ಅಫಜಲಪುರ; ಕಲಬುರಗಿ ವಿಶ್ವವಿದ್ಯಾಲಯ ಹಾಗೂ ಶ್ರೀ ಮಹಾಂತೇಶ್ವರ ಪದವಿ ಮಹಾವಿದ್ಯಾಲಯ ಮಹಾಂತಪುರ ರಾಷ್ಟ್ರೀಯ ಸೇವಾ ಯೋಜನೆ ಘಟಕ ಯೂನಿಸೆಫ್ ಇವರ ಸಯುಕ್ತ ಆಶ್ರಯದಲ್ಲಿ ಗೊಬ್ಬುರ್ ಬಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ ದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಗೊಬ್ಬುರ್ ಬಿಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಬಳೆರೋಗ ನಿರೋಧಕ ಲಸಿಕಕರಣ, ಹಾಗೂ ಅಪೌಷ್ಟಿಕತೆ, ಅನಿಮಿಯ ಮುಕ್ತ ಕರ್ನಾಟಕ ಕುರಿತು ವಿಶೇಷ ಉಪನ್ಯಾಸ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರು ಪದವಿ ಪೂರ್ವ ಮಹಾವಿದ್ಯಾಲಯ ಯಂಕಪ್ಪ ಇಟಿಗಿ ವಹಿಸಿದ್ದರು. ಹಾಗೂ ನಿವೃತ್ತ ಪ್ರಾಚಾರ್ಯರು ಚಿನ್ಮಯಗಿರಿ ಶರಣಯ್ಯ ಸ್ವಾಮಿ ಹಿರೇಮಠ್ ವಹಿಸಿದ್ದರು.
ಅತಿಥಿಗಳಾಗಿ ಉಪನ್ಯಾಸಕ ವೃಂದದವರಾದ ಡಾ. ಅಶಾರಾಣಿ, ಡಾ. ಜಾಧವ್, ಆನಂದ್ , ರಾಜ ಸಾಬ್, ಕಾಮಣ್ಣ ಬಿರಾದರ್, ಈರಯ್ಯ ಮಠಪತಿ, ವೇದಿಕೆಯಲ್ಲಿದ್ದರು. ಕಾಲೇಜಿನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಹಾಗೂ ಇತರರು ಇದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಅಚ್ಚುಕಟ್ಟಾಗಿ ಮಾಹಾದೆವ ರವರು ನಿರ್ವಹಿಸಿದರು.