ಸುರಪುರ: ನಗರದ ತಿಮ್ಮಾಪುರದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚಾರಣೆ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಶರಣಪ್ಪ ಹೆಡಿನಾಳ ಮಾತನಾಡಿ, ಸಮಾಜದ ವಿವಿಧ ಹುದ್ದೆಗಳಲ್ಲಿ ಶಿಕ್ಷಕರ ಹುದ್ದೆಗೆ ದೇಶದಲ್ಲಿ ಅಪಾರ ಗೌರವ ಮತ್ತು ಮಹತ್ವವಿದೆ ಹಾಗಾಗಿ ಶಿಕ್ಷಕರು ಉತ್ತಮ ಪ್ರಜೆಗಳನ್ನಾಗಿ ವಿಧ್ಯಾರ್ಥಿಗಳನ್ನು ಪರಿಚಯಿಸಬೇಕಾಗಿದೆ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪ್ರಧಾನ ಗುರುಗಳಾದ ಸುಲೋಚನಾ ಮತ್ತು ಶಿಕ್ಷಕಿಯಾದ ಮಾಧುರಿ ಅವರಿಗೆ ಸನ್ಮಾನಿಸಲಾಯಿತು, ಪ್ರಮುಖರಾದ ಎಸ್.ಡಿ.ಎಂ.ಸಿ ಅಧ್ಯಕ್ಷ ಗೋಪಾಲ ಚಂದನಕೇರಿ, ಅಂಬ್ರೇಶ ಕುಂಬಾರ, ಶಿವರಾಜ ಕಮತಗಿ, ಅಂಬ್ರೇಶ ಪರತಬಾದ್ ಉಪಸ್ಥಿತರಿದ್ದರು. ಶ್ರೀಪ್ರಭು ಕಲಾ ವಿಜ್ಞಾನ ಮತ್ತು ಜೆ.ಎಮ್.ಬೋಹರಾ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನ ಮತ್ತು ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪುನಶ್ಚೇತನ ಕಾರ್ಯಕ್ರಮ ಅಚರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಡಾ: ಸರ್ವೋಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು.ನಂತರ ಪ್ರೋ ವಿಶ್ವನಾಥವರು ಶಿಕ್ಷಕರ ದಿನವನ್ನು ಕುರಿತು ಹಾಗು ಡಾ:ಶಶಿಶೇಖರ ರಡ್ಡಿ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಬೆಳೆಸುವ ಕುರಿತು ಮಾತನಾಡಿದರು.ಪ್ರಾಚಾರ್ಯ ಎಸ್.ಹೆಚ್.ಹೊಸಮನಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರೋ ಎನ್.ಎಸ್.ಪಾಟೀಲ,ಪ್ರೋ ಎಮ್.ಡಿ.ವಾರೀಸ್,ಡಾ: ಬಾಳರಾಜ ಸರಾಫ, ಎಸ್.ಎಮ್. ಸಜ್ಜನ, ಡಾ. ಶರಣಗೌಡ ಪಾಟೀಲ,ಪ್ರೋ ಹಣಮಂತ ಸಿಂಗೆ,ಜ್ಯೋತಿ ಕಲಾಲ,ಶಿವಲೀಲಾ ಪಾಟೀಲ,ಸುರೇಶ ಮಾಮಡಿ, ಡಾ. ಸಾಯಿಬಣ್ಣ ಮುಡಬೂಳ,ಡಾ:ಉಪೇಂದ್ರ ನಾಯಕ,ಮಹಾದೇವಿ ಕುಮಾರಿ,ರಂಜಿತಾ,ವಿಜಕುಮಾರ ಬಣಗಾರ, ಮಲ್ಹಾರಾವ್, ವಿರಣ್ಣಾ ಜಾಕಾ,ಯಲ್ಲಪ್ಪ ಜಹಾಗೀರದಾರ,ಸಂತೋಷ ಹೆಡಗಿನಾಳ,ಸಿ.ಎಮ್.ಸುತಾರ,ಸಂಗಮೇಶ ನಾಗಲಿಕ ಇದ್ದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗು ಅಜೀಂ ಪ್ರೇಮಜಿ ಪೌಂಡೇಶನ್ ಮತ್ತು ಕರ್ನಾಟಕ ಪಬ್ಲಿಕ್ ಶಾಲೆ ವತಿಯಿಂದ ನಗರದ ತಿಮ್ಮಾಪುರದಲ್ಲಿಯ ಶಿಕ್ಷಕರ ಕಲಿಕಾ ಕೇಂದ್ರದಲ್ಲಿ ಶಿಕ್ಷಕರ ದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಗಳಾಗಿ ಭಾಗವಹಿಸಿದ್ದ ಬಿಆರ್‌ಪಿ ಖಾದರ ಪಟೇಲ ಹಾಗು ಅಜೀಂ ಪ್ರೇಮಜಿ ಪೌಂಡೇಶನ್ ತಾಲ್ಲೂಕು ಸಂಯೋಜಕ ಸುರೇಶಗೌಡ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಬಸವರಾಜ ಕೊಡೇಕಲ್ ಅಧ್ಯಕ್ಷತೆ ವಹಿಸಿದ್ದರು.ಉಪ ಪ್ರಾಚಾರ್ಯ ಗುರುಲಿಂಗಪ್ಪ,ಕಮಲಾಬಾಯಿ,ಶರಣಬಸಮ್ಮ ಹಾಗು ವಿವಿಧ ಶಾಲೆಗಳ ಶಿಕ್ಷಕರಾದ ವಿನೋದ ಕುಮಾರ,ಪರಮಣ್ಣ ತಳಗೇರಿ,ಅನ್ವರ ಜಮಾದಾರ,ರಾಮಪ್ಪ ಗಂಜಾಳ,ಮರೆಪ್ಪ,ಶಿವಕುಮಾರ ಇದ್ದರು.
ಸರಕಾರಿ ಉರ್ದು ಪ್ರಾಥಮಿಕ ಶಾಲೆ ತಿಮ್ಮಾಪುರದಲ್ಲಿ ಶಿಕ್ಷಕರ ದಿನವನ್ನು ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಡಾ. ಸರ್ವೋಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅಜೀಂ ಪ್ರೇಮಜಿ ಪೌಂಡೇಶನ್ನಿನ ಸಂಪನ್ಮೂಲ ವ್ಯಕ್ತಿ ಅನ್ವರ ಜಮಾದಾರ ಡಾ. ಸರ್ವೋಪಲ್ಲಿ ರಾಧಾಕೃಷ್ಣನ್ ಅವರ ಜೀವನ ಕುರಿತು ಕುರಿತು ಮಾತನಾಡಿದರು.ಶಿಕ್ಷಕರಾದ ಶರಣ ಬಸಮ್ಮ,ಮೈಮುನಾ ಬೇಗಂ,ಶಬಾನಾ ಫರೀದಿ,ಜಾಹೇದಾ ಬೇಗಂ,ಯಾಸ್ಮೀನಾ ಬೇಗಂ,ಶ್ಯಾಮಲಾ,ಯೂನುಸ್ ಬೇಪಾರಿ ಭಾಗವಹಿಸಿದ್ದರು.