ಕಲಬುರಗಿ: ಭಾರತದ ಸಂವಿಧಾನ ಶಿಲ್ಪಿ ಜಗತ್ತು ಕಂಡ ಮಹಾನ್ ವ್ಯಕ್ತಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಪುತ್ತಳಿಗೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಿ ಗಡಿಪಾರು ಮಾಡಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ಆಗ್ರಹಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಡಾ.ಅಂಬೇಡ್ಕರ್ ಅವರು ಭಾರತೀಯರ ಪಾಲಿಗೆ ಆರಾಧ್ಯ ದೈವ.ಅವರನ್ನು ಅವಮಾನಿಸುವುದು ಎಂದರೆ ಇಡೀ ನಾಗರಿಕ ಸಮಾಜ ತಲೆ ತಗ್ಗಿಸಿದಂತೆ.ಎಲ್ಲಾ ಸಮುದಾಯದ ಪಾಲಿಗೆ ಅವರು ಮಹಾಮಾನವತಾದಿ ಆಗಿದ್ದಾರೆ.ಅಂತಹ ವ್ಯಕ್ತಿ ಇಡೀ ಜಗತ್ತಿನಲ್ಲಿ ಮತ್ತೊಬ್ಬರಿಲ್ಲ.ಆದರೆ ಡಾ.ಅಂಬೇಡ್ಕರ್ ಅವರ ಪುತ್ತಳಿಗೆ ಅವಮಾನಿಸುವ ಮುಲಕ ಸಮಾಜದಲ್ಲಿ ಶಾಂತಿ ಕದಡುವ ದುಸ್ಸಾಹಸಕ್ಕೆ ಕೈ ಹಾಕಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ನೀಡಿ ಅವರನ್ನು ಗಡಿಪಾರು ಮಾಡಬೇಕು.ಇನ್ನು ಮುಂದೆ ಇಂಥ ಘಟನೆಗಳನ್ನು ನಡೆಯದಂತೆ ಸರಕಾರ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಪುತ್ತಿಳಿಗಳಿಗೆ ಸೂಕ್ತ ರಕ್ಷಣೆ ನೀಡಬೇಕು.ಈ ಘಟನೆಯನ್ನು ಕನ್ನಡ ಭೂಮಿ ಜಾಗೃತಿ ಸಮಿತಿ ಖಂಡಿಸುತ್ತದೆ.ಕೂಡಲೇ ತಪ್ಪಿತಸ್ಥರನ್ನು ಪೊಲೀಸರು ಬಂಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.