ತನ್ನ ಮಗುವನ್ನೆ ಕೊಲೆಗೈದ ಕಿರಾತಕಿ ಕವಿತಾ ಅಲಿಯಾನ್ ಪ್ರತಿಮಾ

0
145

ಮರಿಗೌಡ ಬಾದರದಿನ್ನಿ

ಕೊಪಳ: ಈ ಭೂಮಿ ಮೇಲೆ ಪ್ರೀತಿಗೆ ಸರಿಸಾಟಿಯಾದುದು ಬೇರೊಂದು ಇಲ್ಲ, ತಾಯಿಯೇ ದೇವರು, ತಾಯಿ ಕರುನಾಮಯಿ ಎಂದು ಜಗತ್ತಿನಲ್ಲಿ ಪ್ರಸಿದ್ದ ಪಡೆದ ಪದ ಆದರೆ ಕ್ರೂರಿ ಆಗೋಕೆ ಸಾಧ್ಯವಿಲ್ಲ, ಅನ್ನೊ ನಂಬಿಕೆಗೆ ಕಪ್ಪು ಮಸಿ ಬಳಿದು ಅದಕ್ಕೆ ಸಾಕ್ಷಿಯಾದ ಮಗಳನ್ನೆ ಕೊಲೆಗೈದ ಕಿರಾತಕಿ ಕವಿತಾ ಅಲಿಯಾಸ್ ಪ್ರತಿಮಾಳ ಕೃತ್ಯ, ಸಾವು ಅಂತ ಕಣ್ಣೆದರು ಬಂದ್ರೆ ತಾನು ಸತ್ತ್ರು ಪರವಾಗಿಲ್ಲ ಆದರೆ ನನ್ನ ಮಕ್ಕಳನ್ನ ರಕ್ಷಿಣೆ ಮಾಡ್ತಾಳೆ ಎಂಬ ನಂಬಿಕೆಯ ಮಾತುಗಳಿವೆ. ಆದರೆ ಈ ಎಲ್ಲ ಮಾತುಗಳು ಈ ಪ್ರಕರಣದಲ್ಲಿ ಸುಳ್ಳಾಗಿದ್ದು ಸ್ಪಷ್ಟವಾಗಿ ಗೋಚರಿಸುತ್ತದೆ.

Contact Your\'s Advertisement; 9902492681

ಈ ಘಟನೆಯಲ್ಲಿ ತನ್ನ ಹದಿನಾರು ತಿಂಗಳ ಮಗುವನ್ನೆ ಕಲೆಗೈದ ತಾಯಿಯ ಕೃತ್ಯದ ಬಗ್ಗೆ ಸಾರ್ವಜನಿಕರಲ್ಲಿ ಅಸಹ್ಯ ಪಡುವಂತಾಗಿದೆ ಎಲ್ಲವೂ ನಿಗೂಢ ವಾತಾವರಣ ಸೃಷ್ಟಿಯಾಗಿದೆ ಎಂದರೆ ತಪ್ಪಾಗಲಾರದು ಗಂಡನ ಮೇಲಿನ ಸಿಟ್ಟಿಗೆ ಹೆತ್ತ ಮಗುವನ್ನೇ ಕತ್ತು ಹಿಸುಕಿ ಕೊಂದ ತಾಯಿ ಇದು ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದಲ್ಲಿ  ದಾರುಣ ಘಟನೆ ನಡೆದಿದೆ.

ಸೋಮವಾರ ಗಂಡ ಪೆಟ್ರೋಲ್ ಬಂಕ್​ಗೆ ಕೆಲಸಕ್ಕೆಂದು ತೆರಳಿದ್ದ ಇದೆ ವೇಳೆ ಕವಿತ ತನ್ನದೇ ಹಸುಗೂಸನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.ಅಲ್ಲದೆ, ಬೆಳಗ್ಗೆಯೇ ಕೊಲೆ ಮಾಡಿದ್ದರೂ ಮಗು ಮೃತಪಟ್ಟಿರುವ ವಿಚಾರವನ್ನು ಯಾರಿಗೂ ತಿಳಿಸದೆ ಕಣ್ಣೀರೂ ಹಾಕದೆ ಮಗುವನ್ನೆ ಕೊಲೆಗೈದ ಕಿರಾತಕಿ ಕವಿತಾ ಅಲಿಯಾನ್ ಪ್ರತಿಮಾ ಇಡೀ ದಿನ ಶವದ ಜೊತೆ ಮನೆಯಲ್ಲೇ ಕುಳಿತಿದ್ದಾಳೆ.

ಮಗುವಿನ ಕೊಲೆ ಹಿನ್ನೆಲೆ: ಗಂಡ ದುಡಿಯುತ್ತಿಲ್ಲ ಎಂಬ ಕಾರಣಕ್ಕೆ ತಾಯಿ ತನ್ನ ಕೈಯ್ಯಾರೆ ಹಾಲುಣಿಸಿ ಬೆಳೆಸಿದ 16 ತಿಂಗಳ ಹಸುಗೂಸನ್ನೇ ಅದೆ ಕೈಯಿಂದ ಕತ್ತು ಹಿಸುಕಿ ಉಸಿರು ಗಟ್ಟಿಸಿ ಕೊಂದಿರುವ ಅಮಾನವೀಯ ಘಟನೆ ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದಲ್ಲಿ ನಡೆದಿದೆ.

ಅಭಿನವ ಕೊಲೆಗೀಡಾದ ಮಗು. ಕವಿತಾ ಅಲಿಯಾನ್ ಪ್ರತಿಮಾ (24) ಮಗುವನ್ನೇ ಕೊಂದ ಕಿರಾತಕಿ ತಾಯಿ.

ವಿವಾಹದ ಹಿನ್ನಲೆ: ಕವಿತಾ ನಾಲ್ಕು ವರ್ಷದ ಹಿಂದೆ ಶಶಿ ಎಂಬಾತನನ್ನು ಮದುವೆಯಾಗಿದ್ದರು. ಇವರಿಗೆ ಒಂದೂವರೆ ವರ್ಷದ ಹಿಂದೆ ಮಗು ಆಗಿತ್ತು. ಆದರೆ, ಪೆಟ್ರೋಲ್ ಬಂಕ್​ವೊಂದರಲ್ಲಿ ಕೆಲಸ ಮಾಡುತ್ತಿದ್ದ ಶಶಿ ದುಡಿದ ಹಣವನ್ನು ಮನೆಗೆ ಕೊಡುತ್ತಿರಲಿಲ್ಲ. ಇದರಿಂದ ಬೇಸತ್ತಿದ್ದ ಮಹಿಳೆ ಎರಡು ಮೂರು ಸಲ ಆತ್ಮಹತ್ಯೆಗೆ ಪ್ರಯತ್ನಿಸಿ ಬದುಕುಳಿದಿದ್ದಳು.

ಆದರೆ, ಸೋಮವಾರ ಗಂಡ ಪೆಟ್ರೋಲ್ ಬಂಕ್​ಗೆ ಕೆಲಸಕ್ಕೆಂದು ತೆರಳಿದ್ದ ವೇಳೆ ತನ್ನದೇ ಹಸುಗೂಸನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಅಲ್ಲದೆ, ಬೆಳಗ್ಗೆಯೇ ಕೊಲೆ ಮಾಡಿದ್ದರೂ ಮಗು ಮೃತಪಟ್ಟಿರುವ ವಿಚಾರವನ್ನು ಯಾರಿಗೂ ತಿಳಿಸದೆ ಕಣ್ಣೀರೂ ಹಾಕದೆ ಕಿರಾತಕಿ ಇಡೀ ದಿನ ಶವದ ಜೊತೆ ಮನೆಯಲ್ಲೇ ಕುಳಿತಿದ್ದಾಳೆ.

ಗಂಡ ಶಶಿ ಮನೆಗೆ ಬಂದಾಗ ಮಗು ಮೃತಪಟ್ಟಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದಾನೆ. ತದನಂತರ ವಿಚಾರ ಬೆಳಕಿಗೆ ಬಂದಿದೆ.

ದೂರುದಾರ ಶಶಿಧರ್ ತಂದೆ ಶಂಕ್ರಪ್ಪ ಮುದಗಲ್ ೩೧ ವರ್ಷದ ಈತ ನೀಡಿರುವ ದೂರಿನ್ವಯ ಕಾರಟಗಿ ಪೊಲೀಸ್ ಠಾಣೆ ಕ್ರೈಂ ನಂಬರ್ ೨೧೦/೨೦೧೯ ರಡಿಯಲ್ಲಿ ಭಾರತ ದಂಡ ಸಂಹಿತೆಯ ಕಲಂ ೩೦೨ ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಚಂದ್ರಶೇಖರ್ ಬಿ.ಪಿ ಉಪ ನಿರೀಕ್ಷರು ಗಂಗಾವತಿ ರವರ ಮಾರ್ಗದರ್ಶನದಲ್ಲಿ ಸುರೇಶ ಎಚ್ ತಳವಾರ ಗಂಗಾವತಿ ಗ್ರಾಮೀಣ ವೃತ್ತಿ ನಿರೀಕ್ಷಕರವರ ನೇತೃತ್ವದಲ್ಲಿ ಶರತ್ ಕುಮಾರ ಕಾರಟಗಿ ಪೊಲೀಸ್ ಠಾಣಾಧಿಕಾರಿಗಳೊಳಗೊಂಡು ಆರೋಪಿಯನ್ನು ದಸ್ತಗಿರಿ ಮಾಡಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here