ಸುರಪುರ: ಯಾವುದೆ ಸಂಘ ಸಂಸ್ಥೆಗಳು ತಮ್ಮ ಮೂಲ ಉದ್ದೇಶದ ಬಗ್ಗೆ ಗಮನವಿಟ್ಟುಕೊಂಡು ಕೆಲಸ ಮಾಡಬೇಕು.ಅಲ್ಲದೆ ಸಂಘ ಸಂಸ್ಥೆಗಳು ಕಾನೂನಿನ ಅಡಿಯಲ್ಲಿ ಕೆಲಸ ಮಾಡುವ ಮೂಲಕ ಮಾದರಿ ಸಂಘಟನೆ ಎನಿಸಿಕೊಳ್ಳಬೇಕೆಂದು ಡಿವಾಯ್‌ಎಸ್‌ಪಿ ಶಿವನಗೌಡ ಪಾಟೀಲ ಕಿವಿಮಾತು ಹೇಳಿದರು.
ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ನೂತನ ವಿದ್ಯಾರ್ಥಿಗಳ ಸಂಘಟನೆಯನ್ನು ಉದ್ಘಾಟಿಸಿ ಮಾತನಾಡಿ,ಇಂದು ಅನೇಕ ಸಂಘಟನೆಗಳು ಸಮಾಜದಲ್ಲಿ ಕೆಲಸ ಮಾಡುತ್ತವೆ.ಸಂಘಟನೆಗಳು ಸಮಾಜದ ಅಭಿವೃಧ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.ಅದರಂತೆ ಈ ವಿದ್ಯಾರ್ಥಿ ಸಂಘವುಕೂಡ ಉತ್ತಮವಾಗಿ ಕೆಲಸ ಮಾಡಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೋರಾಟಗಾರ ವೆಂಕೋಬ ದೊರೆ ಮಾತನಾಡಿ,ವಿದ್ಯಾರ್ಥಿ ಸಂಘವು ವಿದ್ಯಾರ್ಥಿಗಳ ಬೇಡಿಕೆಗಳಿಗೆ ಸ್ಪಂಧಿಸಲಿ.ಜೊತೆಗೆ ನಮ್ಮಿಂದ ಯಾವುದೆ ರೀತಿಯ ಸಹಕಾರ ಬೇಕಾದಲ್ಲಿ ಸದಾಕಾಲ ನೆರವು ನೀಡುವುದಾಗಿ ಭರವಸೆ ನೀಡಿದರು.ಅಲ್ಲದೆ ಗ್ರಾಮದ ಯಾವುದೇ ವಿದ್ಯಾರ್ಥಿಗಳಿಗೆ ಕಲಿಕೆಗೆ ಬೇಕಾವು ನೆರವು ನೀಡುವುದಾಗಿ ಘೋಷಣೆ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಉಸ್ತಾದ ವಜಾಹತ್ ಹುಸೇನ,ಗೋಪಾಲ ಬಾಗಲಕೋಟೆ,ಎಸ್.ಡಿ.ಎಮ್.ಸಿ ಅಧ್ಯಕ್ಷ ಶ್ರೀನಿವಾಸ ನಾಯಕ ದೊರೆ ಹಾಗು ಗ್ರಾಮದ ಮುಖಂಡರಾದ ನಿಂಗಣ್ಣ ನಾಡಗೌಡ,ಲಂಕೆಪ್ಪ ಸಾಹುಕಾರ,ಸಿದ್ದಪ್ಪ ಪೂಜಾರಿ,ಶರಣಪ್ಪ,ನಿಂಗಪ್ಪ ದೇವಡಿ,ದೇವಿಂದ್ರಪ್ಪ ತಿಪ್ಪನಟಿಗಿ,ಸಿದ್ದಯ್ಯ ಹೊನ್ನಪುರ,ತಿಪ್ಪಣ್ಣ ನಾಯಕ,ಭೀಮರಾಯಗೌಡ,ತಿರುಪತಿ ದೊರೆ,ಮಾನಯ್ಯ ದೊರೆ,ಯಂಕಪ್ಪ ಇತರರಿದ್ದರು.