ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದ ಸ್ನಾತಕೋತ್ತರ ಚಿತ್ರಕಲಾ ವಿಭಾಗದ ಸಹಾಯಕ ಪ್ರಾಧ್ಯಾಪಕರು ಹಾಗೂ ಸಂಯೋಜಕರಾದ ಪ್ರೊ. ನಿಜಲಿಂಗ ಮುಗಳಿ ಅವರು ಇಂಪ್ರೇಸಿವ್ ಕ್ವೀಲಿಂಗ್ ಪೇಪರ್ ಸ್ಟ್ರಿಪ್ ಡ್ರಾಯಿಂಗ್ ವಿಷಯವನ್ನು ಇಟ್ಟುಕೊಂಡು 2ಡಿ ಪರ್ಸ್‌ಪೆಕ್ಟಿವ್ ಡಾಯಿಂಗನ್ನು 132 ಸೆ.ಮಿ ಉದ್ದ ಕ್ವಿಲಿಂಗ್ ಪೇಪರ್ ಮೇಲೆ ಕೇವಲ 28 ನಿಮಿಷ 67ಸೆಕೆಂಡಿನಲ್ಲಿ ಮಾಡಿ ಇಂಡಿಯಾ ಬುಕ್ಕ ಆಫ್ ರೆಕಾರ್ಡನಲ್ಲಿ ತಮ್ಮ ಹೆಸರು ಗಿಟ್ಟಿಸಿಕೊಂಡಿದ್ದಾರೆ.
ಇವರ ಸಾಧನೆಗೆ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಪೂಜ್ಯ. ಡಾ. ಶರಣಬಸವಪ್ಪ ಅಪ್ಪಾ ಅವರು ಹಾಗೂ ಮಾತೋಶ್ರೀ. ದಾಕ್ಷಾಯಿಣಿ ತಾಯಿ ಅವರು ಇವರ ಸಾಧನೆಗೆ ಮೆಚ್ಚುಗೆ ವ್ಯಕ್ತ ಪಡಿಸಿ ಆಶಿರ್ವದಿಸಿದರು.
ಶರಣಬಸವ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ನಿರಂಜನ್ ನಿಷ್ಠಿ , ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾಂiiದರ್ಶಿಗಳಾದ ಬಸವರಾಜ ದೇಶಮುಖ, ಶರಣಬಸವ ವಿಶ್ವವಿದ್ಯಾಲಯ ಸಹ ಕುಲಪತಿಗಳಾದ ಡಾ. ವಿ.ಡಿ. ಮೈತ್ರಿ, ಕುಲಸಚಿವರಾದ ಡಾ. ಅನಿಲಕುಮಾರ ಬಿಡವೆ, ಇವರ ಸಾಧನೆಗೆ ಅಭಿನಂದಿಸಿದರು.