ಕಲಬುರಗಿ: ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ರಾಜ್ಯ ಯುವ ಕಾಂಗ್ರೆಸ ಸಮೀತಿ ಉಪಾಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಶ್ರೀಲಪ್ರಭು ಅವರ ಸಮ್ಮುಖದಲ್ಲಿ ಜಿಲ್ಲಾ ಯುವ ಕಾಂಗ್ರೆಸನ ಅಧ್ಯಕ್ಷ ಶಿವಾನಂದ ಹೋನಗುಂಟಿ ನೇತೃತ್ವದಲ್ಲಿ ಯುವ ಕಾಂಗ್ರೆಸ ಸಮೀತಿ ಕಾರ್ಯಕಾರಿಣಿ ಸಭೆ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಶ್ರೀಲಫ್ರಭು ಮಾತನಾಡಿ ಮುಂಬರಲಿರುವ ಲೋಕಸಭೆ ಚುನಾವಣೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರಮುಖ ಪಾತ್ರವಹಿಸಬೇಕು ನಮ್ಮ ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿಗಳನ್ನು ಮನೆ ಮನೆ ತಲುಪಿಸುವ ಕಾರ್ಯವಾಗಬೇಕ್ಕಾಗಿದೆ ತಿಳಿಸಿದರು.
ಶಿವಾನಂದ ಹೋನಗುಂಟಿ ಮಾತನಾಡುತ್ತಾ ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಇಂಡಿಯಾ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಯುವ ಕಾಂಗ್ರೆಸ್ ಪ್ರಮುಖ ಪಾತ್ರವಹಿಸಿದೆ ಹಾಗೆಯೇ ಲೋಕಸಭಾ ಚುನಾವಣೆಯಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡುವ ಮೂಲಕ ನಮ್ಮ ನಾಯಕರ ಕೈ ಬಲಪಡಿಸಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ ಅಧ್ಯಕ್ಷ ಜಗದೇವ ಗುತ್ತೇದಾರ, ಚಿಂಚೋಳಿ ವಿಧಾನಸಭಾ ನಾಯಕ ಸುಭಾಸ ರಾಠೋಡ, ಕರ್ನಾಟಕದ ಪ್ರದೇಶ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಈರಣ್ಣ ಝಳಕ್ಕಿ, ಯುವ ಕಾಂಗ್ರೆಸ್ ಸಂಯೋಜಕ ಚೇತನ್ ಗೋನಾಯಕ, ಜಿಲ್ಲಾ ಯುವ ಕಾಂಗ್ರೆಸನ ಉಪಾಧ್ಯಕ್ಷರುಗಳಾದ ಅಮರ ಶೀರವಾಳ, ಶ್ವೇತಾ ಬಳಿಚಕ್ರ, ಬ್ಲಾಕ್ ಅಧ್ಯಕ್ಷರಾದ ಶಕೀಲಾ ಸರಡಗಿ,ಪರಶುರಾಮ ನಾಟೀಕರ್, ಅಸ್ಲಂ, ಅಶೋಕ್ ಕಪ್ಪನೂರ, ಶರಣು ಮಜ್ಜಿಗಿ, ನಾಗೇಶ್ ಗುಣಾಜೀ, ಶೇಖ ಸಮರಿನ್ ಸೇರಿದಂತೆ ಯುವ ಕಾಂಗ್ರೆಸ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.