ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ನೋಡಲ್ ಅಧಿಕಾರಿಯಾಗಿ ಡಾ.ಮಹೇಶ ಗಂವ್ಹಾರ ನೇಮಕ

0
35

ಕಲಬುರಗಿ: ಹೈದ್ರಾಬಾ ಕರ್ನಾಟಕ ಶಿಕ್ಷಣ ಸಂಸ್ಥೆಯ, ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ರಾ.ಸೇ.ಯೋ “ಬ” ಘಟಕದ ಕಾರ್ಯಕ್ರಮ ಅಧಿಕಾರಿಗಳಾದ ಡಾ.ಮಹೇಶ ಗಂವ್ಹಾರ ಅವರನ್ನು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಎನ್.ಎಸ್.ಎಸ್.ಕೋಶಕ್ಕೆ ನೋಡಲ್ ಅಧಿಕಾರಿಗಳಾಗಿ ವಿಶ್ವವಿದ್ಯಾನಿಲಯದ ಮಾನ್ಯ ಕುಲಸಚಿವರು ನೇಮಕ ಮಾಡಿ ಆದೇಶಿಸಿರುತ್ತಾರೆ.

ಡಾ. ಮಹೇಶಕುಮಾರ ಗಂವ್ಹಾರ ಅವರು ರಾ.ಸೇ.ಯೋ.ಅಧಿಕಾರಿಯಾಗಿ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ತರಬೇತಿ ಪಡೆದು,ನ್ಯಾಷನಲ್ ಇಂಟಿಗ್ರೇಶನ್ ಕ್ಯಾಂಪ್ ಗಳಲ್ಲಿ ಭಾಗವಹಿಸಿ ಹತ್ತು ಹಲವಾರು ವಿಶೇಷ ಶಿಬಿರಗಳನ್ನು ಯಶಸ್ವಿಯಾಗಿ ಆಯೋಜಿಸಿ ಸ್ವಚ್ಚತಾ, ಪರಿಸರ ರಕ್ಚಣೆ,ಸಸಿನೆಡುವ ಕಾರ್ಯಕ್ರಮ, ಮತದಾನ ಜಾಗೃತಿ ಅಭಿಯಾನ ,ಶೌಚಾಲಯಗಳ ಸರ್ವೆ ಮತ್ತು ಸಮೀಕ್ಷೆ ಹೀಗೆ ಇತ್ಯಾದಿ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ್ದಾರೆ ಹಾಗೂ ಎನ್.ಎಸ್.ಎಸ್.ಅಧಿಕಾರಿಯಾಗಿ ಸುಮಾರು 15 ವರ್ಷಗಳ ಕಾಲ ಸಂಸ್ಥೆಯ ವಿವಿಧ ಮಹಾವಿದ್ಯಾಲಯ ಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರ ಸೇವೆಯನ್ನು ಗುರತಿಸಿ ವಿಶ್ವವಿದ್ಯಾಲಯ ಇವರನ್ನು ಮಹಿಳಾ ವಿಶ್ವವಿದ್ಯಾಲಯದ ರಾ. ಸೇ. ಯೋ ಕೋಶಕ್ಕೆ ನೋಡಲ್ ಅಧಿಕಾರಿಯಾಗಿ ನೇಮಕ ಮಾಡಿ ಆದೇಶಿಸಿರುತ್ತಾರೆ.

Contact Your\'s Advertisement; 9902492681

ಇವರ ನೇಮಕಕ್ಕೆ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳ, ಆಡಳಿತ ಮಂಡಳಿಯ ಸದಸ್ಯರು, ಮಹಾವಿದ್ಯಾಲಯದ ಪ್ರಾಚಾರ್ಯರು, ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಹರ್ಷ ವ್ಯಕ್ತ ಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here