ಆಧ್ಯಾತ್ಮಿಯತೆಯಿಂದ ಕೂಡಿದ ದೈಹಿಕ ಸ್ವಾಸ್ಥವ್ಯ ಆರೋಗ್ಯ: ಗುರುಪಾದ ಶ್ರೀಗಳು ಶಹಾಪೂರ

0
47

ಕಲಬುರಗಿ: ನಮ್ಮ ದೇಹ ರೋಗ ಮುಕ್ತರಾಗಿರುವುದೇ ಆರೋಗ್ಯವೆಂದು ತಿಳಿಯುವುದು ಸಹಜ. ಬರಿ ದೇಹ ಮಾತ್ರ ಆರೋಗ್ಯದಿಂದಿರುವುದು ಸಾಲದು, ಮನುಷ್ಯನ ಮನಸ್ಸು ಸಹ ನಿರ್ಮಲವಾಗಿರಬೇಕು, ಎಲ್ಲರ ದೇಹ ಮತ್ತು ಮನಸ್ಸು ಶುದ್ಧವಾಗಿದ್ದರೆ ಸಮಾಜದ ಸ್ವಾಸ್ಥ ಸರಿಯಾಗಿರುತ್ತದೆ. ಇದರೊಂದಿಗೆ ಧಾರ್ಮಿಕ ಸಹನೆ ಸೇರಿದರೆ ಸಂಪೂರ್ಣ ಆರೋಗ್ಯ ಫಲಿಸುತ್ತದೆ. ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆದ್ಯತ್ಮಿಕ ಸ್ವಾಸ್ಥವೇ ಆರೋಗ್ಯ ಎನ್ನುತ್ತಾ ಇಂದಿನ ಯಾಂತ್ರಿಕ ಸಮಯದಲ್ಲಿ ಯಾರಿಗೂ ಸಮಯ ಸಿಗುತ್ತಿಲ್ಲ, ಅಂತಹದರಲ್ಲಿ ಇಂದು ನೀವೆಲ್ಲ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಇಲ್ಲಿ ಸಮಾವೇಶಗೊಂಡಿರುವುದು ಪುರಾಣ ಪ್ರವಚನ ಎಂಬ ಹೆಸರಿನಲ್ಲಿ ಆದ್ಯತ್ಮಿಕ ಚಿಂತನೆ ನಡೆಸುತ್ತಿರುವುದು ಸಮಾಜದ ಒಳ್ಳೆಯ ಆರೋಗ್ಯಕ್ಕೆ ಸ್ವಾಸ್ಥಗೆ ನಾಂದಿ ಹಾಡುವಂತಿದೆ ಈ ಅದ್ಭುತ ಪ್ರವಚನ ಮುಕ್ತಾಯ ಸಮಾರಂಭ ಸೇಡಂ ರಸ್ತೆಯ ವಿದ್ಯಾನಗರ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವೆಲ್‌ಫೇರ್ ಸೊಸೈಟಿ ವತಿಯಿಂದ ಹಮ್ಮಿಕೊಂಡ ಗರಗದ ಮಡಿವಾಳೇಶ್ವರ ಪುರಾಣ ಮುಕ್ತಾಯ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಪ್ರಾರಂಭದಲ್ಲಿ ಪ್ರಸಾದಕ್ಕೆ ಪೂಜೆ ನೆರವೇರಿಸಿದ ಶಹಾಪೂರಿನ ಫಕಿರೇಶ್ವರ ಮಠದ ಗುರುಪಾದ ಮಹಾಸ್ವಾಮಿಗಳು ಆರ್ಶೀವಚನ ನೀಡಿದರು.

ಪೂಜ್ಯ ಶ್ರೀ ಚನ್ನಮಲ್ಲ ಸ್ವಾಮಿಗಳು ಹೊಸಮಠ ಗೋಳಾ (ಬಿ) ಮತ್ತು ನರೋಣಾ ಎಂ.ಬಿ.ನಗರ ಪೊಲೀಸ್ ಠಾಣೆಯ ಸಿ.ಪಿ.ಐ.ದಿಲೀಪ ಸರ್ಗ, ಅತಿಥಿಗಳಾಗಿ ಮಾತನಾಡಿದರು. ವಿದ್ಯಾನಗರ ವೆಲ್‌ಫೇರ್ ಸೊಸೈಟಿಯ ಅಧ್ಯಕ್ಷರಾದ ಮಲ್ಲಿನಾಥ ದೇಶಮುಖ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಉಮೇಶ ಶೆಟ್ಟಿ, ಕಾರ್ಯದರ್ಶಿ ಶಿವರಾಜ ಅಂಡಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಪೂಜ್ಯರ ಆರ್ಶೀವಚನಕ್ಕಿಂತ ಮುಂಚೆ ಪುರಾಣ ಸಂದರ್ಭದಲ್ಲಿ ನೆರವೇರಿಸಿದ ತೊಟ್ಟಿಲು ಕಾರ್ಯಕ್ರಮದ ತೊಟ್ಟಿಲು ಹರಾಜು ನಡೆಯಿತು, ವಿಶ್ವನಾಥ ಮಠಪತಿ ರವರು ತೊಟ್ಟಿಲು ಹರಾಜಿನಲ್ಲಿ ಭಾಗವಹಿಸಿ ಎಲ್ಲರಕ್ಕಿಂತ ಹೆಚ್ಚು ಹಣ ಪಾವತಿಸಿ ತೊಟ್ಟಿಲು ಪಡೆದಿದ್ದಾರೆ. ಹಾಗು ಗರಗದ ಮಡಿವಾಳೇಶ್ವರ ಭಾವಚಿತ್ರ ಶಿವಾನಂದ ಕಿತ್ತೂರ ಪಡೆದಿದ್ದಾರೆ.

Contact Your\'s Advertisement; 9902492681

ವಿದ್ಯಾನಗರ ವೆಲ್‌ಫೇರ್ ಸೊಸೈಟಿಯ ಆಡಳಿತ ಮಂಡಳಿಯ ಸದಸ್ಯರು, ಶಿವಶರಣೆ ಅಕ್ಕಮಹಾದೇವಿ ಮಹಿಳಾ ಟ್ರಸ್ಟ್ ಸದಸ್ಯರು, ಶ್ರೀ ಮಲ್ಲಿಕಾರ್ಜುನ ತರುಣ ಸಂಘದ ಸದಸ್ಯರೆಲ್ಲರೂ ಪುರಾಣ ಮುಕ್ತಾಯ ಸಮಾರಂಭಕ್ಕೆ ಬಡಾವಣೆಯ ಸುತ್ತ-ಮುತ್ತಲಿನಿಂದ ಬಂದ ಸಾವಿರಾರು ಭಕ್ತರಿಗೆ ಪುರುಷ ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಪ್ರಸಾದ ವಿತರಿಸಿ ಅತ್ಯಂತ ಕಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದಾರೆಂದು ಸೊಸೈಟಿಯ ಕಾರ್ಯದರ್ಶಿ ಶಿವರಾಜ ಅಂಡಗಿ ಪ್ರಕರಣೆಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಪ್ರಮುಖರಾದ ಬಸವಂತರಾವ ಜಾಬಶೇಟ್ಟಿ, ರವಿ ಗಣಜಲಖೇಡ್, ಮಲ್ಲಿಕಾರ್ಜುನ ನಾಗಶೆಟ್ಟಿ, ವಿಶ್ವನಾಥ ರಟಕಲ್, ಬಸವರಾಜ ಪುಣ್ಯಶೆಟ್ಡಟಿ, ಸುಭಾಷ್ ಮಂಠಾಳೆ, ನಾಗಭೂಷಣ ಹಿಂದೊಡ್ಡಿ, ಶ್ರೀಮಂತರಾವ ರಾಜಾಪೂರ, ಗುರುಲಿಂಗಯ್ಯಾ ಮಠಪತಿ, ನಾಗರಾಜ ಹೆಬ್ಬಾಳ, ಅಣವೀರಪ್ಪಾ ಮುಗಳಿ, ಮಹಾದೇವಪ್ಪಾ ಪಾಟೀಲ್ ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here