ಕಲಬುರಗಿ; ಕೌಶಲ್ಯಾಭಿವೃದ್ದಿ ಸ್ಥಾಪಿಸುವಂತೆ ಸಚಿವ ಶರಣಪ್ರಕಾಶ ಪಾಟೀಲಗೆ ಮನವಿ

0
11

ಕಲಬುರಗಿ: ದೇಶಕ್ಕೆ ಸ್ವಾತಂತ್ರ ಬಂದು 75 ವರ್ಷ ಕಳೆದರು ನಮ್ಮ ಕಲಬುರಗಿ ವಿಭಾಗದ ಬಡತನ, ವಲಸೆ ಮತ್ತು ನಿರುದ್ಯೋಗ ಸಮಸ್ಯೆಗಳು ನಿವಾರಣೆಯಾಗಿಲ್ಲ. ರಾಜ್ಯದಇತರೆ ವಿಭಾಗಗಳಿಗೆ ಹೋಲಿಸಿದರೆ ಕಲಬುರಗಿ ವಿಭಾಗದ ತಲಾಆದಾಯ, ನಿರುದ್ಯೋಗ ಪ್ರಮಾಣ, ವಲಸೆಯ ಪ್ರಮಾಣ ಮತ್ತುಜನರು ಬಡತನರೇಖೆಗಿಂತ ಕೆಳಗಿರುವವರ ಪ್ರಮಾಣವು ಅಧಿಕವಾಗಿದೆ. ಎಂದು ಕಲ್ಯಾಣ ನಾಡು ವಿಕಾಸ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಮುತ್ತಣ್ಣ ಎಸ್. ನಡಗೇರಿ ಅವರು ಸಚಿವ ಶರಣಪ್ರಕಾಶ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

ನಮ್ಮ ಭಾಗದಯುವಕರಿಗೆ ಕೌಶಲ್ಯದಕೊರತೆಯಿಂದ ನಿರುದ್ಯೋಗ ಪ್ರಮಾಣವು ದಿನೇ ದಿನೇ ಹೆಚ್ಚಾಗುತ್ತಿದೆ.ಬಡತನ, ವಲಸೆ ಮತ್ತು ನಿರುದ್ಯೋಗ ಸಮಸ್ಯೆಯನ್ನು ನಿಯಂತ್ರಿಸಲು ಕಲಬುರಗಿಯಲ್ಲಿ ಪ್ರಸ್ತುತ ಸಾಲಿನ ಆಯವ್ಯಯದಲ್ಲಿಕೌಶಲ್ಯಾಭಿವೃದ್ದಿ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಬಗ್ಗೆ ಘೋಷಣೆಯನ್ನು ಮಾಡಬೇಕು.

Contact Your\'s Advertisement; 9902492681

ನಮ್ಮ ಭಾಗದಯುವ ಸಮುದಾಯದಉಜ್ವಲ ಭವಿಷ್ಯ ನಿರ್ಮಾಣ ಮತ್ತು ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ತಾವುಗಳು ದೇಶದಲ್ಲಿಅತಿ ಹಿಂದುಳಿದ ವಿಭಾಗ ಕಲಬುರಗಿಯಲ್ಲಿಕರ್ನಾಟಕ ಸರ್ಕಾರದ ವತಿಯಿಂದಕೌಶಲ್ಯಾಭಿವೃದ್ದಿ ವಿಶ್ವವಿದ್ಯಾಲಯ ಸ್ಥಾಪಿಸಿದರೆ, ನಮ್ಮ ಭಾಗದಯುವಕರುಕೌಶಲ್ಯತರಬೇತಿ ಪಡೆದುಉದ್ಯೋಗ ಪಡೆಯುವಜೊತೆಗೆ ಉದ್ಯಮಿಗಳು ಆಗುತ್ತಾರೆ.

ತಮ್ಮಕೌಶಲ್ಯಾಭಿವೃದ್ದಿಇಲಾಖೆಯ ವ್ಯಾಪ್ತಿಯಲ್ಲಿ ಬರುವುದರಿಂದ ತಾವುಗಳು ಮುತುವರ್ಜಿ ವಹಿಸಿ ಕೌಶಲ್ಯಾಭಿವೃದ್ದಿ ವಿಶ್ವವಿದ್ಯಾಲಯ ಕಲಬುರಗಿಯಲ್ಲಿ ಸ್ಥಾಪಿಸುವಂತೆ ಕ್ರಮಕೈಗೊಳ್ಳಬೇಕೆಂದು ಸಮಸ್ತ ಕಲ್ಯಾಣಕರ್ನಾಟಕದಜನತೆಯ ಪರವಾಗಿ “ಕಲ್ಯಾಣ ನಾಡು ವಿಕಾಸ ವೇದಿಕೆ”ಯ ವತಿಯಿಂದತಮ್ಮಲ್ಲಿ ವಿನಂತಿಪೂರ್ವಕವಾಗಿ ಕೇಳಿಕೊಳ್ಳುತ್ತೇವೆ.

ಈ ಸಂದರ್ಭದಲ್ಲಿ ಮೋಹನಸಾಗರ, ಸೂರ್ಯಪ್ರಕಾಶ ಚಾಳಿ, ಅರುಣಇನಾಂದಾರ, ರಾಣೇಶ ಸಾವಳಗಿ, ಮಡಿವಾಳಪ್ಪ ಕಟ್ಟಿಮನಿ ಹಾಗೂ ಇತರರುಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here