ಜಾಗತಿಕ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಸಮಾವೇಶ

0
24

ಕಲಬುರಗಿ: ಬೆಳಗಾವಿಯ ಶಿವ ಬಸವ ನಗರದ ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಇದೇ ಜ. 27 ಹಾಗೂ 28ರಂದು ಎರಡು ದಿನಗಳ ಕಾಲ ಜಾಗತಿಕ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಪ್ರಥಮ ಮಹಿಳಾ ಸಮಾವೇಶ ಜರುಗಲಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನಳಿನಿ ಮಹಾಗಾಂವಕರ್ ತಿಳಿಸಿದರು.

ಕೂಡಲ ಸಂಗಮ ಬಸವ ಧರ್ಮಪೀಠದ ಪೀಠಾಧ್ಯಕ್ಷರಾದ ಪೂಜ್ಯ ಜಗದ್ಗುರು ಡಾ. ಗಂಗಾ ಮಾತಾಜಿಯವರ ಸರ್ವಾಧ್ಯಕ್ಷತೆಯಲ್ಲಿ ಈ ಸಮಾವೇಶ ಜರುಗಲಿದ್ದು, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯದಿಂದ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Contact Your\'s Advertisement; 9902492681

27ರಂದು ಬೆಳಗ್ಗೆ 11 ಗಂಟೆಗೆ ಸಮಾವೇಶ ಉದ್ಘಾಟನಾ ಸಮಾರಂಭ ಜರುಗಲಿದ್ದು, ಗದಗ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಆಡಿ-ಹಂದಿಗುಂದದ ಶಿವಾನಂದ ಸ್ವಾಮಿಗಳು, ಅಥಣಿ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮಿಗಳು, ಗೋಕಾಕ್ ಮುರುಘೇಂದ್ರ ಸ್ವಾಮೀಜಿ, ಬೀದರ್ ಬಸವ ಗಿರಿಯ ಅಕ್ಕ ಅನ್ನಪೂರ್ಣ ತಾಯಿ ನೇತೃತ್ವ ವಹಿಸಲಿದ್ದಾರೆ ಎಂದರು.

ಅತ್ತಿವೇರಿಯ ಬಸವೇಶ್ವರಿ ತಾಯಿ, ಶಿಕಾರಿಪುರದ ಶರಣಾಂಬಿಕಾ ತಾಯಿ, ಕಲಬುರಗಿಯ ಪ್ರಭುಶ್ರೀ ತಾಯಿ, ಲಿಂಗಾಯತ ಮಹಾಸಭಾ ಮಹಾ ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಜಾಮದಾರ, ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ರಾಜ್ಯ ಸಂಚಾಲಕಿ ಮುಕ್ತಾ ಕಾಗಲಿ, ಡಾ. ಅರವಿಂದ ಜತ್ತಿ, ನ್ಯಾಯಮೂರ್ತಿ ಅರಳಿ ನಾಗರಾಜ ಇತರರು ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು.

ಎರಡು ದಿನಗಳ ಈ ಸಮಾವೇಶದಲ್ಲಿ ಲಿಂಗಾಯತ ಮಹಿಳೆಯರನ್ನು ಸಾಮಾಜಿಕವಾಗಿ, ಸಾಂಸ್ಕøತಿಕವಾಗಿ, ಧಾರ್ಮಿಕವಾಗಿ ಸಂಘಟಿಸುವಲ್ಲಿ ಮಹಿಳಾ ರಾಜರಾಣಿಗಳ ಪಾತ್ರ, ಲಿಂಗಾಯತ ಧರ್ಮ, ಶರಣ ತತ್ವಗಳ ಅನುμÁ್ಠನದಲ್ಲಿ ಮಹಿಳಾ ಮಠಾಧೀಶರ ಪಾತ್ರ, ಲಿಂಗಾಯತ ನಿಜಾಚರಣೆ ಅನುμÁ್ಠನಗೊಳಿಸುವಲ್ಲಿ ಮಹಿಳೆಯರ ಪಾತ್ರ, ವಚನ ಸಾಹಿತ್ಯ ಸಂಶೋಧನೆ, ಪ್ರಸಾರ ಮತ್ತು ಪ್ರಚಾರದಲ್ಲಿ ಲಿಂಗಾಯತ ಮಹಿಳಾ ಸಾಹಿತಿಗಳ ಪಾತ್ರ ವಿಷಯ ಕುರಿತು ನಾಲ್ಕು ಗೋಷ್ಠಿಗಳು ಜರುಗಲುವೆ ಎಂದು ತಿಳಿಸಿದರು.

ಸಾಣೆಹಳ್ಳಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ, ಬೈಲೂರು ನಿಷ್ಕಲ ಮಂಟಪದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ, ಹುಕ್ಕೇರಿ ಶಿವ ಬಸವ ಸ್ವಾಮೀಜಿ, ಮೈಸೂರಿನ ಡಾ. ಶರಶ್ಚಂದ್ರ ಮಹಾಸ್ವಾಮಿಗಳು ಸೇರಿದಂತೆ ಹಲವು ಪ್ರಗತಿಪರ ಸ್ವಾಮೀಜಿಗಳು ಭಾಗವಹಿಸಲಿದ್ದು, ಮಾಜಿ ಸಚಿವರಾದ ಲೀಲಾದೇವಿ ಆರ್. ಪ್ರಸಾದ, ರಾಣಿ ಸತೀಶ, ಸಾಹಿತಿಗಳಾದ ಡಾ. ಮೀನಾಕ್ಷಿ ಬಾಳಿ, ಡಾ. ಶಕುಂತಲಾ ದುರ್ಗಿ, ಜಯಶ್ರೀ ಚಟ್ನಳ್ಳಿ, ಗಂಗಾಂಬಿಕಾ ತಾಯಿ, ಪೆÇ್ರ. ವಿಜಯಾದೇವಿ ಮತ್ತಿತರರು ವಿಷಯ ಮಂಡನೆ ಮಾಡಲಿದ್ದಾರೆ ಎಂದು ವಿವರಿಸಿದರು.

ಮಹಾಸಭಾ ಜಿಲ್ಲಾ ಘಟಕದ ಹಿರಿಯ ಉಪಾಧ್ಯಕ್ಷೆ ಅನಸೂಯಾ ನಡಕಟ್ಟಿ, ಉಪಾಧ್ಯಕ್ಷೆ ಸುಲೇಖಾ ಮಾಲಿ ಪಾಟೀಲ, ಪ್ರಧಾನ ಕಾರ್ಯದರ್ಶಿ ಜಯಶ್ರೀ ಕೋಣೆ, ಬಸಮ್ಮ ಕೆ. ಆರ್.ಜಿ. ಶೆಟಗಾರ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here