ಕಲಬುರಗಿ: ಶಾಲಾ ವಾಹನ ಹರಿದ 2 ವರ್ಷದ ಮಗು ಮೃತ್ಯು

0
155

ಕಲಬುರಗಿ; ಮನೆ ಮುಂದೆ ಆಟವಾಡುತ್ತಿದ್ದ ಮಗುವಿನ ಮೇಲೆ ಶಾಲಾ ವಾಹನ ಹರಿದು 2ವರ್ಷದ ಮಗು ಮೃತಪಟ್ಟಿರುವ ಘಟನೆ ನಗರದ ಸಂಗಮೇಶ್ವರ ಕಾಲೋನಿ ಬಳಿ ಬುಧವಾರ ನಡೆದಿದೆ.

ಮನೋಜ (2) ಮಗುವಿನ ಮೇಲೆ ಖಾಸಗಿ ಶಾಲೆಯ ವಾಹನ ಹರಿದ್ದು ತಕ್ಷಣ ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿದ್ದು, ಇದರಿಂದ ಉದ್ರಿಕ್ತಗೊಂಡ ಕೆಲವರು ವ್ಯಾನ್ ಮೇಲೆ ಕಲ್ಲು ತೂರಾಟ, ಗಾಜು ಪುಡಿ ಪುಡಿ ಮಾಡಿರುವ ಘಟನೆ ನಡೆದಿದೆ.
ನ್ಯಾಷಿನಲ್ ಪಬ್ಲಿಕ್ ಶಾಲೆಗೆ ಸೇರಿದ ವಾಹನ, ಶಾಲಾ ಮಕ್ಕಳಿಗೆ ಡ್ರಾಪ್ ಮಾಡಲು ಬಂದಾಗ ಘಟನೆ ಜರುಗಿದ್ದು, ಘಟನೆ ನಂತರ ವಾಹನ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.

Contact Your\'s Advertisement; 9902492681

ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸರ ಭೇಟಿ ಪರಿಶೀಲನೆ, ಶಾಲಾ ವಾಹನ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here