ಲಿಂ. ಪೂಜ್ಯ ದೊಡ್ಡಪ್ಪ ಅಪ್ಪ ಅವರು ಸತ್ಪುರುಷರು: ನೀಲಮ್ಮ ತಾಯಿ ವಿ.ನಿಷ್ಠಿ 

0
48

ಕಲಬುರಗಿ : ಪೂಜ್ಯ ಲಿಂ.ದೊಡ್ಡಪ್ಪ ಅಪ್ಪ ಅವರು ಮಹಾದಾಸೋಹಿ ಶರಣಬಸವೇಶ್ವರರಂತೆ ಸತ್ಪುರುಷರಾಗಿದ್ದರು ಎಂದು ಅವರ ಮಗಳಾದ ಪೂಜ್ಯ ಮಾತೋಶ್ರೀ ನೀಲಮ್ಮ ತಾಯಿ ವಿ.ನಿಷ್ಠಿ ಅವರು ಹೇಳಿದರು.

ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೂಜ್ಯ ದೊಡ್ಡಪ್ಪ ಅಪ್ಪ ಅವರ ೩೬ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ತ್ರಿಕಾಲ ಪೂಜಾ ನಿಷ್ಠರಾಗಿದ್ದ ಪೂಜ್ಯ ದೊಡ್ಡಪ್ಪ ಅಪ್ಪ ಅವರು ಕೃಷಿ ಕಾಯಕ ಮಾಡುತ್ತ, ಹಸಿದು ಬಂದವರಿಗೆ ಅನ್ನ ಹಾಕಿದ ಮಹಾದೈವಿಪುರುಷರಾಗಿದ್ದರು. ಅವರೊಂದಿಗೆ ಕಳೆದ ಕೆಲ ನೆನಪುಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

Contact Your\'s Advertisement; 9902492681

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರು ಮಾತನಾಡಿ, ೧೯೧೮ರಲ್ಲಿಯೇ ಗ್ರಂಥಾಲಯವನ್ನು ಆರಂಭಿಸಿ ಮಹಿಳೆಯರ ಶಿಕ್ಷಣಕ್ಕೆ ಒತ್ತು ನೀಡಿದರು. ಅದಕ್ಕಾಗಿ ಕ್ರಿ.ಶ. ೧೯೩೪ ರಲ್ಲಿ ಪ್ರಪ್ರಥಮವಾಗಿ ಹೆಣ್ಣು ಮಕ್ಕಳ ಕನ್ನಡ ಶಾಲೆಯನ್ನು ತೆರೆದರು. ಟಾಂಗಾ-ಡಮಣಿಗಳನ್ನು ಕಳುಹಿಸಿಕೊಟ್ಟು ವಿದ್ಯಾರ್ಥಿನಿಯರನ್ನು ಕರೆ ತರುವ ವ್ಯವಸ್ಥೆ ಮಾಡಿ ಅವರಿಗೆಲ್ಲ ಉಚಿತ ಶಿಕ್ಷಣ ನೀಡಿದರು. ಅವರು ಹಾಕಿದ ಶಿಕ್ಷಣದ ಬೀಜ ಇಂದು ಹೆಮ್ಮರವಾಗಿ ವಿಶ್ವವಿದ್ಯಾಲಯದ ಮಟ್ಟಿಗೆ ಬೆಳೆಯಿಸಿದವರು ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರು. ಪೂಜ್ಯ ದೊಡ್ಡಪ್ಪ ಅಪ್ಪ ಅವರು ೮೦ ವರ್ಷಗಳ ಕಾಲ ದೀರ್ಘಾವಧಿಯ ಏಳನೇ ಪೀಠಾಧಿಪತಿಗಳಾಗಿ ಅರ್ಚನ-ಅರ್ಪಣ-ಅನುಭಾವ ತಪಸ್ಸುಗೈದುದು ಮಹತ್ವದ ಸಂಗತಿಯಾಗಿದೆ ಎಂದರು.

ಮುಖ್ಯ ಅತಿಥಿಗಳಾದ ಖ್ಯಾತ ವಕೀಲರಾದ ಶರಣಬಸಪ್ಪ ವಿ.ನಿಷ್ಠಿ ಅವರು ಮಾತನಾಡಿ, ಪೂಜ್ಯ ದೊಡ್ಡಪ್ಪ ಅಪ್ಪ ಅವರು ದಾಸೋಹದ ಜತೆಗೆ ಶಿಕ್ಷಣಕ್ಕೆ ಒತ್ತು ನೀಡಿದರು. ಅದರಲ್ಲೂ ಮಹಿಳಾ ಶಿಕ್ಷಣಕ್ಕೆ ಆದ್ಯತೆ ನೀಡಿದವರು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿ, ಪೂಜ್ಯ ದೊಡ್ಡಪ್ಪ ಅಪ್ಪ ಅವರು ಅಂದು ಮಹಿಳೆಯರಿಗಾಗಿ ಶಾಲಾ ಕಾಲೇಜುಗಳು ಆರಂಭಿಸದಿದ್ದರೆ ಇಂದು ಈ ಭಾಗದ ಮಹಿಳೆಯರು ಶೈಕ್ಷಣಿಕವಾಗಿ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಅದರಂತೆ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜೀಯವರು ಮಹಿಳೆಯರಿಗಾಗಿ ಅನೇಕ ಶಾಲಾ ಕಾಲೇಜುಗಳನ್ನು ಆರಂಭಿಸಿ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡುತ್ತಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಇನ್ನೊರ್ವ ಮುಖ್ಯ ಅತಿಥಿಗಳಾದ ನಿವೃತ್ತ ಪ್ರಾಧ್ಯಾಪಕಿ ಡಾ.ಶಶಿಕಲಾ ಮೋಳ್ದಿ ಅವರು ಮಾತನಾಡಿದರು. ನಿವೃತ್ತ ಪ್ರಾಧ್ಯಾಪಕರು ಮತ್ತು ಸಾಹಿತಿಗಳಾದ ಡಾ.ಶಕುಂತಲಾ ದುರ್ಗಿ ಅವರು ದೊಡ್ಡಪ್ಪ ಅಪ್ಪ ಅವರ ಕುರಿತು ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಕಲ್ಯಾಣ ಅಧಿಕಾರಿ ಡಾ. ಶಾಂತಲಾ ನಿಷ್ಠಿ ಅವರನ್ನು ಸನ್ಮಾನಿಸಲಾಯಿತು. ಪ್ರೊ. ಸಾವಿತ್ರಿ ಜಂಬಲದಿನ್ನಿ, ಡಾ. ಇಂದಿರಾ ಶೇಟಕಾರ, ಡಾ.ಸಿದ್ದಮ್ಮ ಗುಡೇದ್, ಡಾ.ಎನ್.ಎಸ್.ಹೂಗಾರ, ಪ್ರೊ.ರೇವಯ್ಯ ವಸ್ತ್ರದಮಠ, ಡಾ. ಪುಟ್ಟಮಣಿ ದೇವಿದಾಸ, ಡಾ.ಸಿದ್ಧಲಿಂಗರೆಡ್ಡಿ, ಡಾ.ಸಂಗೀತಾ, ಕೃಪಾಸಾಗರ ಗೊಬ್ಬುರ, ಈರಣ್ಣ ಸ್ವಾದಿ, ಸಿದ್ದು ಪಾಟೀಲ, ಶ್ರೀಮತಿ ಅನಿತಾ ಗೊಬ್ಬುರ, ಶ್ರೀಮತಿ ದೀಶಾ ಮೆಹತಾ, ಶ್ರೀಮತಿ ಪದ್ಮಜ ಹೆಚ್. ಶ್ರೀಮತಿ ಗೌರಮ್ಮ ಹಿರೇಮಠ, ಶ್ರೀಮತಿ ವಿದ್ಯಾ ರೇಶ್ಮಿ, ಶ್ರೀಮತಿ ಅನುಸೂಯ ಬಡಿಗೇರ, ವಿನೋದ ಹಲಕಟ್ಟಿ, ಅಶೋಕ ಮೂಲಗೆ, ಅಪ್ಪಾಸಾಬ ಬಿರಾದಾರ, ಪರುತಯ್ಯ ಹಿರೇಮಠ, ಶ್ರೀಮತಿ ಶಶಿಕಲಾ ಪಾರಾ, ಶ್ರೀಮತಿ ಪ್ರಭಾವತಿ ಹೆಚ್. ಮತ್ತು ಮಹಾವಿದ್ಯಾಲಯದ ಎಲ್ಲಾ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ವಿದ್ಯಾರ್ಥಿ ಸಂಘದ ಸಲಹೆಗಾರರಾದ ಪ್ರೊ. ಜಾನಕಿ ಹೊಸೂರ ಸ್ವಾಗತ ಮತ್ತು ವಂದನಾರ್ಪಣೆಗೈದರು. ವಿದ್ಯಾರ್ಥಿ ಸಂಘದ ಸಹ ಸಲಹೆಗಾರರಾದ ಡಾ.ಸೀಮಾ ಪಾಟೀಲ ನಿರೂಪಿಸಿದರು. ಪ್ರೊ. ರೇವಯ್ಯ ವಸ್ತ್ರದಮಠ ಮತ್ತು ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here