ಕಲಬುರಗಿ 22,68,944 ಜನ ಮತದಾರರು: ಬಿ.ಫೌಜಿಯಾ ತರನ್ನುಮ್

0
50

ಕಲಬುರಗಿ: ಭಾರತ ಚುನಾವಣಾ ಆಯೋಗದ ನಿರ್ದೇಶನುಸಾರ ದಿ.01-01-2024ಕ್ಕೆ ಅನ್ವಯಿಸುವಂತೆ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಯ ಅಂತಿಮ ಮತದಾರರ ಪಟ್ಟಿ ಸೋಮವಾರ ಪ್ರಕಟವಾಗಿದ್ದು, ಜಿಲ್ಲೆಯಾದ್ಯಂತ 11,43,159 ಪುರುಷ, 11,25,463 ಮಹಿಳೆ ಹಾಗೂ 322 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 22,68,944 ಮತದಾರರು ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡಿದ್ದಾರೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

ಕಳೆದ ಅಕ್ಟೋಬರ್ 27 ರಂದು ಪ್ರಕಟಿಸಲಾದ ಕರಡು ಪಟ್ಟಿಯಂತೆ ಕಲಬುರಗಿ ಜಿಲ್ಲೆಯಲ್ಲಿ 11,29,472 ಪುರುಷರು, 11,04,813 ಮಹಿಳೆಯರು ಹಾಗೂ ಇತರೆ 324 ಸೇರಿ ಒಟ್ಟಾರೆ 22,34,609 ಜನ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡಿದ್ದರು. ಪ್ರಕಟಿತ ಕರಡು ಪಟ್ಟಿಗೆ ಅಕ್ಷೇಪಣೆ ಸಲ್ಲಿಸಲು ಜನವರಿ 12ರ ವರೆಗೆ ಅವಕಾಶ ನೀಡಲಾಗಿತ್ತು. ಸ್ವೀಕೃತ ಅಕ್ಷೇಪಣೆಯನ್ನು ವಿಲೇವಾರಿ ಮಾಡಿ ಇಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಅಕ್ಷೇಪಣೆ ಅವಧಿಯಲ್ಲಿ 34,335 ಜನ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

Contact Your\'s Advertisement; 9902492681

ಅಂತಿಮ ಮತದಾರರ ಪಟ್ಟಿ ಪ್ರಕಾರ ವಿಧಾನಸಭಾ ಕ್ಷೇತ್ರವಾರು ನೋಡಿದಾಗ ಅಫಜಲಪೂರನಲ್ಲಿ 1,19,836 ಪುರುಷ, 1,14,334 ಮಹಿಳೆ, ಇತರೆ 19 ಸೇರಿ 2,34,189, ಜೇವರ್ಗಿಯಲ್ಲಿ 1,23,731 ಪುರುಷ, 1,20,740 ಮಹಿಳೆ, ಇತರೆ 24 ಸೇರಿ 2,44,495, ಚಿತ್ತಾಪೂರದಲ್ಲಿ 1,21,011 ಪುರುಷ, 1,21,732 ಮಹಿಳೆ, ಇತರೆ 14 ಸೇರಿ 2,42,757, ಸೇಡಂನಲ್ಲಿ 1,12,987 ಪುರುಷ, 1,16,184 ಮಹಿಳೆ, ಇತರೆ 28 ಸೇರಿ 2,29,199, ಚಿಂಚೋಳಿಯಲ್ಲ್ಲಿ 1,05,722 ಪುರುಷ, 1,02,551 ಮಹಿಳೆ, ಇತರೆ 15 ಸೇರಿ 2,08,288, ಗುಲಬರ್ಗಾ ಗ್ರಾಮೀಣದಲ್ಲಿ 1,35,294 ಪುರುಷ, 1,29,808 ಮಹಿಳೆ, ಇತರೆ 34 ಸೇರಿ 2,65,136, ಗುಲಬರ್ಗಾ ದಕ್ಷಿಣದಲ್ಲಿ 1,40,703 ಪುರುಷ, 1,43,844 ಮಹಿಳೆ, ಇತರೆ 54 ಸೇರಿ 2,84,601, ಗುಲಬರ್ಗಾ ಉತ್ತರದಲ್ಲಿ 1,54,825 ಪುರುಷ, 1,57,020 ಮಹಿಳೆ, ಇತರೆ 95 ಸೇರಿ 3,11,940 ಹಾಗೂ ಆಳಂದನಲ್ಲಿ 1,29,050 ಪುರುಷ, 1,19,250 ಮಹಿಳೆ, ಇತರೆ 39 ಸೇರಿ 2,48,339 ಜನ ಮತದಾರರ ಪಟ್ಟಿಯಲ್ಲಿದ್ದಾರೆ ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ತಿಳಿಸಿದರು.

ಅಂತಿಮ ಮತದಾರರ ಪಟ್ಟಿಯನ್ನು ಸಾರ್ವಜನಿಕರು ಚುನಾವಣಾ ಆಯೋಗದ ವೆಬ್‍ಸೈಟ್ https://ceo.karnataka.gov.in/en ಹಾಗೂ ಜಿಲ್ಲೆಯ ವೆಬ್‍ಸೈಟ್ https://kalaburagi.nic.in/en ನಲ್ಲಿ ವೀಕ್ಷಸಿಬಹುದಾಗಿದೆ.

2,378 ಮತಗಟ್ಟೆಗಳು: ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳ ನಗರ ಪ್ರದೇಶದಲ್ಲಿ 705 ಮತ್ತು ಗ್ರಾಮಾಂತರ ಪ್ರದೇಶದಲ್ಲಿ 1,673 ಸೇರಿ ಒಟ್ಟು 2,378 ಮತಗಟ್ಟೆ ಗುರುತಿಸಲಾಗಿದೆ ಎಂದು ಡಿ.ಸಿ. ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here