ಅನುಭವ ಮಂಟಪ ಜಗತ್ತಿನ ಮೊದಲ ಸೌಹಾರ್ದ ಕೇಂದ್ರ

0
38

ಕಲಬುರಗಿ: 12ನೇ ಶತಮಾನದಲ್ಲಿ ಬಸವಾದಿ ಶರಣರ ನೇತೃತ್ವದಲ್ಲಿ ಸ್ಥಾಪಿಸಲಾಗಿರುವ ಅನುಭವ ಮಂಟಪ ಜಗತ್ತಿನ ಮೊಟ್ಟ ಮೊದಲ ಸೌಹಾರ್ದ ಕೇಂದ್ರವಾಗಿತ್ತು ಎಂದು ಸಾಹಿತಿ- ಪತ್ರಕರ್ತ ಡಾ. ಶಿವರಂಜನ ಸತ್ಯಂಪೇಟೆ ಅಭಿಪ್ರಾಯಪಟ್ಟರು.

ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕಸಾಪ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಪ್ರಥಮ‌ ವಚನ ಸಾಹಿತ್ಯ ಸಮ್ಮೇಳನದ ಜಗವೇ ಕೂಡಲಸಂಗಮವಾಗಿಸುವ ಪರಿ ಮೊದಲ ಗೋಷ್ಠಿಯಲ್ಲಿ ಸೌಹಾರ್ದ ಸಾರಿದ ಶರಣ ಸಂಸ್ಕೃತಿ ವಿಷಯ ಕುರಿತು ಮಾತನಾಡಿದ ಅವರು, ಇವನಾರವ ಎಂಬುದು ಜಾತಿ, ಇವ ನಮ್ಮವ ಎಂಬುದು ಧರ್ಮ. ನಮ್ಮೆಲ್ಲರ ಧರ್ಮ ಸಕಲ ಜೀವಾತ್ಮರಿಗೆ ಲೇಸು ಬಯಸುವಂತಿರಬೇಕು ಎಂದು ಅವರು ತಿಳಿಸಿದರು.

Contact Your\'s Advertisement; 9902492681

ವಚನ ಸಾಹಿತ್ಯ ಮತ್ತು ಜಾತಿ ವಿನಾಶ ಕುರಿತು ಅಫಜಲಪುರ ಭಾರತೀಯ ಬಸವ ಬಳಗ ಸಂಚಾಲಕ ಅಮೃತ ಪಾಟೀಲ ಮಾತನಾಡಿ, ಶರಣರಿಗೆ ಸಮಾಜದಲ್ಲಿನ ಮೂಢನಂಬಿಕೆ, ಜಾತಿ ವ್ಯವಸ್ಥೆ ಹೊಡೆದು ಹಾಕಿ ಸಮ ಸಮಾಜ ನಿರ್ಮಾಣದ ಕನಸು ಕಂಡಿದ್ದರು ಎಂದು ತಿಳಿಸಿದರು.

ಶರಣರ ದೃಷ್ಟಿಯಲ್ಲಿ ಭಕ್ತನೊಂದು ಕುಲ, ಭವಿಯೊಂದು ಕುಲ ಎಂದು ಹೇಳುವ ಮೂಲಕ ಜಾತಿ ವಿನಾಶಕ್ಕೆ ಮುನ್ನುಡಿ ಬರೆದರು ಎಂದು ಹೇಳಿದರು.

ಡಾ. ಶಿವಶರಣಪ್ಪ ಮೋತಕಪಳ್ಳಿ ಅಧ್ಯಕ್ಷತೆ ವಹಿಸಿದ್ದರು. ಡಾ. ಡಿ.ಎನ್. ಪಾಟೀಲ ದಿಕ್ಸೂಚಿ ನುಡಿಗಳನ್ನಾಡಿದರು.‌ ಅನುಪಮಾ ಸುಲೇಕರ್ ವೇದಿಕೆಯಲ್ಲಿದ್ದರು. ರವೀಂದ್ರಕುಮಾರ ಭಂಟನಳ್ಳಿ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here