ಬೆನ್ನು ಮೂಳೆ, ಜಂಟಿ ಶಸ್ತ್ರಚಿಕಿತ್ಸೆ, ನೋವು ಉಪಶಮನ ಆರೈಕೆ ಕುರಿತು ಜನ ಸ್ಪಂದನ ಕಾರ್ಯಕ್ರಮ

0
115

ಕಲಬುರಗಿ; ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕೇಂದ್ರ ತರಬೇತಿ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರ್.ಸಿ.ಎಚ್ ವಿಭಾಗ ಹಾಗೂ ಭಗವಾನ್ ಮಹಾವೀರ ಜೈನ್ ಹಾಸ್ಪಿಟಲ್ ಬೆಂಗಳೂರು ಅವರ ಸಂಯುಕ್ತಶ್ರಾಯದಲ್ಲಿ ಬೆನ್ನು ಮೂಳೆಯ ಮತ್ತು ಜಂಟಿ ಶಸ್ತ್ರಚಿಕಿತ್ಸೆ ನೋವು ಮತ್ತು ಉಪಶಮನ ಆರೈಕೆ ಇಲಾಖೆ ಕುರಿತು ಜನ ಸ್ಪಂದನ ಕಾರ್ಯಕ್ರಮ ಡಿ.ಹೆಚ್.ಓ ಅಧಿಕಾರಿ ಡಾ. ರತಿಕಾಂತ ವಿ ಸ್ವಾಮಿ ನೇತೃತ್ವದಲ್ಲಿ ಕಾರ್ಯಾಗಾರಕ್ಕೆ ಜಿಲ್ಲಾ ಅರ್.ಸಿ.ಎಚ್ ಅಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ ಅವರು ಸಸಿಗೆ ನೀರು ಏರೆಯುವ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡುತ್ತಾ ಅವರು ಹುಟ್ಟಿನಿಂದ ಬರುವ ಡಂಕುತನದ ರೋಗಕ್ಕೆ ಬೆನ್ನು ಮೂಳೆಯ ಅಸಮರ್ಪಕ ಬೆಳವಣಿಗೆಯಿಂದಾಗಿ ಬೆನ್ನು ಅಸಹಜವಾಗಿ ಬೆಳವಣಿಗೆಯಾಗುತ್ತದೆ. ಮಕ್ಕಳ ತಂದೆ-ತಾಯಿಂದರ ಒಂದು ಮನಸ್ಥಿತಿ ಹೇಗೆ ಇರುತ್ತದೆ ಅಂದರೆ ಏನು ಪಾಪ ಮಾಡಿದೋವೊ ಇಂತಹ ಮಕ್ಕಳು ಹುಟ್ಟು ಬಿಟ್ಟಿದೆ ಅಂತ ಅವರಗೆ ಭಾವನೆ ಬರುವುದು ಸಹಜ ಅದರೆ ಯಾರು ಕೂಡ ಇಂತಹ ಲಕ್ಷಣಗಳು ಬಂದರು ಸರಿಯಾದ ಚಿಕಿತ್ಸೆ ಪದ್ದತಿ ತಿಳಿದುಕೊಂಡು ಚಿಕಿತ್ಸೆ ನೀಡಬೇಕು ಹಾಗೆ ನಮ್ಮ ಸೇವೆ ಎಂತಹದು ಅಂದರೆ ನಮ್ಮ ಪುಣ್ಯದ ಕೆಲಸ ದೊಡ್ಡವರಗಿಂತ ಸಣ್ಣ ಮಕ್ಕಳಿಗೆ ಸೇವೆ ಮಾಡುವುದು ಪುಣ್ಯದ ಕೆಲಸ ಬಡವರಿಗೆ ಸೇವೆ ಒದಗಿಸುವ ಕೆಲಸ ನಮ್ಮ ಅರ್ ಬಿ ಎಸ್ ಕೆ ತಂಡದವರು ಮಾಡುತ್ತಿರುವುದು ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಮಕ್ಕಳಿಗೆ ಅನುವು ಮಾಡಿಕೊಡಬೇಕು ಉತ್ತಮ ಸಲಹೆ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಲು ಕರೆ ಕೊಟ್ಟರು. ವೇದಿಕೆ ಮೇಲೆ ಎಂ ಎಸ್ ಆರ್ಥೋ ತಜ್ಞ ವೈದ್ಯರು ಬೆಂಗಳೂರು ಡಾ. ರಾಘವೇಂದ್ರ ರಾವ್. ಅವರು ಈ ಕಾರ್ಯಾಗಾರದ ಉದ್ದೇಶ ಚಿಕಿತ್ಸಾ ಪದ್ದತಿ ಬಗ್ಗೆ ವಿವರಣೆ ನೀಡಿದರು.

Contact Your\'s Advertisement; 9902492681

ಕೆಲವು ಮಕ್ಕಳಿಗೆ ಸರ್ಜರಿ ಮಾಡುವುದರ ಮೂಲಕ ಗುಣ ಪಡಿಸಿದ ಉದಾಹರಣೆಗೆ ಇಲ್ಲಿ ಬಂದಂತಹ ಕಾರ್ಯಾಗಾರದಲ್ಲಿ ಆಶಾ ಭಾವನೆ ವ್ಯಕ್ತಪಡಿಸಿದರು. ಜಿಲ್ಲಾ ಆ.ಕು ಕ. ತರಬೇತಿ ಕೇಂದ್ರದ ಪ್ರಾಂಶುಪಾಲರು ಡಾ. ರವಿಕಾಂತಿ ಎಸ್ ಕ್ಯಾತನಾಳ , ಡಿ ಎನ್ ಓ . ವೀರಮತಿ ಪಾಟೀಲ್, ಸಂಯೋಜಕರು ಬೆಂಗಳೂರು ಶ್ರೀನಿವಾಸ ಅವರು ವೇದಿಕೆ ಇದ್ದರು.

ಅರ್ ಕೆ ಎಸ್ ಕೆ ಸಂಯೋಜಕ ಶಿವಕುಮಾರ್ ಕಾಂಬಳೆ, ಡಿಇ ಐಸಿ ವ್ಯವಸ್ಥಾಪಕ ಕ್ರಿಷ್ಣ ವಗ್ಗೆ, ಹೆಚ್ ಎಸ್ ಅಮೃತರಾವ್, ಡಾ. ಎಂಡಿ ಮತೀನ್ , ಡಾ. ಪ್ರಮೋದ್ ಕುಲಕರ್ಣಿ, ಡಾ. ಗುರುರಾಜ್ ದೇಶಪಾಂಡೆ, ರಾಜಶ್ರೀ ಗುಡ್ಡ, ಶಾರದಾ ರಾಥೋಡ, ಹಾಗೂ ಅರ್ ಬಿ ಎಸ್ ಕೆ ವೈದ್ಯರು ಮತ್ತು ಫಲಾನುಭವಿಗಳು ಇತರರು ಈ ಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೋಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here