ರಾಹುಲ್ ಹತ್ತರಗಿ ನೇಮಕ

0
11

ಕಲಬುರಗಿ: ಕರ್ನಾಟಕ ಪ್ರದೇಶ ಕಾಂಗ್ರೇಸ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಆರ್. ಧರ್ಮಸೇನಾ, ಜಿಲ್ಲಾ ಕಾಂಗ್ರೇಸ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ ಕಾಳಗಿ, ಅವರ ಆದೇಶದ ಮೇರೆಗೆ ಕಲಬುರಗಿ ದಕ್ಷಿಣ ಮತಕ್ಷೇತ್ರ ಶಾಸಕ ಅಲ್ಲಮಪ್ರಭು ಪಾಟೀಲ್, ಬ್ಲಾಕ ಕಾಂಗ್ರೇಸ ಸಮಿತಿ, ಪರಿಶಿಷ್ಟ ಜಾತಿ ನಗರ ಘಟಕ ಅಧ್ಯಕ್ಷ ದೇವಿಂದ್ರಕುಮಾರ ನಡುವಿನಮನಿ ಅವರ ಸಿಫಾರಸ್ಸಿನಂತೆ ಕಲಬುರಗಿ ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ ಬರುವ ದಕ್ಷಿಣ ನಗರ ಬ್ಲಾಕ ಕಾಂಗ್ರೇಸ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಸಂಚಾಲಕರನ್ನಾಗಿ ರಾಹುಲ್ ಹತ್ತರಗಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ತಾವುಗಳು ಕಾಂಗ್ರೇಸ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಹಿನ್ನಲೆಯಲ್ಲಿ ತಮ್ಮ ಸೇವೆಯನ್ನು ಕಲಬುರಗಿ ದಕ್ಷಿಣ ಕ್ಷೇತ್ರದ ಪರಿಶಿಷ್ಟ ಜಾತಿ ಸಮುದಾಯದ ಸಂಘಟನೆ ಹಾಗೂ ಕಾಂಗ್ರೇಸ ಪಕ್ಷದ ಪ್ರಗತಿಪರ ಕಾರ್ಯಕ್ರಮಗಳನ್ನು ಜನತೆಗೆ ಮುಟ್ಟಿಸಿ ಕಾಂಗ್ರೇಸ ಪಕ್ಷವನ್ನು ಸಧೃಢಗೊಳಿಸಲು ಹಗಲಿರುಳು ಶ್ರಮ ವಹಿಸುತ್ತಿರೆಂದು ನಂಬಿ ಕಾಂಗ್ರೇಸ ಪಕ್ಷದ ಈ ಮಹತ್ವದ ಜವಾಬ್ದಾರಿಯನ್ನು ತಮಗೆ ವಹಿಸಲಾಗಿದೆ.

Contact Your\'s Advertisement; 9902492681

ಈ ಜವಾಬ್ದಾರಿಯನ್ನು ಹೊತ್ತಿಕೊಂಡು ಕಾಂಗ್ರೇಸ ಪಕ್ಷದ ಈ ಮಹತ್ವದ ಜವಾಬ್ದಾರಿಯನ್ನು ವಹಿಸಲಾಗಿದೆ. ತಾವುಗಳು ಈ ಜವಾಬ್ದಾರಿಯನ್ನು ಹೊತ್ತಿಕೊಂಡು ಕಾಂಗ್ರೇಸ ಪಕ್ಷದ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರ ಸಹಯೋಗದಲ್ಲಿ ಬೆರೆತು ಈ ಪಕ್ಷವನ್ನು ಗಟಿಗೋಳಿಸಬೇಕೆಂದು ಜಿಲ್ಲಾ ಕಾಂಗ್ರೇಸ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಮಹಾಂತಪ್ಪ ಕೆ. ಸಂಗಾವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.0

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here