ಸುರಪುರ: ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ಎಸ್.ಸಿ,ಎಸ್ಟಿ ಮಕ್ಕಳು ಸೂಕ್ಷ್ಮ ಅವಮಾನ ಅನುಭವಿಸುತ್ತಾರೆ,ಅದನ್ನು ನಿಭಾಯಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಬಲಭೀಮ ದೇಸಾಯಿ ದೇವರಗೋನಾಲ ಮಾತನಾಡಿದರು.
ನಗರದ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿ,ನಾನು ಶಿಕ್ಷಣ ಕ್ಷೇತ್ರ ದಿಂದ ಬಂದಿರುವುದರಿಂದ ಅಲ್ಲಿ ನಡೆಯುವ ಅವಮಾನಗಳನ್ನು ದೂರಗೊಳಿಸಲು ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.ಅಲ್ಲದೆ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳು ಓದಲು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಪುಸ್ತಕಗಳಿಲ್ಲ ಹಾಗೂ ವಿದ್ಯಾರ್ಥಿಗಳು ಓದಿಗೆ ಅಗತ್ಯವಿರುವ ಪುಸ್ತಗಳನ್ನು ದೊರೆಯಬೇಕಿದೆ,ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಎಸ್.ಸಿ,ಎಸ್ಟಿ ದೌರ್ಜನ್ಯ ತಡೆ ಸಮಿತಿಯ ನಾಮನಿರ್ದೇಶಿತ ಸದಸ್ಯರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ತಹಸೀಲ್ದಾರ ಕೆ.ವಿಜಯಕುಮಾರ ಸೇರಿದಂತೆ ಸಭೆಯಲ್ಲಿ ಭಾಗವಹಿಸಿರುವ ಎಲ್ಲರು ಬಲಭೀಮ ದೇಸಾಯಿ ಅವರನ್ನು ಅಭಿನಂದಿಸಿದರು.