ಕಲಬುರಗಿ ಕಸಾಪ; `ಸಂವಿಧಾನ ಜಾಗೃತಿ ಕವಿಗೋಷ್ಠಿ’ಗೆ ಚಾಲನೆ

0
313

ಕಲಬುರಗಿ: ಪ್ರತಿಯೊಬ್ಬರಿಗೂ ನಮ್ಮ ಭಾರತದ ಸಂವಿಧಾನ ಸರ್ವ ಸಮನ್ವಯತೆಯ ಅವಕಾಶ ನೀಡಿದೆ ಹಾಗೂ ಸಾಮಾಜಿಕ ನ್ಯಾಯ ನೀಡಿದೆ. ಹೀಗಿರುವಾಗ ಸಂವಿಧಾನಕ್ಕೆ ಗಂಡಾಂತರವನ್ನು ಇವತ್ತು ಮೂಲಭೂತ ಶಕ್ತಿಗಳು ಯತ್ನಿಸುತ್ತಿವೆ. ನಾವೆಲ್ಲ ಎಚ್ಚೆತ್ತುಕೊಂಡು ಸಂವಿಧಾನ ಉಳಿಸುವ ಕೆಲಸ ಮಾಡಬೇಕಾಗಿದೆ. ಜಾತಿ ವ್ಯವಸ್ಥೆ ಕಿತ್ತು ಹಾಕಲು ಸಮನ ಮನಸ್ಕರು ಮುಂದಾಗಬೇಕೆಂದರು. ಸಾಹಿತ್ಯ ಸಮಾಜಕ್ಕೆ ದಿಕ್ಸೂಚಿಯಾಗಬೇಕು. ಇಂಥ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು ಎಂದು ಹಿರಿಯ ಸಾಹಿತಿ ಎಸ್.ಪಿ. ಸುಳ್ಳದ್ ಅವರು ಆಶಯ ವ್ಯಕ್ತಪಡಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದಲ್ಲಿ ಆಯೋಜಿಸಿದ `ಸಂವಿಧಾನ ಜಾಗೃತಿ ಕವಿಗೋಷ್ಠಿ’ ಗೆ ಚಾಲನೆ ನೀಡಿ ಮಾತನಾಡಿದ ಅವರು, ಸಂವಿಧಾನ ಕುರಿತು ಆಳವಾದ ವಿಚಾರ ಮಾಡಿದಾಗ ಅದರ ಮೌಲ್ಯ ತಿಳಿಯಬಹುದಾಗಿದೆ. ಈ ನಿಟ್ಟಿನಲ್ಲಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ಇಂಥಹದೊಂದು ಜನಪರ ಕಾಳಜಿ ಹೊಂದಿದ ಕಾರ್ಯಕ್ರಮ ಇತರೆ ಜಿಲ್ಲೆಗಳಿಗೂ ಮಾದರಿಯಾದುದು ಎಂದರು.

Contact Your\'s Advertisement; 9902492681

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಸಂವಿಧಾನದ ಆಶಯಗಳ ತಕ್ಕಂತೆ ಬದುಕು ನಡೆಬೇಕಾಗಿದೆ. ಅಂಥ ಆಶಯಗಳು ಜನ ಸಾಮಾನ್ಯರಿಗೆ ತಲುಪಿಸಬೇಕಾಗಿದೆ. ಸಂವಿಧಾನದ ಕಾನೂನುಗಳನ್ನು ಗೌರವಿಸುವ ಕೆಲಸ ಮಾಡಬೆಕಾಗಿದೆ. ಹಾಗೂ ಸಮ ಸಮಾಜವನ್ನು ಕಟ್ಟಲು ಬುದ್ಧ, ಬಸವ, ಡಾ. ಅಂಬೇಡ್ಕರ್ ರವರು ಬಯಸಿ ಹೋರಾಟ ಮಾಡಿದ್ದವರು. ಅವರನ್ನು ಗೌರವಿಸುವ ಮೂಲಕ ಸಂವಿಧಾನದ ಜಾಗೃತಿ ಮೂಡಿಸಬೇಕಾಗಿದೆ. ಎಲ್ಲರನ್ನು ಒಗ್ಗೂಡಿಸುವಂಥ ಕೆಲಸ ಸಾಹಿತ್ಯ ಪರಿಷತ್ತು ನಿರಂತರವಾಗಿ ಜಿಲ್ಲೆಯಲ್ಲಿ ಮಾಡುತ್ತಿದೆ ಎಂದು ಹೇಳಿದರು.

ಹಿರಿಯ ಲೇಖಕ ಅಮೃತ ಡಿ ದೊಡ್ಮನಿ ಯಡ್ರಾ ಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸೋಮನಾಥ ಕಟ್ಟಿಮನಿ, ಗೌರಿ ಚಿಚಕೋಟಿ, ಪ್ರವೀಣ ರಾಜನ್ ಶಹಾಬಾದ, ಶಿವರಾಜ ಅಂಡಗಿ, ಯಶ್ವಂತರಾಯ ಅಷ್ಠಗಿ, ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ, ವಿಶ್ವನಾಥ ತೊಟ್ನಳ್ಳಿ ಮಾತನಾಡಿದರು.

ಕವಿಗಳಾದ ನರಸಿಂಗರಾವ ಹೇಮನೂರ, ಭೀಮರಾಯ ಹೇಮನೂರ, ರವೀಂದ್ರ ಬಿ.ಕೆ., ಧರ್ಮಣ್ಣಾ ಹೆಚ್ ಧನ್ನಿ, ನಾಗೇಂದ್ರಪ್ಪ ಮಾಡ್ಯಾಳೆ, ಕವಿತಾ ಮಾಲಿಪಾಟೀಲ, ಅಂಬರಾಯ ಮಡ್ಡೆ, ರವಿ ಎಲ್ ಹೂಗಾರ, ಗಂಗಮ್ಮಾ ನಾಲವಾರ, ಉಷಾ ಗೊಬ್ಬೂರ, ಎಂ.ಎನ್. ಸುಗಂಧಿ, ಮಂಜುಳಾ ಎಂ. ಪಾಟೀಲ, ಸ್ವಾತಿ ಬಿ ಕೋಬಾಳ, ಕವಿತಾ ಕಾವಳೆ, ಸುರೇಖಾ ಜೇವರ್ಗಿ, ರೇಣುಕಾ ಎನ್., ವೆಂಕುಬಾಯಿ ರಜಪೂತ, ರಮೇಶ ಯಾಳಗಿ, ಸಂತೋಷ ಕಲ್ಮೂಡ, ಎಸ್ ಎಂ ಪಟ್ಟಣಕರ್, ಸಂತೋಷ ಗುಡಿಮನಿ ಸೇರಿದಂತೆ ಅನೇಕರು ಪ್ರಚಲಿತ ವಿದ್ಯಮಾನಗಳ ಕುರಿತು ಕವನ ವಾಚಿಸಿ ಮೂಢನಂಬಿಕೆ, ಅಸಮಾನತೆ, ಘೋರಕೃತ್ಯಗಳು, ಅತ್ಯಾಚಾರ, ಅನ್ಯಾಯ, ಭ್ರಷ್ಟಚಾರ, ಮಹಿಳೆಯರ ಮೇಲಿನ ದೌರ್ಜನ್ಯ ಸೇರಿದಂತೆ ಸಮಕಾಲೀನ ತಲ್ಲಣಗಳ ಕುರಿತು ಕವನ ವಾಚಿಸಿ ಪ್ರೇಕ್ಷಕರ ಗಮನ ಸೆಳೆದರು.

ಪ್ರಮುಖರಾದ ನಾಗಪ್ಪ ಎಂ. ಸಜ್ಜನ್, ಎಸ್ ಕೆ ಬಿರಾದಾರ, ಗುರುಬಸಪ್ಪ ಸಜ್ಜನಶೆಟ್ಟಿ, ರೇಣಸಿದ್ದಪ್ಪ ಜೀವಣಗಿ, ಎಂ.ಬಿ.ನಿಂಗಪ್ಪ, ಸಿದ್ಧಲಿಂಗ ಬಾಳಿ, ಸೋಮಶೇಖರ ಮಾಲಿಪಾಟೀಲ ತೇಗಲತಿಪ್ಪಿ, ಶಾಂತಲಿಂಗ ಪಾಟೀಲ ಕೋಳಕೂರ, ಬಂಗಾರಪ್ಪ, ಬಿ ಎಂ ಪಾಟೀಲ ಕಲ್ಲೂರ, ಮಲ್ಲಿಕಾರ್ಜುನ ಇಬ್ರಾಹಿಂಪುರ, ರೇವಯ್ಯಾ ಸ್ವಾಮಿ ಸರಡಗಿ, ಗಣೇಶ ಚಿನ್ನಾಕಾರ, ಶಿವಾನಂದ ಪೂಜಾರಿ, ವಿನೋದಕುಮಾರ ಜೇನವೇರಿ, ಶಿವಕುಮಾರ ಸಿ.ಹೆಚ್., ಮಲ್ಲಿನಾಥ ಸಂಗಶೆಟ್ಟಿ, ಸಾಗರ ವಾಗ್ಮೊರೆ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ನಮ್ಮ ದೇಶದ ಅಭಿವೃದ್ಧಿಗೆ ಪೂರಕವಾದ ಸಂವಿಧಾನ ರಚನೆ ಮಾಡಿಕೊಟ್ಟ ಡಾ. ಅಂಬೇಡ್ಕರ್ ಅವರನ್ನು ಸದಾ ಸ್ಮರಣೆ ಮಾಡಿಕೊಳ್ಳುವುದು, ಜತೆಗೆ ಸಂವಿಧಾನದ ಆಶಯಗಳನ್ನು ಉಳಿಸಿ ಬೆಳೆಸುವತ್ತ ಮುಂದಾಗುವುದು ಪ್ರತಿಯೊಬ್ಬ ಪ್ರಯೆಯ ಕರ್ತವ್ಯವಾಗಿದೆ. – ವಿಜಯಕುಮಾರ ತೇಗಲತಿಪ್ಪಿ, ಕಸಾಪ ಜಿಲ್ಲಾಧ್ಯಕ್ಷ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here