಗಿ ಅರಣ್ಯಾದಿಕಾರಿ ಸುಮೀತಕುಮಾರ ಎಸ್. ಪಾಟೀಲ್ ಪಾಲ್ಗೊಳ್ಳಲಿದ್ದಾರೆ. ವಿಟಿಯು ಕುಲಪತಿ ಡಾ. ವಿದ್ಯಾಶಂಕರ ಅಧ್ಯಕ್ಷತೆ ವಹಿಸಲಿದ್ದಾರೆಂದು ವಿವರಿಸಿದರು.

ಜ.19 ರಂದು ಸಂಜೆ ಉತ್ಸವದ ಸಮಾರೋಪ ಸಮಾರಂಭ ನಡೆಯಲಿದೆ. ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ ಪರ್ಸನ್ ಮಾತೋಶ್ರೀ ಡಾ. ದಾಕ್ಷಾಯಣಿ ಎಸ್. ಅಪ್ಪ ಹಾಗೂ ಹಜರತ್ ಖ್ವಾಜಾ ಬಂದೇ ನವಾಜ್ ವಿಶ್ವವಿದ್ಯಾಲಯದ ಕುಲಪತಿಗಳಾದ ಹಜರತ್ ಡಾ. ಸೈಯದ್ ಶಹಾ ಖುಸ್ರೋ ಹುಸೇನಿ ಅವರು ಸಾನಿಧ್ಯವನ್ನು ವಹಿಸಲಿದ್ದಾರೆ. ಕೆಕೆಆರ್‍ಡಿಬಿ ಅಧ್ಯಕ್ಷ, ಶಾಸಕ ಡಾ. ಅಜಯಸಿಂಗ್ ಭಾಗವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಶಾಸಕರುಗಳಾದ ಅಲ್ಲಮಪ್ರಭು ಪಾಟೀಲ್, ಕನೀಜ್ ಫಾತಿಮಾ, ಬಸವರಾಜ ಮತ್ತಿಮುಡು ಬಾಗವಹಿಸಲಿದ್ದಾರೆ. ಅತಿಥಿಗಳಾಗಿ ಈ ಭಾಗದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಪ್ರಮುಖರಾದ ಡಾ. ಬೀಮಾಶಂಕರ ಬಿಲಗುಂದಿ, ಎಸ್.ಆರ್. ರೆಡ್ಡಿ, ಸಾಗರ್ ಈಶ್ವರ ಖಂಡ್ರೆ, ದೀಲೀಪಕುಮಾರ ತಾಳಂಪಳ್ಳಿ, ಬಸವರಾಜ ಪಾಟೀಲ್ ಅಟ್ಟೂರ್, ಉದಯಶಂಕರ ಶೆಟ್ಟಿ, ಡಾ. ಉಮಾತಾಯಿ ದೇಶಮುಖ, ರಾಜೇಂದ್ರ ರೆಡ್ಡಿ, ಡಾ. ಯಶವಂತ ಭೂಪಾಲ ಸೇರಿದಂತೆ ಹಲವರು ಪಾಲೊಳ್ಳುವರು ಎಂದು ವಿವರಿಸಿದರು.

ಡಾ. ಶಂಭುಲಿಂಗಪ್ಪ, ಪೆÇ್ರ. ವಿರೇಶ ಪೂಜಾರಿ, ಡಾ. ಬ್ರಿಜಭೋಷಣ, ಪೆÇ್ರ.ಅಂರೀಶ ಭದ್ರಶೆಟ್ಟಿ ಅವರು ಸೇರಿದಂತೆ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here