ಸಮಾಲೋಚನ ಸಭೆ ಉದ್ಘಾಟನೆ

0
14

ಕಲಬುರಗಿ: ಕನ್ನಡ ಭವನದಲ್ಲಿ ನಡೆದ ಸ್ಲಂ ಜನಾಂದೋಲನ- ಕರ್ನಾಟಕ ಹಾಗೂ ಕಲ್ಬುರ್ಗಿ ಜಿಲ್ಲಾ ಕೊಳಗೇರಿ ನಿವಾಸಿಗಳ ಒಕ್ಕೂಟ ವತಿಯಿಂದ ಆಯೋಜಿಸಿದ ” “ಅಲೆಮಾರಿ ಸಮುದಾಯಗಳ ಸಂಘಟನೆ ಮತ್ತು ಅವರ ಮುಂದಿರುವ ಸವಾಲುಗಳ ಕುರಿತ” ಸಮಾಲೋಚನ ಸಭೆಯನ್ನು ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಂಪ್ರಭು ಪಾಟೀಲ್ ಅವರು ಉದ್ಘಾಟಿಸಿದರು.

ನಂತರ ಮಾತನಾಡಿ ಸಂವಿಧಾನವು ದೇಶದ ಕಟ್ಟ ಕಡೆ ವ್ಯಕ್ತಿಗೂ ಸಹ ಸಾಮಾಜಿಕ ನ್ಯಾಯವನ್ನು ಒದಗಿಸಿದೆ ಸರ್ಕಾರದಿಂದ ಸಿಗುವ ಎಲ್ಲಾ ಸವಲತ್ತು ಮತ್ತು ಅಧಿಕಾರಗಳು ಎಲ್ಲರಿಗೂ ಸಿಗಲೇಬೇಕು ಎಂದು ಹೇಳಿದೆ. ಪ್ರತಿಯೊಬ್ಬರು ಶಿಕ್ಷಣವನ್ನು ಕಲಿತು ಸಂವಿಧಾನವನ್ನು ಅರ್ಥ ಮಾಡಿಕೊಂಡು ಸಂಘಟಿತರಾಗಿ ತಮ್ಮ ಹಕ್ಕು ಮತ್ತು ಅಧಿಕಾರಗಳನ್ನು ಪಡೆಯುವುದರ ಜೊತೆಗೆ ಹಕ್ಕು ಮತ್ತು ಅಧಿಕಾರದಿಂದ ವಂಚಿತವಾದ ಸಮುದಾಯಗಳಿಗೆ ಅವರ ಹಕ್ಕು ಮತ್ತು ಅಧಿಕಾರಗಳನ್ನು ದೊರಕಿಸಿ ಕೊಡುವುದು ನಮ್ಮ ಕರ್ತವ್ಯವಾಗಬೇಕು ಎಂದು ಹೇಳುತ್ತಾ ದೇಶದ ಪ್ರತಿಯೊಂದು ಸಮಸ್ಯೆಗೂ ಸಹ ಸವಿಧಾನ ಪರಿಹಾರ ಒದಗಿಸಿದೆ ಎಂದು ಹೇಳಿದರು.

Contact Your\'s Advertisement; 9902492681

ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ನೀಲಕಂಠ ರಾವ್ ಮೂಲೆಗೆ. ಗೀತಾ ಮುದುಗಲ್ ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಸಂಚಾಲಕರಾದ ಅಲ್ಲಂಪ್ರಭು ನಿಂಬರ್ಗಾ ಅಲೆಮಾರಿ ಸಮುದಾಯದ ಮುಖಂಡರಾದ ದೇವೇಂದ್ರಪ್ಪ ಕೋಮರಿ. ಯಲಪ್ಪ. ಸನ್ಮಂಡಲು ಹುಸನಪ್ಪ ಮೋತೆ. ಸಾಯಪ್ಪ ಸನ್ಮಂಡಲು ಮರಲಿಂಗ ಕೋಮಾರಿ ವಿಕಾಸ ಸವಾರಿಕರ್ ಬ್ರಹ್ಮಾನಂದ ಮಿಂಚ ಯಮನಪ್ಪ ಪ್ರಸಾದ್ ಮುಂತಾದವರು ವೇದಿಕೆ ಮೇಲೆ ಇದ್ದರು ಈ ಸಂದರ್ಭದಲ್ಲಿ ಅಲೆಮಾರಿ ಸಮುದಾಯದ ಸುಮಾರು 200ಕ್ಕೂ ಹೆಚ್ಚು ಜನ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here