ಬೀದರ; ಜಿಲ್ಲಾ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಕೆ.ಎಸ್.ಬಂಧು ಸಿದ್ದೇಶ್ವರಗೆ ಅಧಿಕೃತ ಆಹ್ವಾನ

0
23

ಕಲಬುರಗಿ; ಶ್ರೀ ಯಲ್ಲಾಲಿಂಗೇಶ್ವರ ಟ್ರಸ್ಟ್ ಆನಂದಾಶ್ರಮ,ಸಸ್ತಾಪೂರ ಮತ್ತು ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತು ಬೀದರ ಸಂಯುಕ್ತಾಶ್ರಯದಲ್ಲಿ ಪೂಜ್ಯ ಲಿಂ.ಸದ್ಗುರು ಯಲ್ಲಾಲಿಂಗೇಶ್ವರ 34 ನೇ ಪುಣ್ಯ ಸ್ಮರಣೋತ್ಸವ ಮತ್ತು ಪೂಜ್ಯ ಮಹಾದೇವಿ ತಾಯಿಶರಣೆ ಯವರ 59 ನೇ ಹುಟ್ಟು ಹಬ್ಬದ ಪ್ರಯುಕ್ತ ಬೀದರ ಜಿಲ್ಲಾ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಡಾ.ಕೆ.ಎಸ್.ಬಂಧು ಸಿದ್ದೇಶ್ವರ ಮತ್ತು ಅವರಪತ್ನಿ ಶ್ರೀಮತಿ ಮಹಾದೇವಿ.ಕೆ.ಬಂಧು ದಂಪತಿಗಳಿಗೆ ನಗರದ ಅವರ ನಿವಾಸದಲ್ಲಿ ದಂಪತಿಗಳಿಗೆ ಅದ್ದೂರಿಯಾಗಿ ಸನ್ಮಾನಿಸಿ ಸಮ್ಮೇಳನಕ್ಕೆ ಅಧಿಕೃತ ಅಹ್ವಾನ ಪತ್ರಿಕೆ ನೀಡಿ ಆಹ್ವಾನಿಸಲಾಯಿತು.

06 ಮತ್ತು 07 ವರೆಗೆ ಶ್ರೀ ಯಲ್ಲಾಲಿಂಗೇಶ್ವರ ಮಠ ಸಸ್ತಾಪೂರ ತಾ.ಬಸವಕಲ್ಯಾಣ ಜಿ.ಬೀದರದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸಂತಸ ಸಡಗರದಿಂದ ಆಹ್ವಾನಿಸಲಾಯಿತು.

Contact Your\'s Advertisement; 9902492681

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಮ್ಮೇಳನಾಧ್ಯಕ್ಷರಾದ ಡಾ.ಕೆ.ಎಸ್.ಬಂಧು ಸಿದ್ದೇಶ್ವರ ಅವರು ಸಾಹಿತ್ಯ ಸಮ್ಮೇಳನದಲ್ಲಿ ದಲಿತ ಸಾಹಿತ್ಯ ಬದುಕು ಬರಹ ,ಕವಿಗೋಷ್ಠಿ,ದಲಿತ ಜಾನಪದ ಸಂಸ್ಕೃತಿ ಗೋಷ್ಠಿ,ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನವಿದೆ ಹಾಗಾಗಿ ತಾವು ಬನ್ನಿ ತಮ್ಮವರನ್ನು ಕರೆ ತಂದು ಸಮ್ಮೇಳನವನ್ನು ಯಶಸ್ವಿಗೊಳಿಸಿ ಎಂದರು.

ಕಾರ್ಯಕ್ರಮದಲ್ಲಿ ಮಠದ ಪೂಜ್ಯರಾದ ಗೌಡಪ್ಪಗೋಳ,ಡಾ.ಡೋಳೆ,ಡಾ‌.ಅಮೃತರಾವ್ ಬಾಳವಾಲೆ,ಲಿಂಗಪ್ಪ ಟಿಂಗಳಿ,ಮನೋಹರ ಮರಗುತ್ತಿ,ಸಿದ್ದರಾಮ ಸರಸಂಬಿ,ಅಂಬರಾಯ,ಡಾ.ಅವಿನಾಶ,ಶ್ರೀಮತಿ ಶಶಿಕಲಾ ಲಕ್ಷ್ಮಣರಾವ ಸೊಲ್ಲಾಪುರ, ಮಕ್ಕಳ ಕವಿ ಹಿರಿಯ ಸಾಹಿತಿ ಎ.ಕೆ.ರಾಮೇಶ್ವರ,ಕರ್ನಾಟಕಜಾನಪದ ಪರಿಷತ್ತು ಕಲಬುರಗಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡಿ.ಪಿ.ಸಜ್ಜನ,ಬಾನುಕುಮಾರ ಗೀರೆಗೋಳ,ನಿಂಗಣ್ಷ ಉದನೂರ ಮುಂತಾದವರು ಉಪಸ್ಥಿತರಿದ್ದರು ಸಂಯೋಜಕರು ಮತ್ತು ಸಾಹಿತಿಗಳಾದ ಡಾ.ಗವಿಸಿದ್ದಪ್ಪ ಎಚ್ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು, ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷರಾದ ಸಿ.ಎಸ್.ಮಾಲೀಪಾಟೀಲ ವಂದಿಸಿದರು,ದಲಿತ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷರಾದ ಡಾ.ಪೀರಪ್ಪ ಬಿ ಸಜ್ಜನ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here