ಮೂಲಭೂತ ಸೌಕರ್ಯಕ್ಕಾಗಿ ಜನಧ್ವನಿ ಒತ್ತಾಯ

0
38

ವಾಡಿ: ಪಟ್ಟಣದ ವಿವಿಧೆಡೆ ಮೂತ್ರಾಲಯಗಳು ಮತ್ತು ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕು ಎಂದು ಜನಧ್ವನಿ ಜಾಗೃತ ಸಮಿತಿಯ ಮುಖಂಡರು ಆಗ್ರಹಿಸಿದ್ದಾರೆ.

ಗುರುವಾರ ಪಟ್ಟಣಕ್ಕೆ ಭೇಟಿ ನೀಡಿದ್ದ ಚಿತ್ತಾಪುರ ಗ್ರೇಡ್-2 ತಹಶೀಲ್ದಾರ ರಾಜಕುಮಾರ ಮರತೂರಕರ ಅವರ ಮೂಲಕ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದ ಜನಧ್ವನಿ ಕಾರ್ಯಕರ್ತರು, ನಗರದ ಜನತೆಗೆ ನಾಗರಿಕ ಸೌಲಭ್ಯಗಳನ್ನು ಒದಗಿಸದೆ ಸ್ಥಳೀಯ ಪುರಸಭೆ ಆಡಳಿತ ವಂಚಿಸಿದೆ ಎಂದು ಆಪಾದಿಸಿದರು. 23 ವಾರ್ಡ್‍ಗಳನ್ನು ಹೊಂದಿರುವ ಪಟ್ಟಣದಲ್ಲಿ ಸುಮಾರು ಐವತ್ತು ಸಾವಿರ ಜನಸಂಖ್ಯೆಯಿದೆ.

Contact Your\'s Advertisement; 9902492681

ಬೃಹತ್ ಸಿಮೆಂಟ್ ಕೈಗಾರಿಕೆ, ಜಂಕ್ಷನ್ ರೈಲು ನಿಲ್ದಾಣ, ಹತ್ತಾರು ಖಾಸಗಿ ಆಸ್ಪತ್ರೆಗಳು, 30ಕ್ಕೂ ಹೆಚ್ಚು ಶಾಲೆಗಳಿದ್ದು, ಸುತ್ತಲ ಮೂವತ್ತು ಗ್ರಾಮಗಳ ಜನರು ವಾಡಿ ಮಾರುಕಟ್ಟೆಯನ್ನೇ ಅವಲಂಬಿಸಿದ್ದಾರೆ. ವ್ಯಾಪಾರ ವಹಿವಾಟಿಗಾಗಿ ಬರುವ ಜನರಿಗೆ ಕನಿಷ್ಠ ಮೂತ್ರಾಲಯಗಳ ವ್ಯವಸ್ಥೆಯಿಲ್ಲ. ಸುಲಭ ಶೌಚಾಲಯಗಳ ಸೌಲಭ್ಯವೂ ಇಲ್ಲ. ಪರಿಣಾಮ ಮಹಿಳೆಯರು ಪರದಾಡುವಂತಾಗಿದೆ.

ಪುರಷರ ಪಾಲಿಗೆ ರಸ್ತೆ ಬದಿಯ ಗೋಡೆಗಳೇ ಮೂತ್ರಾಲಯಗಳಾಗಿ ಬಳಕೆಯಾಗುತ್ತಿವೆ. ಅಲ್ಲದೆ ವಿವಿಧ ಬಡಾವಣೆಗಳಿಗೆ ಕಲುಷಿತ ನೀರು ಪೂರೈಕೆಯಾಗುತ್ತಿದೆ. ನೀರು ಶುದ್ಧೀಕರಣ ಘಟಕವಿದ್ದರೂ ಪ್ರಯೋಜನವಿಲ್ಲ ಎಂದು ದೂರಿದ್ದಾರೆ.

ಮೂಲಭೂತ ಸೌರ್ಕಗಳಿಲ್ಲದೆ ನಗರ ಎಂಬುದು ನರಕವಾಗಿದೆ. ಪುರಸಭೆ ಆಡಳಿತ ಜನರಿಗೆ ಸೌಲಭ್ಯಗಳನ್ನು ಒದಗಿಸುವಲ್ಲಿ ಗಂಭೀರ ಚಿಂತನೆ ಮಾಡಿಲ್ಲ. ಕೂಡಲೇ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

ಜನಧ್ವನಿ ಜಾಗೃತ ಸಮಿತಿಯ ಅಧ್ಯಕ್ಷ ವೀರಭದ್ರಪ್ಪ ಆರ್.ಕೆ, ಉಪಾಧ್ಯಕ್ಷ ಸಿದ್ಧಯ್ಯಶಾಸ್ತ್ರೀ ನಂದೂರಮಠ, ಮುಖಂಡರಾದ ಮಹ್ಮದ್ ಯುಸೂಫ್‍ಸಾಬ ಕಮರವಾಡಿ, ಸಹ ಕಾರ್ಯದರ್ಶಿ ಶೇಖ ಅಲ್ಲಾಭಕ್ಷ, ಶರಣುಕುಮಾರ ದೋಶೆಟ್ಟಿ ನಿಯೋಗದಲ್ಲಿ ಇದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here