ಕರ್ನಾಟಕದ ಸಾಂಸ್ಕೃತಿಕ ನಾಯಕರಾಗಿ ಬಸವಣ್ಣ: ಶಾಸಕ ಅಲ್ಲಂಪ್ರಭು ಪಾಟೀಲ್‌ ಹರ್ಷ

0
17

ಕಲಬುರಗಿ:12 ನೇ ಶತಮಾನದ ಸಮಾನತೆಯ ಹರಿಕಾರ, ಮಹಾನ್‌ ದಾರ್ಶನಿಕರಾದಂತಹ ಬಸವಣ್ಣನವರನ್ನು ಕರ್ನಾಟಕ ರಾಜ್ಯದ ಸಾಂಸ್ಕೃತಿಕ ನಾಯಕರನ್ನಾಗಿ ಘೋಷಿಸಲು ನಿರ್ಧರಿಸಿರುವ ಸರ್ಕಾರದ ಕ್ರಮ ಹರುಷದಿಂದ ಸ್ವಾಗತಿಸುತ್ತೇನೆ ಎಂದು ಕಲಬುರಗಿ ದಕ್ಷಿಣ ಶಾಸಕರಾದ ಅಲ್ಲಂಪ್ರಭು ಪಾಟೀಲ್‌ ಹೇಳಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಡಾ. ಅಂಬೇಡ್ಕರ್‌ ಅವರು ರಚಿಸಿರುವ ಭಾರತದ ಸಂವಿಧಾನದಲ್ಲಿ ಎತ್ತಿ ಹಿಡಿದಿರುವ ಜಾತಿ, ಮತ, ವರ್ಗ, ವರ್ಣ, ಲಿಂಗ ತಾರತಮ್ಯ ಸೇರಿದಂತೆ ಅನೇಕ ತಾರತಮ್ಯಗಳು, ಮೌಢ್ಯಗಳನ್ನು ವಿರೋಧಿಸುತ್ತ ಇಂತಹ ಯಾವುದೇ ದೋಷಗಳಿಲ್ಲದಂತಹ ಸರ್ರವ ಸಮಾನ ಸಮಾಜವನ್ನು ರೂಪಿಸುವ ಕೆಲಸ ಬಸವಣ್ಣನವರ ಮುಂದಾಳತ್ವದಲ್ಲಿ 12 ನೇ ಶತಮಾನದಲ್ಲಿ ನಡೆದು ಪ್ರಪಂಚಕ್ಕೆ ಮಾದರಿಯಾಗಿದೆ ಎಂದು ಅಲ್ಲಂಪ್ರಭು ಬಣ್ಣಿಸಿದ್ದಾರೆ..

Contact Your\'s Advertisement; 9902492681

ಮೆಗ್ನಾಕರ್ಟ್‌ಗಿಂತಲೂ ಮೊದಲೇ ಪ್ರಜಾಪ್ರಭುತ್ವದ ಚಿಂತನೆಯನ್ನು ಹರಡುವಂತೆ ಮಾಡಿ, ಅದನ್ನು ಪ್ರತಿಪಾದಿಸಿ ಅನುಭವ ಮಂಟಪ ಹುಟ್ಟು ಹಾಕಿದವರು ಬಸವಣ್ಣನವರು, ಅವರನ್ನು ಸಾಂಸ್ಕೃತಿಕ ನಾಯಕರನ್ನಾಗಿ ಘೋಷಿಸಿರೋದರಲ್ಲಿ ಭಾರಿ ಅರ್ಥ ತುಂಬಿದೆ. ಬಸವಣ್ಣನವರ ಸಾರ್ವಕಾಲಿಕವಾದ ಕಲ್ಯಾಣ ಸಮಾಜವನ್ನು ಕಟ್ಟುವ ಆದರ್ಶ
ನೀತಿಯನ್ನು ಬೋಧಿಸಿರುವುದರಿಂದ ದೇಶದ ಸಂವಿಧಾನದ ಆಶಯಗಳಿಗೆ ಅನುಗುಣವಾಗಿರುವ ಅವರ ಚಿಂತನೆಗಳು ಸರ್ಕಾರದ ಘೋಷಣೆಗೆ ಶಕ್ತಿ ತುಂಬಿವೆ ಎಂದು ಶಾಸಕರು ಹೇಳಿದ್ದಾರೆ.

ಬಸವಣ್ಣನವರ ವಚನಗಳು ಸಾರ್ವಕಾಲಿಕವಾಗಿವೆ. ಇವನಾರವ ಎನ್ನದಿರಿ, ಇವ ನಮ್ಮವನೆನ್ನಿ ಎಂಬ ಸರ್ವರಲ್ಲಿಯೂ ಸಹೋದರತೆ ಕಣುವ ಅವರ ತತ್ವ ಸದಾಕಾಲ ಎಲ್ಲರಿಗೂ ಪ3ೇರಣೆ ನೀಡುವಂತಹದ್ದಾಗಿದೆ. ಕಾಯಕ, ದಾಸೋಹ, ಸಮಾನತೆ, ಮಹಿಳಾ ಶಿಕ್ಷಣದಂತ ಬಸವಣ್ಣನವರ ತತ್ವಗಳಿಗೆ ಸಿಎಂ ಸಿದ್ದರಾಮಯ್ಯನವರು ವೈಯಕ್ತಿಕವಾಗಿ ಪ್ರಭಾವಿತರಾಗಿದ್ದಾರೆಂದೇ ಇಂತಹ ಐತಿಹಾಸಿಕ ನಿರ್ಧಾರ ಹೊರಬಿದ್ದಿದೆ ಎಂದು ಶಾಸಕರಾದ ಅಲ್ಲಂಪ್ರಭು ಪಾಟೀಲರು ಸಂತಸಪಟ್ಟಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here