ಪರೋಪಕಾರದ ಜೀವನ ಸ್ಮರಣಾರ್ಹ: ಕುಪೇಂದ್ರ ಪಾಟೀಲ

0
39

ಕಲಬುರಗಿ: ಚಂದ್ರಶೇಖರ್ ಪಾಟೀಲ ತೇಗಲತಿಪ್ಪಿಯವರ ಪರೋಪಕಾರದ ಪುಣ್ಯವ ನೆನೆದು ಇಲ್ಲಿನ ವಿಶ್ವಜ್ಯೋತಿ ಪ್ರತಿಷ್ಠಾನದ ವತಿಯಿಂದ ನಗರದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ (ಎಂ.ಪಿ.ಎಚ್.ಎಸ್.) ಶನಿವಾರ ಆಯೋಜಿಸಿದ ‘ಚಂದಿರನ ಬೆಳಗು’  ಜೀವನದೊಳಹೊರಗು ಮೌಲ್ಯಗಳ ಬೆಳಗು ವಿಶೇಷ ಕಾರ್ಯಕ್ರಮವನ್ನು ಕಮಲಾಪುರ ತಹಾಸೀಲ್ದಾರರಾದ ಅಂಜುಮ್ ತಬಸ್ಸುಮ್ ಉದ್ಘಾಟಿಸಿ ಮಾತನಾಡಿ, ತಮ್ಮ ಕುಟುಂಬ ನಿರ್ವಹಣೆಯ ಜೊತೆಗೆ ಪರೋಪಕಾರಿಯಾಗಿದ್ದವರನ್ನು ಮಾತ್ರ ಸಮಾಜ ಸ್ಮರಿಸುತ್ತದೆ ಎನ್ನುವುದಕ್ಕೆ ಚಂದ್ರಶೇಖರ ಪಾಟೀಲ ತೇಗಲತಿಪ್ಪಿ ಸಾಕ್ಷಿಯಾಗಿದ್ದಾರೆ ಎಂದು ಹೇಳಿದರು.

ಉಪನ್ಯಾಸ ನೀಡಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೊ.ಕುಪೇಂದ್ರ ಪಾಟೀಲ, ಬಸವಾದಿ ಶರಣರ ಕಾಯಕ ಮತ್ತು ದಾಸೋಹ ಸಿದ್ಧಾಂತವನ್ನು ಮೈಗೂಡಿಸಿಕೊಂಡ ವ್ಯಕ್ತಿ ಬದುಕಿನ ಎಲ್ಲ ಕಷ್ಟ-ಸುಖಗಳಿಗೆ ಕುಂದದೆ, ಉಬ್ಬದೆ ಸಮಾಧಾನಿಯಾಗಿರುತ್ತಾನೆ. ಅದಕ್ಕೆ ಪೂರಕವೆಂಬಂತೆ ಬದುಕು ಸವೆಸಿದ್ದ ಚಂದ್ರಶೇಖರ ಪಾಟೀಲ ತೇಗಲತಿಪ್ಪಿ  ಅವರ ಬದುಕು ಇತರರಿಗೆ ಮಾದರಿಯಾಗಲಿ ಎಂದು ತಿಳಿಸಿದರು.

Contact Your\'s Advertisement; 9902492681

ಕಾರ್ಯಕ್ರಮದ ಆರಂಭಕ್ಕೆ ಮಾತುಗಳನ್ನಾಡಿದ ಪ್ರತಿಷ್ಠಾನ ಸಂಸ್ಥಾಪಕ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳುವ ಹಿನ್ನೆಲೆಯಲ್ಲಿ ಹಿರಿಯರನ್ನು ಸ್ಮರಿಸಲಾಗುತ್ತಿದೆ. ಪ್ರತಿಯೊಬ್ಬರ ಬದುಕು ಸಮಾಜಕ್ಕೆ ಉತ್ತಮ ಸಂದೇಶ ಕೊಡುವಂತಿರಬೇಕು ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಅಶೋಕ ತಳಕೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಶ್ರೀಕಾಂತ ಪಾಟೀಲ ತಿಳಗೂಳ, ಶಿವರಾಜ ಎಸ್.ಅಂಡಗಿ, ಪರಮೇಶ್ವರ ಶಟಕಾರ, ಸಿದ್ಧರಾಮ ಹಂಚನಾಳ, ರವೀಂದ್ರಕುಮಾರ ಭಂಟನಳ್ಳಿ, ಪ್ರಭುದೇವ ಯಳವಂತಗಿ, ರೇಣುಕಾ ಡಾಂಗೆ, ನೀಲಾಂಬಿಕಾ ಚೌಕಿಮಠ, ಉದಯಕುಮಾರ ಸಾಲಿ, ಜಗದೀಶ ಪಾಟೀಲ, ಶಿವಶರಣ ಕುಸನೂರ, ಪ್ರಭುಲಿಂಗ ಮೂಲಗೆ, ಸತೀಶ ಸಜ್ಜನ್ , ಶಂಕರ ಸಜ್ಜನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here