ಕಲಬುರಗಿ 20ನೇ ಕನ್ನಡ ಸಾಹಿತ್ಯ ಸಮ್ಮೇಳನ: ಸರ್ವಾಧ್ಯಕ್ಷರಾಗಿ ಡಾ. ಟಿ.ಎಂ. ಭಾಸ್ಕರ್ ಆಯ್ಕೆ

0
254

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಫೆಬ್ರವರಿ ತಿಂಗಳಿನಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿರುವ ಕಲಬುರಗಿ ಜಿಲ್ಲಾ 20 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕಮಲಾಪೂರ ತಾಲೂಕಿನ ವಿ.ಕೆ.ಸಲಗರ ಎಂಬ ಹಳ್ಳಿಯಲ್ಲಿ ಹುಟ್ಟಿ ಬೆಳೆದು ಸಾಹಿತ್ಯ ಕ್ಷೇತ್ರದಲ್ಲಿ ಮೇರು ಸ್ಥಾನಕ್ಕೇರಿರುವ ಹಿರಿಯ ಸಾಹಿತಿ-ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಟಿ.ಎಂ.ಭಾಸ್ಕರ್ ಅವರು ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹಾಗೂ ಗೌರವ ಕಾರ್ಯದರ್ಶಿ ಶಿವರಾಜ್ ಎಸ್ ಅಂಡಗಿ ಜಂಟಿಯಾಗಿ ತಿಳಿಸಿದ್ದಾರೆ.

ನಗರದ ಕನ್ನಡ ಭವನದಲ್ಲಿ ರವಿವಾರದಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅನೇಕ ಹಿರಿಯ ಸಾಹಿತಿಗಳ ಹೆಸರುಗಳನ್ನು ಪ್ರಸ್ತಾಪವಾದವು. ನಂತರ ಸಮ್ಮೇಳನದ ಅಧ್ಯಕ್ಷರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸ್ವಾಗತ ಸಮಿತಿಯ ಅಧ್ಯಕ್ಷರನ್ನಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಎಂ. ಖರ್ಗೆಜೀ ಅವರನ್ನು ನೇಮಕ ಮಾಡಲಾಗಿದ್ದು, ಅವರ ನೇತೃತ್ವದಲ್ಲಿ ಎರಡು ದಿನಗಳ ಕಾಲ ಆಡಂಬರವಿಲ್ಲದ, ಅರ್ಥಪೂರ್ಣವಾದ ಸಮ್ಮೇಳನವನ್ನು ನಡೆಸಲು ನಿರ್ಧರಿಸಲಾಯಿತು.

Contact Your\'s Advertisement; 9902492681

ಕಲ್ಯಾಣ ಕರ್ನಾಟಕದ ಹಿರಿಯ ಕನ್ನಡ ಸಾಹಿತಿಗಳಲ್ಲಿ ಒಬ್ಬರಾದ ಡಾ. ಟಿ.ಎಂ.ಭಾಸ್ಕರ್ ಅವರು ಕಮಲಾಪೂರ ತಾಲೂಕಿನ ವಿ.ಕೆ. ಸಲಗರ ಗ್ರಾಮದಲ್ಲಿ 1963 ರ ಜನವರಿ 4 ರಂದು ಜನಿಸಿದರು. ಡಾ. ಟಿ.ಎಂ. ಭಾಸ್ಕರ್ ಅವರು ಕೂಲಿ ಕೆಲಸ ಮಾಡುವ ಕುಟುಂಬವಾಗಿತ್ತು. ಭೂಮಿ ಮೇಲೆ ಮಳೆ ಹನಿ ಬಿದ್ದರೆ ಕೈ ತುಂಬ ಕೆಲಸ ಮಾಡುವ, ಬಿಸಿಲು ಬಂದು ಮಳೆಯಾಗದಿದ್ದರೆ ಶ್ರೀಮಂತರ ಹೊಲಗಳಲ್ಲಿ ಕಲ್ಲು ಆರಿಸುವ ಕಾಯಕದಲ್ಲಿ ತೊಡಗಿದವರು. ಅವರ ಜೀವನ ಕಷ್ಟದ ಜೀವನ ಪರಿಶ್ರಮದ ಬೆವರು ಸುರಿಸಿ ಹಸಿದ ಹೊಟ್ಟೆ ತುಂಬಿಸಿಕೊಳ್ಳುವ ಜೀವಗಳು.

ಶ್ರೀಯುತರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ತಮ್ಮ ಸ್ವಂತ ಊರಾದ ವ್ಹಿ.ಕೆ. ಸಲಗರದಲ್ಲಿಯೇ ಮುಗಿಸಿ, ಪಿಯುಸಿ ಮತ್ತು ಸ್ನಾತಕ ಪದವಿಯನ್ನು ಕಲಬುರಗಿಯ ಸರಕಾರಿ ಪದವಿ ಮಹಾವಿದ್ಯಾಲಯದಲ್ಲಿ ಪೂರೈಸಿದ್ದಾರೆ. ಇವರು ತುಂಬ ಕಷ್ಟದ ವಿದ್ಯಾರ್ಥಿ ಜೀವನವನ್ನು ಕಳೆದರು.ಹಸಿದ ಹೊಟ್ಟೆಗೆ ಅನ್ನ ಸಿಗದೆ ಒದ್ದಾಡಿದ ಕಾಲವದು.

ಜಾತಿ ಪದ್ಧತಿ, ಅಸ್ಪøಶ್ಯತೆಯ ವ್ಯವಸ್ಥೆಯಲ್ಲಿ ಬಾಳಿ ಬದುಕಿದ ಡಾ. ಟಿ.ಎಂ. ಭಾಸ್ಕರ್ ಅವರು, ತಮ್ಮ ತೀರಾ ಬಡತನದಲ್ಲೂ ಪ್ರತಿಭೆಯನ್ನು ಹುಡುಕಿಕೊಂಡು ಅವಕಾಶಗಳು ಬರುತ್ತವೆಂಬ ಜನವಾಣಿಯಂತೆ ಇವರಿಗೆ ಗುಲಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಹಾಯಕ ಅಧ್ಯಾಪಕರಾಗಿ ಸೇವೆಗೆ ಅವಕಾಶ ದೊರೆಯಿತು.

ಶ್ರಮಸಂಸ್ಕøತಿಯ ಮನೆತನದಿಂದ ಬಂದಿರುವ ಡಾ. ಟಿ.ಎಂ. ಭಾಸ್ಕರ್ ಅವರು ತಮ್ಮ ಓದಿನ ಜತೆಗೆ ಹಗಲಿರುಳು ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಮುಂದೆ ವಿವಿಧ ಹುದ್ದೇಗಳನ್ನು ತಮ್ಮ ಮುಡಿಗೇರಿಸಿಕೊಂಡಿರುವ ಇವರು ತಮ್ಮ ವೃತ್ತಿಯಲ್ಲಿ ಉತ್ತಮ ಛಾಪು ಮೂಡಿಸಿದ್ದಾರೆ.

ಇವರ ಸುದೀರ್ಘವಾದ ತಮ್ಮ ಸೇವಾ ಅನುಭವದ ಜತೆಗೆ ಆಡಳಿತ ಅನುಭವವನ್ನು ಹೊಂದಿರುವ ಡಾ. ಬಾಸ್ಕರ್ ಅವರನ್ನು ವಿಜಯನಗರ್ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯಕ್ಕೆ ಕುಲಸಚಿವರನ್ನಾಗಿ ನೇಮಕ ಮಾಡಲಾಯಿತು. ವಿದ್ಯಾವಿಷಯಕ, ಸಿಂಡಿಕೇಟ್ ಸದಸ್ಯರಾಗಿ ಉತ್ತಮ ಸೇವೆ ನೀಡಿ ಸೈ ಎನಿಸಿಕೊಂಡಿದ್ದಾರೆ.

ದೇಶದ ಉತ್ಕøಷ್ಟ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕಗೊಂಡರು. ಸಾಹಿತ್ಯ ಸಾಧನೆ : ತಮ್ಮ ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿರುವ ಡಾ. ಟಿ.ಎಂ. ಭಾಸ್ಕರ್ ಅವರು ಹೊಸದಾರಿ, ಮಾತಾಡುವ ಎಲುಬುಗಳು, ನೀರ ಮೇಲಿನ ಮಳೆ ಕವನ ಸಂಕಲನಗಳು ರಚಿಸಿದ್ದಾರೆ. ತಥಾಗತ ದರ್ಶನ ಎನ್ನುವುದು ಅವರ ಖಂಡಕಾವ್ಯ ವಾಗಿದೆ. ಇದು ಅವರ ಮಹಾಕಾವ್ಯಕ್ಕೆ ಬುನಾದಿಯೂ ಆಗಿದೆ.

ಸದಾ ಸೃಜನಕ್ರಿಯೆಯಲ್ಲಿ ತೊಡಗಿರುವ ಭಾಸ್ಕರ್ ಅವರು ಕಾವ್ಯ, ನಾಟಕಗಳನ್ನು ಬರೆಯುತ್ತ ಬಂದವರು. ಅವರ ನೀರು ಬೇಕು ನೀರು, ಗೌಡ, ಗಾಂಧಿ ಟೋಪಿ, ಮಲ್ಲಿಗೆ ಸಂಪುಟ, ಸಾರಿಪುತ್ರ, ಭೂತದೊಳಗಿನ ಭೂತ, ಮಹಾಬೋಧಿ,. ಶೂನ್ಯವಾದ ಹೀಗೆ ಇಪ್ಪತ್ತಕ್ಕೂ ಹೆಚ್ಚು ನಾಟಕಗಳನ್ನು ಪ್ರಕಟಿಸಿದ್ದಾರೆ. ಇವರ ಅನೇಕ ಕೃತಿಗಳಿಗೆ ಪ್ರಶಸ್ತಿಗಳನ್ನು ದೊರಕಿಸಿಕೊಟ್ಟಿವೆ.

ಕಸುಬಿನ ಹಾಡುಗಳು, ಬುಡಕಟ್ಟು ಮತ್ತು ಜಾಗತೀಕರಣ, ಸುಡುಗಾಡು ಸಿದ್ಧರು, ಮೀರಾಸಾಹೇಬ, ಕ್ರಾನಳ್ಳಿ ಹೊನ್ನಪ್ಪ ಮಹಾರಾಜರ ತತ್ವಪದಗಳು… ಹೀಗೆ ಅವರು ಕಾವ್ಯ, ನಠಕ, ಸಂಪಾದನೆ, ಸಂಶೋಧನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬಹು ಮುಖ್ಯವಾಗಿ ಬೌದ್ಧ ಸಾಹಿತ್ಯವನ್ನು ಅಧ್ಯಯನ ಮಾಡುತ್ತಿರುವ ಅವರು ಅದರಲ್ಲಿ ಅನೇಕ ಕೃತಿಗಳನ್ನು ಹೊರ ತಂದಿದ್ದಾರೆ. ಬೌದ್ಧ
ಶಾಸ್ತ್ರ, ಸಾಹಿತ್ಯ ಅವರ ಇತ್ತೀಚಿನ ಕೃತಿಯಾಗಿವೆ.

ಹೀಗೆ ಬಿಡುವಿಲ್ಲದ ಕೆಲಸ ಕಾರ್ಯಗಳ ಮಧ್ಯದಲ್ಲಿಯೂ ಬರವಣಿಗೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಡಾ. ಭಾಸ್ಕರ್ ಅವರು ತಮ್ಮದೇ ಆಗಿರುವ ದೃಷ್ಟಿಕೋನದ ಹಿನ್ನೆಲೆಯಲ್ಲಿ ಸಾಹಿತ್ಯ ಕೃಷಿಯನ್ನು ಮಾಡುತ್ತಿದ್ದಾರೆ.

`ಡಾ. ಅಂಬೇಡ್ಕರ್ ವಾದ ಮತ್ತು ದಲಿತರು’ ಎಂಬ ಕೃತಿ ಅವರಿಗೆ ಗಾಂಧಿ ಸ್ಮಾರಕ ನಿಧಿ ಪ್ರಶಸ್ತಿಯನ್ನು ತಂದು ಕೊಟ್ಟಿದೆ. ಮುರುಘಾಮಠದಿಂದ ಕನ್ನಡ ಭೂಷಣ, ಅಲ್ಲದೇ ಗುಲಬರ್ಗ ವಿ.ವಿ. ಯಿಂದ `ಗೌಡ ನಾಟಕ’ ಕ್ಕೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಅವರ ಮುಡಿಗೇರಿವೆ. ಶೈಕ್ಷಣಿಕವಾಗಿ ತುಂಬ ಸಾಧನೆ ಮಾಡಿರುವ ಮತ್ತು ಮಾಡುತ್ತಿರುವ ಡಾ. ಭಾಸ್ಕರ್ ಅವರ ಮಾರ್ಗದರ್ಶನದಲ್ಲಿ ಅನೇಕ ವಿದ್ಯಾರ್ಥಿಗಳು ಡಾಕ್ಟರೇಟ್ ಪದವಿಯನ್ನು ಮತ್ತು ಎಂ.ಫಿಲ್ ಪದವಿಯನ್ನು ಪಡೆದುಕೊಂಡಿದ್ದಾರೆ.

ಸೃಜನಶೀಲತೆಯ ಮನಸ್ಸುಳ್ಳ ಡಾ. ಟಿ.ಎಂ. ಭಾಸ್ಕರ್ ಅವರು ದಣಿವರಿಯದ ಪರಿಶ್ರಮ ಫಲಾಪೇಕ್ಷೆಯಿಲ್ಲದೆ ಕಾಯಕ ನಿರಂತರ ತಮ್ಮನ್ನು ತಾವು ಯಾವುದಾದರೊಂದು ಒಳ್ಳೆಯ ಕ್ರಿಯಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮಾಧಾನಚಿತ್ತದಿಂದ ಕಾರ್ಯ ಮಾಡುತ್ತಿರುವವರು. ಎದುರಾಗುವ ಯಾವುದೇ ಟೀಕೆ ಟಿಪ್ಪಣಿಗಳಿಗೆ ಒಳಗಾಗದೆ ಹಿಡಿದ ಕೆಲಸ ಬಿಡದೆ ಹಾಕಿಕೊಂಡ ಯೋಚನೆ ಯಶಸ್ವಿಗೊಳಿಸುವ ದೃಢ ಮನಸ್ಸುಳ್ಳವರು. ಅವರು ಈಗ `ಬುದ್ಧಭಾರತ’ ಮಹಾಕಾವ್ಯದ ರಚನೆಯಲ್ಲಿ ತೊಡಗಿದ್ದಾರೆ.

ಇಂಥ ಮೇರು ಮಟ್ಟದ ಸಾಹಿತಿಯನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಅಯ್ಕೆ ಮಾಡಿರುವುದು ಸಾಹಿತ್ಯ ವಲಯದಲ್ಲಿ ಸಹಜವಾಗಿ ಖುಷಿ ವ್ಯಕ್ತಪಡಿಸುತ್ತಿದ್ದಾರೆ.

ಸಭೆಯಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಯಶ್ವಂತರಾಯ ಅಷ್ಠಗಿ, ರಾಜೇಂದ್ರ ಮಾಡಬೂಳ, ರವೀಂದ್ರಕುಮಾರ ಭಂಟನಳ್ಳಿ, ಶಕುಂತಲಾ ಪಾಟೀಲ ಜಾವಳಿ, ಕಲ್ಯಾಣಕುಮಾರ ಶೀಲವಂತ, ಪ್ರಭು ಫುಲಾರಿ, ಸಂತೋಷ ಕುಡಳ್ಳಿ, ನಾಗಪ್ಪ ಎಂ. ಸಜ್ಜನ್, ಎಸ್ ಕೆ ಬಿರಾದಾರ, ಸುರೇಶ ದೇಶಪಾಂಡೆ, ಗುರುಬಸಪ್ಪ ಸಜ್ಜನಶೆಟ್ಟಿ, ವೀರೇಂದ್ರಕುಮಾರ ಕೊಲ್ಲೂರ, ಶರಣಬಸಪ್ಪ ಕೋಬಾಳ, ಸುರೇಶ ಲೇಂಗಟಿ, ಶಕುಂತಲಾ ಪಾಟೀಲ, ಜ್ಯೋತಿ ಕೋಟನೂರ, ಸಿದ್ಧಲಿಂಗ ಜಿ ಬಾಳಿ, ವಿಶ್ವನಾಥ ತೊಟ್ನಳ್ಳಿ, ಪ್ರಭುಲಿಂಗ ಮೂಲಗೆ, ಶಾಮಸುಮದರ ಕುಲಕರ್ಣಿ, ವಿನೋದಕುಮಾರ ಜೇನವೇರಿ, ಶಿವಾನಂದ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here