ಕೇಂದ್ರ ಸರಕಾರದ ವಿರುದ್ಧ ಅಂಗನವಾಡಿ ನೌಕರರ ಸಂಘ ಪ್ರತಿಭಟನೆ

0
13

ಸುರಪುರ: ಕೇಂದ್ರ ಸರಕಾರ ಮೊನ್ನೆ ನಡೆದ ಬಜೆಟ್ ಮಂಡನೆಯಲ್ಲಿ ಅಂಗನವಾಡಿ ನೌಕರರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ತಾಲೂಕು ಅಂಗನವಾಡಿ ನೌಕರರ ಸಂಘ ದಿಂದ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಅನೇಕ ಜನ ಅಂಗನವಾಡಿ ನೌಕರರು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ನಂತರ ಕೇಂದ್ರ ಸರಕಾರದ ವಿರುದ್ಧ ಬರೆದ ಭಿತ್ತಿ ಪತ್ರಗಳನ್ನು ಸುಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ಕೇಂದ್ರ ಸರಕಾರ ದೇಶದಲ್ಲಿರುವ ಅಂಗನವಾಡಿ ನೌಕರರ ಯಾವ ಬೇಡಿಕೆಯನ್ನು ಈಡೇರಿಸುತ್ತಿಲ್ಲ,ಸಬ್ ಕಾ ಸಾಥ್,ಸಬ್ ಕಾ ವಿಕಾಸ್ ಎನ್ನುವುದು ಕೇವಲ ಬಾಯಿ ಮಾತಿಗೆ ಸೀಮಿತವಾಗಿದೆ,ಆದರೆ ಅಂಗನವಾಡಿ ನೌಕರರ ವಿಷಯದಲ್ಲಿ ಕೇಂದ್ರ ಸರಕಾರ ತುಂಬಾ ನಿರ್ಲಕ್ಷ್ಯ ತೋರುತ್ತಿದೆ ಎಂದರು,ಅಂಗನವಾಡಿ ನೌಕರರ ಅನುದಾನವನ್ನು ಕಡಿತ ಮಾಡಲಾಗಿದೆ,ಅಂಗನವಾಡಿ ಕಾರ್ಯಕರ್ತೆಯರ,ಸಹಾಯಕಿಯರ ವೇತನ ಸರಿಯಾದ ಸಮಯಕ್ಕೆ ಆಗುತ್ತಿಲ್ಲ,ಬಾಡಿಗೆ ಕಡಿತಗೊಳಿಸುವ,ಪೌಷ್ಠಿಕ ಆಹಾರಕ್ಕಾಗಿ ಹಣ ಬಿಡುಗಡೆ ಕಾಲಾನು ಕಾಲಕ್ಕೆ ಬಿಡುಗಡೆ ಮಾಡುತ್ತಿಲ್ಲ,ಬಜೆಟ್‍ನಲ್ಲಿ ಅನುದಾನ ಕಡಿತಗೊಳಿಸಿದ್ದರಿಂದ 2 ಕೋಟಿ ತಾಯಂದಿರ,8 ಕೋಟಿ ಮಕ್ಕಳ ಆರೋಗ್ಯ ಕಾಪಾಡಲು ಸಾಧ್ಯವೆ ಎಂದು ಬೇಸರ ವ್ಯಕ್ತಪಡಿಸಿದರು.ಕಳೆದ 5 ವರ್ಷಗಳಲ್ಲಿ ನಮ್ಮ ವೇತನ ಹೆಚ್ಚಳ ಮಾಡಿಲ್ಲ ಇದರಿಂದ ಸಬ್ ಕಾ ವಿಕಾಸ್ ಹೇಗೆ ಸಾಧ್ಯ ಎಂದರು.ಸರಕಾರ ಧೋರಣೆ ಖಂಡಿಸಿ ಇದೆ 16ನೇ ತಾರಿಖು ದೇಶಾದ್ಯಂತ ಅಂಗನವಾಡಿ ನೌಕರರು ಉಗ್ರ ಪ್ರತಿಭಟನೆ ನಡೆಸಲಿದ್ದೇವೆ ಎಂದರು.

ಪ್ರತಿಭಟನೆಯಲ್ಲಿ ಸಂಘದ ತಾಲೂಕು ಅಧ್ಯಕ್ಷೆ ಬಸ್ಸಮ್ಮ ಬಿರಾದಾರ,ಸಹ ಕಾರ್ಯದರ್ಶಿ ರಾಧಾಬಾಯಿ ಲಕ್ಷ್ಮೀಪುರ,ಖಜಾಂಚಿ ನಸೀಮಾ ಮುದನೂರ,ಸೂಗಮ್ಮ ದೀವಳಗುಡ್ಡ,ಸಂಗಮ್ಮ ತಳವಾರಗೇರ,ಸಿದ್ದಮ್ಮ ಹೆಮನೂರ,ಲಕ್ಷ್ಮೀ ವಡ್ಡರಕಾಲೋನಿ,ಗುರುದೇವಿ ಹೆಬ್ಬಾಳ,ಮಂಜುಳಾ ಸಂತ್ರಸವಾಡಿ,ಪರವಿನ ಶರ್ಕಿಮೊಹಲ್ಲಾ,ಶೇಖಮ್ಮ ಚಿಂಚೋಳಿ,ಚಂದ್ರಕಲಾ ಎಸ್.ಕೆ,ಶರಣಬಸವ ಅನಸೂರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here