ಚಂದಿರನ ಬೆಳಗು’ ವಿಶೇಷ ಕಾರ್ಯಕ್ರಮ, ನಾಳೆ

0
44

ಕಲಬುರಗಿ: ಕತ್ತಲೆ ರಾತ್ರಿಗೆ ಚಂದ್ರನ ಬೆಳಕಿನಂತೆ ಮನದ ಕತ್ತಲೆ ನೀಗಿಸಲು ಮೌಲ್ಯಗಳ ಬೆಳಕು ಬರಲಿ ಎಂಬ ಸದುದ್ದೇಶದಿಂದ ಇಲ್ಲಿನ ವಿಶ್ವಜ್ಯೋತಿ ಪ್ರತಿಷ್ಠಾನದ ವತಿಯಿಂದ ಲಿಂಗೈಕ್ಯ ಚಂದ್ರಶೇಖರ ಪಾಟೀಲ ತೇಗಲತಿಪ್ಪಿಯವರ ಪರೋಪಕಾರದ ಪುಣ್ಯವ ನೆನೆದು ‘ಚಂದಿರನ ಬೆಳಗು’ ಕಾರ್ಯಕ್ರಮದಡಿಯಲ್ಲಿ ಜೀವನದೊಳಹೊರಗು ಮೌಲ್ಯಗಳ ಬೆಳಗು ಎಂಬ ವಿಶೇಷ ಕಾರ್ಯಕ್ರಮವೊಂದನ್ನು ನಾಳೆ (ಸೆ.7) ಬೆಳಗ್ಗೆ 10.30 ಕ್ಕೆ ಕಲಬುರಗಿ ನಗರದ ಸುಪರ್ ಮಾರ್ಕೇಟ್ ಪ್ರದೇಶದಲ್ಲಿರುವ ಸರಕಾರಿ ಪದವಿಪೂರ್ವ ಕಾಲೇಜಿ (ಎಂ.ಪಿ.ಎಚ್.ಎಸ್.) ನ ಶ್ರೀಮತಿ ಸಾವಿತ್ರಿಬಾಯಿ ಫುಲೆ ಸಭಾ ಭವನದಲ್ಲಿ ಏರ್ಪಡಿಸಲಾಗಿದೆ.

ಹುಸಿಸುಖ ಬಿಸಿದು:ಖ ಇವೆರಡನ್ನು ಮೀರಿ ಸ್ಥಿತಪ್ರಜ್ಞರಾದವರು ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ತಮಗೊದಗಿ ಬಂದ ನೋವು ನಷ್ಟಗಳು ದಾಟಿ ನಾಡಿನೊಳಿತಿಗೆ ಕಾರಣರಾಗಿದ್ದಾರೆ. ಇಂಥವರ ಜಾಡನ್ಹಿಡಿದು ಕಷ್ಟಗಳಿಗೆ ಕರಗದೆಯೆ ಕುಗ್ಗೆನ್ನ ಸಮಾಜದ ಹಿಗ್ಗಾಗಿ ಬಾ ಎಂಬ ಭಾವದಿಂದ ದು:ಖವನ್ನು ದೂರಕರಿಸುವ ಹೊಸಬಾಳಿಗೆ ಭರವಸೆ ಮೂಡಿಸುವ ಮೌಲ್ಯಗಳತ್ತ ಮುಖ ಮಾಡಿದ್ದು ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಸಂಸ್ಥಾಪಿತ ವಿಶ್ವಜ್ಯೋತಿ ಪ್ರತಿಷ್ಠಾನ.

Contact Your\'s Advertisement; 9902492681

ಈ ನಿಟ್ಟಿನಲ್ಲಿ ಇಂದಿನ ಮಕ್ಕಳಿಗೆ ಮೌಲ್ಯಗಳು ತಿಳಿಸಲು ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಕಮಲಾಪುರ ತಹಾಸಿಲ್ದಾರರಾದ ಅಂಜುಮ್ ತಬಸ್ಸುಮ್ ಉದ್ಘಾಟಿಸಲಿದ್ದು, ಕಾಲೇಜಿನ ಪ್ರಾಚಾರ್ಯ ಅಶೋಕ ತಳಕೇರಿ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೊ.ಕುಪೇಂದ್ರ ಪಾಟೀಲ ಉಪನ್ಯಾಸ ನೀಡಲಿದ್ದು, ಜಿಪಂ ನ ಮಾಜಿ ಸದಸ್ಯೆ ಜಯಶ್ರೀ ಅಶೋಕ ಸಾವಳೇಶ್ವರ, ಬಸವ ಸೇವಾ ಪ್ರತಿಷ್ಠಾನ ಅಧ್ಯಕ್ಷ ರಾಜಶೇಖರ ಯಂಕಂಚಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.

ಹಾಗಾಗಿ, ವಿಚಾರವಂತರು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಮುಖರಾದ ಶ್ರೀಕಾಂತ ಪಾಟೀಲ ತಿಳಗೂಳ, ಶಿವರಾಜ ಅಂಡಗಿ , ಪರಮೇಶ್ವರ ಶಟಕಾರ, ಶಿವಾನಂದ ಮಠಪತಿ ಕೋರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here