ಸಹೃದಯಿ ವಾಯು ವಿಹಾರ ಬಳಗದಿಂದ ಸರಕಾರಕ್ಕೆ ಅಭಿನಂದನೆ ವ್ಯಕ್ತ

0
43

ಕಲಬುರಗಿ: ಕರ್ನಾಟಕ ರಾಜ್ಯಕ್ಕೆ ಸಾಂಸ್ಕೃತಿಕ ನಾಯಕ ಎಂದು ಅಧಿಕೃತ ಘೋಷಣೆ ಮಾಡಿದ ಕರ್ನಾಟಕ ಸರಕಾರಕ್ಕೆ ವಿಶೇಷ ಅಭಿನಂದನೆಗಳು ಎಂದು ಪ್ರಗತಿಪರ ಚಿಂತಕ, ವಾಯು ವಿಹಾರ ಬಳಗ ಸದಸ್ಯ ಹುಲ್ಲಕಂಠರಾಯ ಎಸ್ ಎಂ ಅರಳಗೂಂಡಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ರಿಂಗ್ ಉದನೂರ ಕ್ರಾಸ್ ಸಿದ್ಧರಾಮೇಶ್ವರ ವೃತ್ತದ ಬಳಿ ವಿಶ್ವ ಗುರು ಬಸವಣ್ಣ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು. 21ನೇ ಶತಮಾನದಲ್ಲಿ ಬಸವಣ್ಣನವರ ನಡೆನುಡಿ ಮತ್ತು ವಚನಗಳು ಆಚರಣೆ ಮಾಡಿದರೆ. ಭ್ರಷ್ಟಚಾರ ಕಂದಾಚಾರ ಮೂಡನಂಬಿಕೆ ಕಡಿಮೆಯಾಗುತ್ತದೆ. ವೈಜ್ಞಾನಿಕ ವೈಚಾರಿಕ ಮನೋಭಾವ ಹೆಚ್ಚಾಗುತ್ತದೆ ಎಂದು ಹೇಳಿದರು. ಇಂದು ನಿಜಶರಣ ಅಂಬಿಗರ ಚೌಡಯ್ಯನವರ 904ನೇ ಜಯಂತಿ ಶುಭಾಶಯಗಳು, ಅನ್ನದಾಸೋಹ, ಜ್ಞಾನ ದಾಸೋಹ, ಕರ್ನಾಟಕ ರತ್ನ ಶ್ರೀ ಲಿಂ ಶಿವಕುಮಾರ ಮಹಾಸ್ವಾಮೀಜಿ ಅವರ 5ನೇ ವರ್ಷದ ಪುಣ್ಯಸ್ಮರಣೆ ದಿನದ ನಮನಗಳು ಸಾಮೂಹಿಕ ಪ್ರಾರ್ಥನೆ ಮೂಲಕ ಸಲ್ಲಿಸಲಾಯಿತು.

Contact Your\'s Advertisement; 9902492681

ಸಹೃದಯಿ ವಾಯು ವಿಹಾರ ಬಳಗದವರು ಹಣಮಂತರಾಯಗೌಡ ಉದನೂರ, ರಾಜು ನವಲದಿಗಿ, ಶಾಂತಪ್ಪ ನಿಂಬಾಳ, ಬಸವರಾಜ ಮರತೂರ, ದೇವಿಂದ್ರಪ್ಪ ಕೋಳಕೂರ, ಮಹಾಂತೇಶ ಪಾಟೀಲ, ಶಿವಕುಮಾರ ಬಿದರಿ, ಮಲ್ಲು ಪೋಲಿಸ್, ತುಕರಾಮಗೌಡ ಭಾಸಗಿ, ಸಿದ್ದುಗೌಡ, ಶ್ರೀ ಶೈಲ ಬಳ್ಳೋರಗಿ, ಶಿವಶಂಕರ ಬಿರಾದಾರ ಜವಳಿ, ಚಂದಪ್ಪ ಅಣ್ಣ, ಶ್ರೀಕಾಂತ ಕಲಕೇರಿ, ಬಸವರಾಜ ನಾಸಿ, ರವಿ ಸಜ್ಜನ, ಸಂಗನಗೌಡ ಪಾಟೀಲ, ಅಯ್ಯಣ್ಣ ನಂದಿ, ಪ್ರಭು ಗೊಬ್ಬರ, ಸಂಗನ ವಕೀಲರು, ಬಿ.ಎಂ.ಪಾಟೀಲ ಕಲ್ಲೂರ, ಸಾಮಾಜಿಕ ಧಾರ್ಮಿಕ ಮುಖಂಡರು, ಶಿಕ್ಷಕರು ಮತ್ತು ಯುವಕರು ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here