ಖರ್ಗೆ ಐಎನ್ ಡಿಐಎ ಮುಖ್ಯಸ್ಥ: ಬಿ.ಧರ್ಮರಾಜ ಸಂತಸ

0
16

ಕಲಬುರಗಿ: ಕೇಂದ್ರ ಸರಕಾರದ ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾ (ಐಎನ್ ಡಿಐಎ)ಅಧ್ಯಕ್ಷರಾಗಿ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆಯವರನ್ನು ಆಯ್ಕೆ ಮಾಡಿರುವುದಕ್ಕೆ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಹಾಗೂ ಉದ್ಯಮಿ ಬಿ. ಧರ್ಮರಾಜ ಕಲಹಿಪ್ಪರಗಾ ಹರ್ಷ ವ್ಯಕ್ತಪಡಿಸಿದ್ದಾರೆ.

ಇಂಡಿಯಾ ಮೈತ್ರಿಕೂಟದ ವರ್ಚುವಲ್ ಸಭೆಯಲ್ಲಿ ಮೈತ್ರಿಕೂಟದ ಎಲ್ಲ ಪಕ್ಷಗಳ ಮುಖಂಡರು ಮಲ್ಲಿಕಾರ್ಜುನ ಖರ್ಗೆಯವರನ್ನು ಒಮ್ಮತ ದೊಂದಿಗೆ ಹೆಸರು ಸೂಚಿಸಿ ಆಯ್ಕೆಗೊಳಿಸಲಾಯಿತು.ಖರ್ಗೆ ಆಯ್ಕೆಯಿಂದ ಮುಂದೆ ನಡೆ ಯುವ ಲೋಕಸಭೆ ಚುನಾವಣೆ ಯಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ಆನೆಬಲ ಬಂದಂತಾಗಿದೆ.371(ಜೆ) ಕಲಂ ರುವಾರಿಗಳು, ಕಾರ್ಮಿಕ ಸಚಿವರಾಗಿ, ರೈಲ್ವೆ ಸಚಿವರಾಗಿ ಸಾಕಷ್ಟು ದೇಶದ ಜನತೆಗೆಯ ಕೆಲಸ ಮಾಡಿರುವ ಅನುಭವವಿರುವುದರಿಂದ ಇಂತಹ ಮಹಾನಾಯಕರಿಗೆ ಮೈತ್ರಿಕೂಟದ ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದಕ್ಕೆ ನನಗೆ ಅತ್ಯಂತ ಸಂತಸ ಮೂಡಿಸಿದೆ.

Contact Your\'s Advertisement; 9902492681

ಕೇಂದ್ರ ಬಿಜೆಪಿ ಸರ್ಕಾರ ಜಾತಿಯ ವಿಷ ಬೀಜ ಬಿತ್ತಿ ಭಾವನಾತ್ಮಕ ವಿಷಯದ ಮೇಲೆ ಚುನಾವಣೆ ನಡೆಸುವ ಮೂಲಕ ಅಭಿವೃದ್ಧಿ ಮರೀಚಿಕೆಯಾಗಿಸುವ ಕೇಂದ್ರದ ವೈಫಲ್ಯವನ್ನು ಎತ್ತಿ ಹಿಡಿಯುವಲ್ಲಿ ಖರ್ಗೆ ಸಾಹೇಬರು ಯಶಸ್ವಿಯಾಗಿದ್ದಾರೆ.ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಸಂಸದರು ಗೆಲುವು ಸಾಧಿಸಿ ಕೇಂದ್ರದಲ್ಲಿ ಬಿಜೆಪಿ ಸರಕಾರ ಕಿತ್ತುಹಾಕಿ ಖರ್ಗೆಯವರ ನೇತೃತ್ವದಲ್ಲಿ ಇಂಡಿಯಾ ಮೈತ್ರಿಕೂಟದ ಸರಕಾರ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದ್ದಾರೆ.

ಮೈತ್ರಿಕೂಟದ ಅಧ್ಯಕ್ಷರಾಗಿ ಆಯ್ಕೆಗೊಳಿಸಿದ್ದಕ್ಕೆ ಕಾಂಗ್ರೆಸ್ ವರಿಷ್ಠ ನಾಯಕ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣು ಗೋಪಾಲ, ರಣದೀಪಸಿಂಗ್ ಸುರ್ಜೆವಾಲಾ ಹಾಗೂ ಕಾಂಗ್ರೆಸ್ ಎಲ್ಲ ರಾಷ್ಟ್ರೀಯ ಹಾಗೂ ರಾಜ್ಯದ ಮುಖಂಡರಿಗೂ ಮತ್ತು ಇಂಡಿಯಾ ಮೈತ್ರಿಕೂಟದ ಎಲ್ಲ ನಾಯಕರಿಗೂ ಅಭಿನಂದಿಸಿದ್ದಾರೆ.

ಅನಿಸಿಕೆ: ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನ ಬಗ್ಗೆ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಏಕವಚನದಲ್ಲಿ ಸಂಭೋಧಿಸುವುದನ್ನು ನಾನು ಖಂಡಿಸುತ್ತೇನೆ. ರಾಜಕೀಯದಲ್ಲಿ ವಿರೋಧ ಮಾಡಬೇಕೆ ಹೊರತು ವೈಯಕ್ತಿಕ ನಿಂದನೆ ಸರಿಯಲ್ಲ.ಹೀಗಾಗಿ ಅನಂತಕುಮಾರ್ ಹೆಗಡೆ ತಕ್ಷಣ ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕು.ಇಲ್ಲದಿದ್ದರೆ ಹೋರಾಟ ಕೈಗೊಳ್ಳಬೇಕಾಗುತ್ತದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here