ಶ್ರೀರಾಮ ಮೂರ್ತಿ ಮೆರವಣಿಗೆ ಪೊಲೀಸರು ಅಡ್ಡಿ: ಸಂಸದ ಜಾಧವ್ ನೇತೃತ್ವದಲ್ಲಿ ಪ್ರತಿಭಟನೆ

0
113

ಕಲಬುರಗಿ: ಶ್ರೀರಾಮನ ಮೂರ್ತಿ ಮೆರವಣಿಗೆಗೆ ಪೊಲೀಸರು ಅವಕಾಶ ನೀಡದ ಕಾರಣ ಹಿಂದೂ ಸಂಘಟನೆಗಳ ಕಾರ್ಯಕರ್ತರು ಮೂರ್ತಿಯನ್ನು ಹೊತ್ತು ಸಾಗಿದ ಘಟನೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಇಂದು ಸಾಯಾಂಕಾಲ 5 ಗಂಟೆಗೆ ಸಂಭವಿಸಿದೆ.

ಅಯೋಧ್ಯಾ ರಾಮ ಮಂದಿರ ಉದ್ಘಾಟನೆ ನಿಮಿತ್ತ ವಾಡಿಯಲ್ಲಿ ಶೋಭಾ ಯಾತ್ರೆ ಏರ್ಪಡಿಸಲಾಗಿತ್ತು. ಸೇವಾಲಾಲ ಮಂದಿರದಿಂದ ಶ್ರೀಲಕ್ಷ್ಮೀನಾರಾಯಣ ಮಂದಿರ ವರೆಗೆ ರಾಮನ ಮೂರ್ತಿ ಮೆರವಣಿಗೆ ನಡೆಸಲು ಭಕ್ತರು ಸಿದ್ಧತೆ ಮಾಡಿಕೊಂಡಿದ್ದರು. ಇದಕ್ಕಾಗಿ 15 ಅಡಿ ಎತ್ತರದ ರಾಮ ಮೂರ್ತಿ ತರಿಸಿಕೊಂಡಿದ್ದರು. ಆದರೆ ಪೊಲೀಸರು ಮೆರವಣಿಗೆಗೆ ಅವಕಾಶ ನಿರಾಕರಿಸಿದ್ದರು.

Contact Your\'s Advertisement; 9902492681

ದೇವಸ್ಥಾನದಲ್ಲಿ ಪೂಜೆ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲು ಸಮ್ಮತಿ ಸೂಚಿಸಲಾಗಿತ್ತು. ಪೊಲೀಸರ ವಿರುದ್ಧ ಸಿಡಿದೆದ್ದ ಹಿಂದೂ ಕಾರ್ಯಕರ್ತರು, ರಾಮನ ಮೂರ್ತಿ ಹೊತ್ತು ಸಾಗಲು ಮುಂದಾದರು. ಈ ವೇಳೆ ಸಾವಿರಾರು ಜನ ಜಯಘೋಷಗಳನ್ನು ಮೊಳಗಿಸಿ ಜನರಲ್ಲಿ ಚೈತನ್ಯ ತುಂಬಿದರು. ಪೊಲೀಸರು ಮಾತ್ರ ವಾಹನ ಅಡ್ಡ ನಿಲ್ಲಿಸಿ ಮೂರ್ತಿ ಮೆರವಣಿಗೆಗೆ ಅಡ್ಡಿಪಡಿಸಿದರು.

ಕಾನೂನು ಸುವ್ಯವಸ್ಥೆ ಹಾಳಾಗಬಾರದು ಎಂಬ ಕಾಳಜಿ ಪೊಲೀಸರದ್ದಾದರೆ, ರಾಮ ಉತ್ಸವ ನಮ್ಮ ಸ್ವಾಭಿಮಾನ ಎಂದು ಹಿಂದೂ ಕಾರ್ಯಕರ್ತರ ಸಮ್ಮುಖದಲ್ಲಿ ಕಲಬುರಗಿ ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ್, ಬಿಜೆಪಿ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೆವಾಡಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಜಟಾಪಟಿ ನಡೆಸಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಪೊಲೀಸ್ ಇಲಾಖೆಯ ವಿರುದ್ಧ ಘೋಷಣೆಗಳು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here