ಜೇವರ್ಗಿ: ಇಲ್ಲಿನ ಚನ್ನೂರ ರಸ್ತೆಯಲ್ಲಿರುವ ಓಂ ಭಾರತ ಗ್ಯಾಸ್ ಗ್ರಾಮೀಣ ವಿತರಕರ ಆಫೀಸಿನ ಮುಂದೆ ಗ್ರಾಹಕರು ಪ್ರತಿಭಟನೆ ನಡೆಸಿದರು. ಗ್ಯಾಸ್ ಸಿಲಿಂಡರ್ ಸಮರ್ಪಕವಾಗಿ ಪೂರೈಕೆ ಮಾಡುತ್ತಿಲ್ಲ. ಗ್ಶಾಸ್ ಗೆ ಹೆಚ್ಚುವರಿಯಾಗಿ 50ರೂ. ತೆಗೆದುಕೊಳ್ಳಲಾಗುತ್ತಿದೆ.
ಗ್ಶಾಸ್ ಆಫೀಸಿನಲ್ಲಿಡದೆ ಗೋಡೌನ್ ದಲ್ಲಿಡಲಾಗುತ್ತಿದೆ. ಗೋಡೌನತನಕ ಹೋಗಿ ಗ್ಶಾಸ್ ತರಬೇಕಾಗುತ್ತಿದೆ. ಮಹಿಳೆಯರುˌ ವ್ರದ್ಧರು ಸರತಿ ಸಾಲಿನಲ್ಲಿ ನಿಂತು ಗ್ಶಾಸ್ ತೆಗೆದುಕೊಂಡರೆ ತಮಗೆ ಬೇಕಾದವರಿಗೆ ಬೇಗನೆ ವಿತರಿಸುತ್ತಾರೆ. ಆಫೀಸ್ ಒಂದು ಕಡೆ ಗೋಡೌನ್ ಮತ್ತೊಂದು ಕಡೆ ಇರುವುದರಿಂದ ಗ್ರಾಹಕರಿಗೆ ತೊಂದರೆಯಾಗುತ್ತಿದೆ.
ಗೋಡೌನ್ ಗೆ ಹೋಗುವ ದಾರಿ ಕೆಸರುˌ ರಾಡಿಗಳಿಂದ ತುಂಬಿ ಹೋಗಿರುತ್ತದೆ. ಕೇಂದ್ರ ಸರಕಾರ ಮನೆ ಮನೆಗೂ ಗ್ಶಾಸ್ ತಲುಪಿಸುತ್ತೇವೆ ಅಂತ ಜಂಬಕೊಚ್ಚಿಕೊಳ್ಳುತ್ತಿದ್ದರೆ ಇಲ್ಲಿ ಮಾತ್ರ ಅಂತ ಯಾವ ಯೋಜನೆಗೂ ತಲೆಕೆಡಿಸಿಕೊಳ್ಳುತ್ತಿಲ್ಲ ಅಂತ ಗ್ರಾಹಕರು ಆರೋಪಿಸಿ ಪ್ರತಿಭಟನೆ ನಡೆಸಿದರು.