ಅಲ್ಪಸಂಖ್ಯಾತರ ಸಮುದಾಯದ 4% ಮೀಸಲಾತಿ ಮರು ಸ್ಥಾಪನೆಗೆ ಶಹನಾಜ್‌ ಅಖ್ತರ ಆಗ್ರಹ

0
70

ಶಾದಿ ಭಾಗ್ಯ ಪುನಃ ಆರಂಭಕ್ಕೆ ಆಗ್ರಹ

ಬಜೆಟ್ ನಲ್ಲಿ ಅಲ್ಪಸಂಖ್ಯಾತರ ಸಮುದಾಯಕ್ಕೆ 15 ಸಾವಿರ ಕೋಟಿ ಮೀಸಲಿಡಬೇಕೆಂದು ಆಗ್ರಹ

ಕಲಬುರಗಿ: ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿರುವ ಅಲ್ಪಸಂಖ್ಯಾತ ಸಮುದಾಯದಕ್ಕೆ ನೀಡುತ್ತಿದ್ದ 4% ಮಿಸಲಾತಿ ಮರುಸ್ಥಾಪನೆ ಮಾಡುವ ಭರವಸೆಯನ್ನು ಈ ಬಜೆಟ್ ನಲ್ಲಿ ಈಡೇರಿಸಬೇಕು ಮತ್ತು ಬಜೆಟ್ ನಲ್ಲಿ ಸಮುದಾಯದ ಅಭಿವೃದ್ಧಿಗಾಗಿ 15 ಸಾವಿರ ಕೋಟಿ ಹಣವನ್ನು ಮೀಸಲಿಡಬೇಕೆಂದು ಎಂದು ಸಮಾಜಿ ಕಾರ್ಯಕರ್ತೆ ಹಾಗೂ ಹೋರಾಟಗಾರ್ತಿ ಶಹನಾಜ್‌ ಅಖ್ತರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಬಿ.ಝಡ್ ಜಮೀರ್ ಅಹ್ಮದ್ ಅವರಿಗೆ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರ ಪರೆದು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಜನರ ಅಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿ 2024-25 ರ ಬಜೆಟ್‌ ನಲ್ಲಿ ಈ ಹಿಂದೆ ರಾಜ್ಯದ ಎಲ್ಲಾ ಅಲ್ಪಸಂಖ್ಯಾತ ಸಮುದಾಯದ ಹೆಣ್ಣು ಮಕ್ಕಳಿಗೆ ಶಾದಿ ಭಾಗ್ಯ ಯೋಜನೆಯನ್ನು ಮರು ಪ್ರಾರಂಭ, ಮಹಿಳೆಯರ ಅಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿ ಉದ್ಯಮಗಳು ನಡೆಸಲು ಉತ್ತೇಜನ ನೀಡುವುದಕ್ಕೆ ಬಜೆಟ್‌ನಲ್ಲಿ ಯೋಜನೆಯನ್ನು ಜಾರಿಗೆ ತರಬೇಕು. ಕಲಬುರಗಿ, ಬೀದರ್‌ ಮತ್ತು ಬೆಂಗಳೂರಿನಲ್ಲಿ ಉಚಿತ ಐಎಎಸ್‌, ಐಪಿಎಸ್‌ ಕೋಚಿಂಗ್‌ ಸೆಂಟರ್‌ಗಳನ್ನು ಸ್ಥಾಪಿಸಬೇಕು ಎಂದು ಮನವಿ ಮಾಡಿದ್ದಾರೆ.

Contact Your\'s Advertisement; 9902492681

ರಾಜ್ಯದ ಅಲ್ಪಸಂಖ್ಯಾತರಿಗೆ ಕೆಎಂಡಿಸಿಯಿಂದ ನೀಡಲಾಗುವ ಅರಿವು ಯೋಜನೆ, ಶ್ರಮ ಶಕ್ತಿ,  ಟ್ಯಾಕ್ಸಿ ಆಯ್ಕೆ ಕೋಟಾ, ಗಂಗ ಕಲ್ಯಾಣ, ಸ್ವಯಂ ಉದ್ಯೋಗ ಸೇರಿದಂತೆ ನಿಗಮದಲ್ಲಿರುವ ಯೋಜನೆಗಳ ಫಲಾನುಭವಿಗಳ ಆಯ್ಕೆ ಮಿತಿಯನ್ನು ಹೆಚ್ಚಿಸಬೇಕು ಮತ್ತು ನೀಡಲಾಗುವ ಸಾಲಗಳ ಮೊತ್ತವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here