ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯ ವ್ಯಾಪ್ತಿಯ ನಿವೇಶನದ ಪಿಐಡಿ ಸಂಖ್ಯೆಯ ಹೆಸರನ್ನು ತಿದ್ದುಪಡಿ ಮಾಡಿ ನಿವೇಶನ ಕಬ್ಬಳಿಕೆ ಮಾಡಲು ಯತ್ನಿಸಿತ್ತಿರುವ ಬಗ್ಗೆ ಆರೋಪಿಸಿ ಕಲಬುರಗಿ ದಕ್ಷಿಣ ಮತಕ್ಷೇತ್ರದ ಜೆಡಿಎಸ್ ಮುಖಂಡ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಕಲಬುರಗಿ ದಕ್ಷಿಣ ಮತಕ್ಷೇತ್ರದ ಜೆಡಿಎಸ್ ಮುಖಂಡ ಕೃಷ್ಣಾ ರೆಡ್ಡಿ ಇವರ ಸಹೋದರ ಶ್ರೀಕಾಂತ್ ಮತ್ತು ಮಹಾನಗರ ಪಾಲಿಕೆಯ ನೌಕರಾದ ತಬರೇಜ್ ಖಾನ್ ವಿರುದ್ಧ ಕಲಬುರಗಿ ನಗರದ ಅಪರಾಧ ವಿಭಾಗದ ಸಿಇಎನ್ಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಶೇಕ್ ರೀಜಾ ಬಡಾವಣೆಯ 2400 ವಿಸ್ತೀರ್ಣ ಆಸ್ತಿಯ ಪಿಐಡಿಯ ಹೆಸರನ್ನು ಡಿಲಿಟ್ ಮಾಡಿದ್ದಾರೆ ಎಂದು ಆರೋಪಿಸಿ ಸೋಮಶೇಖರ್ ಟೆಂಗಳಿ ಎಂಬುವವರು ಪ್ರಕರಣ ದಾಖಲಿಸಿದ್ದಾರೆ.